ಕ್ವಾರಂಟೈನ್ ನಲ್ಲಿರುವ ವಲಸೆ ಕಾರ್ಮಿಕರಿಗೆ ಒಡಿಶಾದಲ್ಲಿ ಸಿಗುತ್ತಿದೆ ವಿಶೇಷ ತರಬೇತಿ!

ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಬಲಪಡಿಸಲು ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವ ಸಾವಿರಾರು ವಲಸೆ ಕಾರ್ಮಿಕರನ್ನು ಸಮುದಾಯ ಆರೋಗ್ಯ ಕಾರ್ಯಕರ್ತರನ್ನಾಗಿ ಪರಿವರ್ತಿಸಲು ಒಡಿಶಾದ ಗಂಜಾಂ ಜಿಲ್ಲಾಡಳಿತ ವಿಶೇಷ ತರಬೇತಿ ನೀಡಲು ಪ್ರಾರಂಭಿಸಿದೆ.

Recommended Video

      ಈ ಇಬ್ಬರೂ ಸಚಿವರಿಗೆ ಕೊರೊನಾ ಭಯವೇ ಇಲ್ಲ..ಇದ್ದಿದ್ರೆ ಹೀಗೆ ಮಾಡ್ತಿರ್ಲಿಲ್ಲ | Ramanagara

      ''ವಲಸೆ ಕಾರ್ಮಿಕರನ್ನು ಸಮುದಾಯ ಆರೋಗ್ಯ ಕಾರ್ಯಕರ್ತರನ್ನಾಗಿ ಪರಿವರ್ತಿಸುವ ಪ್ರಯೋಗವನ್ನು ಇತರೆ ಜಿಲ್ಲೆಗಳಲ್ಲೂ ಮಾಡಲಾಗುವುದು'' ಎಂದು ಒಡಿಶಾ ಸರ್ಕಾರದ ವಕ್ತಾರ ಸುಬ್ರೋಟೋ ಬಾಗ್ಚಿ ಹೇಳಿದ್ದಾರೆ.

      ಗಂಜಾಂ ಜಿಲ್ಲಾ ಕಲೆಕ್ಟರ್ ವಿಜಯ್ ಅಮೃತ ಕುಲಂಗೆ ಮಾತನಾಡಿ, ''ಬೆಳಗ್ಗಿನ ಉಪಹಾರದ ನಂತರ ಕಾರ್ಮಿಕರಿಗೆ ವಿಶೇಷ ಕೋವಿಡ್-19 ತರಗತಿಗಳನ್ನು ನಡೆಸಲಾಗುತ್ತಿದೆ'' ಎಂದರು.

      Coronavirus: Special Training For Quarantined Migrants in Odisha

      ಕೊರೊನಾ ವೈರಸ್ ಹರಡುವಿಕೆಯ ಕಾರಣಗಳು ಮತ್ತು ಸೋಂಕನ್ನು ತಡೆಯುವ ನೈರ್ಮಲ್ಯ ಕ್ರಮಗಳ ಬಗ್ಗೆ ವಲಸೆ ಕಾರ್ಮಿಕರು ಕಲಿಯುತ್ತಿದ್ದಾರೆ. ನಿಯಮಿತವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಆಗಾಗ ಸೋಪಿನಿಂದ ಕೈತೊಳೆಯುವುದು ಅಗತ್ಯವೆಂದು ವಲಸೆ ಕಾರ್ಮಿಕರು ಅರಿತಿದ್ದಾರೆ.

      ಮೇ 3 ರಿಂದ ಒಡಿಶಾದಲ್ಲಿ 154 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಎಲ್ಲಾ ಸೋಂಕಿತರು ವಲಸೆ ಕಾರ್ಮಿಕರಾಗಿದ್ದಾರೆ. ಸೋಂಕಿತರನ್ನು ಕ್ವಾರಂಟೈನ್ ನಲ್ಲಿ ಇಟ್ಟಿರುವುದರಿಂದ ಸಮುದಾಯದ ಮಟ್ಟಿಗೆ ಕೊರೊನಾ ವೈರಸ್ ಹರಡಿಲ್ಲ.

      ಸದ್ಯ ವಲಸೆ ಕಾರ್ಮಿಕರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಆರೋಗ್ಯಕರ ದಿನಚರಿಯನ್ನು ಅನುಸರಿಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ ದೈಹಿಕ ವ್ಯಾಯಾಮ ಮತ್ತು ಯೋಗಾಭ್ಯಾಸ ಮಾಡುತ್ತಿದ್ದಾರೆ. ಹಾಗೇ, ಅವರು ಕ್ವಾರಂಟೈನ್ ನಲ್ಲಿರುವ ಶಿಕ್ಷಣ ಸಂಸ್ಥೆಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

      ಇಲ್ಲಿಯವರೆಗೂ ಸುಮಾರು 40 ಸಾವಿರ ವಲಸೆ ಕಾರ್ಮಿಕರು ಸೂರತ್ ನಿಂದ ಒಡಿಶಾಗೆ ಬಂದಿದ್ದಾರೆ. ಅವರೆಲ್ಲರನ್ನೂ 2,983 ಕೇಂದ್ರಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ..

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+