ವೈಯಕ್ತಿಕ ಖರ್ಚಿನಲ್ಲಿ ಅಮೆರಿಕ ಪ್ರವಾಸ, ಇದು ಅಧಿಕೃತ ಪ್ರವಾಸವಲ್ಲ: ಎಚ್ ಡಿಕೆ

Recommended Video

      ಒಂದು ವಾರಗಳ ಕಾಲ ಕುಮಾರಸ್ವಾಮಿ ಅಮೆರಿಕ ಪ್ರವಾಸ | Oneindia Kannada

      ಬೀದರ್, ಜೂನ್ 28: ಅಮೆರಿಕಕ್ಕೆ ತೆರಳುತ್ತಿರುವುದು ಅಧಿಕೃತವಾದ ಕೆಲಸದ ಮೇಲೆ ಅಲ್ಲ. ಪ್ರಯಾಣವನ್ನು ವೈಯಕ್ತಿಕ ಖರ್ಚಿನಲ್ಲಿ ಮಾಡುತ್ತಿದ್ದೇನೆ ಎಂದು ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಅಧಿಕೃತವಲ್ಲದ ಕೆಲಸಗಳಿಗೆ ಕುಮಾರಸ್ವಾಮಿ ಅವರು ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ.

      ಆದಿಚುಂಚನಗಿರಿ ಮಠದ ಶಂಕುಸ್ಥಾಪನೆ ಸಲುವಾಗಿ ಭಾಗವಹಿಸಲು ನ್ಯೂಜೆರ್ಸಿಗೆ ತೆರಳುತ್ತಿದ್ದೇನೆ. ಇದು ಅಧಿಕೃತ ಪ್ರವಾಸ ಅಲ್ಲ. ನನ್ನ ವೈಯಕ್ತಿಕ ಖರ್ಚಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಬೀದರ್ ಜಿಲ್ಲೆಯ ಉಜಲಂಬದಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

      ಗ್ರಾಮವಾಸ್ತವ್ಯದ ಶ್ರೇಯ ಯಾರಿಗೆ ಸೇರಬೇಕು ಎಂಬುದಕ್ಕೆ ಉತ್ತರ ನೀಡಿರುವ ಕುಮಾರಸ್ವಾಮಿ, ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ಈ ಕಾರ್ಯಕ್ರಮದ ಶ್ರೇಯ ಸಲ್ಲುತ್ತದೆ. ಸಂಪುಟದಲ್ಲಿ ಸಚಿವರಾಗಿರುವ ಕಾಂಗ್ರೆಸ್ ನವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆದ್ದರಿಂದ ಶ್ರೇಯವು ಸರಕಾರಕ್ಕೆ ಹಾಗೂ ಎಲ್ಲ ಇಲಾಖೆ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ಅವರು ಹೇಳಿದ್ದಾರೆ.

      America travel expenses will bear personally, said CM Kumaraswamy

      ಕುಮಾರಸ್ವಾಮಿ ಅವರು 'ಫೈವ್ ಸ್ಟಾರ್ ಮುಖ್ಯಮಂತ್ರಿ' ಎನ್ನುತ್ತಿರುವ ಬಿಜೆಪಿ ಆರೋಪಕ್ಕೆ ಉತ್ತರಿಸಿರುವ ಅವರು, ಖರ್ಚಿನ ಬಿಲ್ ನ ಏನಾದರೂ ನಾನು ಸರಕಾರಕ್ಕೆ ಸಲ್ಲಿಸಿದ್ದೀನಾ? ಇದು ನನ್ನ ವೈಯಕ್ತಿಕ ವಿಚಾರ. ನನಗೆ ಬಿಜೆಪಿಯ ಸ್ನೇಹಿತರಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯ ಇಲ್ಲ. ನನ್ನ ಮನಸ್ಸಾಕ್ಷಿಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+