ಕೋವಿಡ್ - 19 ಓಡಿಸಲು ದೇವಾಲಯದಲ್ಲಿ ನರಬಲಿ ಕೊಟ್ಟ ಅರ್ಚಕ!

ಭುವನೇಶ್ವರ, ಮೇ 28 : ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ವಿಶ್ವದ ಹಲವು ರಾಷ್ಟ್ರಗಳು ಹರಸಾಹಸ ಪಡುತ್ತಿವೆ. ಒಡಿಶಾದಲ್ಲಿ ಕೊರೊನಾ ಓಡಿಸಲು ಅರ್ಚಕರೊಬ್ಬರು ನರಬಲಿ ಕೊಟ್ಟಿದ್ದು, ಈಗ ಪೊಲೀಸರ ವಶದಲ್ಲಿದ್ದಾರೆ.

Recommended Video

      BJP ಅಂಗೈಯಲ್ಲಿ ಅರಮನೆ, ಮಾಯಾ ಬಜಾರ್ ತೋರಿಸಿದ್ದಾರೆ ಎಂದ ಈಶ್ವರ ಖಂಡ್ರೆ | Oneindia Kannada

      ಒಡಿಶಾದ ಕಟಕ್ ಜಿಲ್ಲೆಯ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಅರ್ಚಕ ದೇವಾಲಯದ ಆವರಣದಲ್ಲಿಯೇ 52 ವರ್ಷದ ವ್ಯಕ್ತಿಯನ್ನು ಬಲಿಕೊಟ್ಟಿದ್ದಾರೆ. ಅರ್ಚಕ ಈಗ ಪೊಲೀಸರ ವಶದಲ್ಲಿದ್ದು, ಕೋವಿಡ್ - 19 ಓಡಿಸುಲು ಬಲಿಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

      70 ವರ್ಷದ ಅರ್ಚಕ ನರಬಲಿ ಕೊಟ್ಟ ಬಳಿಕ ಪೊಲೀಸರ ಮುಂದೆ ಶರಣಾಗಿದ್ದು ತಾನು ಅಪರಾಧ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಅರ್ಚಕನ ಹೇಳಿಕೆ ಆಧರಿಸಿ ದೇವಾಲಯಕ್ಕೆ ತೆರಳಿ ತಪಾಸಣೆ ನಡೆಸಿದ ಪೊಲೀಸರು ವ್ಯಕ್ತಿಯ ಶವ ಸಿಕ್ಕಿದೆ.

       Priest Performs Human Sacrifice To End COVID 19 Pandemic

      "ಕನಸಿನಲ್ಲಿ ಬಂದ ದೇವರು ತನಗೆ ನರಬಲಿ ನೀಡುವಂತೆ ಸೂಚಿಸಿದ. ನರಬಲಿ ಕೊಟ್ಟರೆ ಕೋವಿಡ್ - 19 ಸಂಪೂರ್ಣವಾಗಿ ಹೋಗುತ್ತದೆ ಎಂದು ದೇವರು ಹೇಳಿದ್ದ" ಎಂದು ಅರ್ಚಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

      ಬುಧವಾರ ರಾತ್ರಿ ಬ್ರಾಹ್ಮಿಣಿ ದೇವಿ ದೇವಾಲಯದ ಆವರಣದಲ್ಲಿ ಸರೋಜ್ ಕುಮಾರ್ ಪ್ರಧಾನ್ ಹತ್ಯೆಯಾಗಿದೆ. ಆದರೆ, ಸ್ಥಳೀಯರು ಅರ್ಚಕ ಮತ್ತು ಸರೋಜ್ ಕುಮಾರ್ ನಡುವೆ ಹಳೆಯ ದ್ವೇಷವಿತ್ತು ಎಂದು ಹೇಳಿದ್ದಾರೆ.

      ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೊಂಡಿದ್ದು, ಹತ್ಯೆಗೆ ಬಳಸಿದ ಗರಗಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+