ಪಬ್ ಜಿ ಆಡಲು ಇಂಟರ್ನೆಟ್ ಗೆ ಹಣ ನೀಡಲಿಲ್ಲ ಎಂದು ಯುವಕ ಆತ್ಮಹತ್ಯೆ

ಭೋಪಾಲ್, ಮೇ 25: ಪಬ್ ಜಿ ಗೇಮ್ ಆಡಲು ಮೊಬೈಲ್ ಇಂಟರ್ನೆಟ್ ಗೆ ದುಡ್ಡು ಕೊಡಲಿಲ್ಲ ಎಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಮಧ್ಯಪ್ರದೇಶದಲ್ಲಿ ನಡೆದಿದೆ.

Recommended Video

      ಅಯ್ಯೋ ಪಾಪ ಪೊಲೀಸರಿಗೆ ಹೊಡೆದವರ ಕಥೆ ಏನಾಗಿದೆ ನೋಡಿ..! | Madhya Pradesh

      ರಾಜೇಶ್ ಎನ್ನುವ ಇಪ್ಪತ್ತು ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭೋಪಾಲ್ ನ ಭಗೇಶವಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

      ಪಬ್ ಜಿ ಮೊಬೈಲ್ ಗೇಮ್ ಗೆ ಅಂಟಿಕೊಂಡಿದ್ದ ಯುವಕ ಇತ್ತೀಚೆಗೆ ಮನೆಯವರ ಬುದ್ದಿ ಮಾತಿಗೆ ಕಿವಿಗೊಡದೇ ಸದಾ ಮೊಬೈಲ್ ಲಿ ಮುಳುಗಿರುತ್ತದ್ದ. ಸೋಮವಾರ ಇಂಟರ್ನೆಟ್ ಗೆ ಪಾಲಕರು ಹಣ ನೀಡಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

      Young Boy Commit Suicide For Parents Reject Data Pack

      ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಆಯುಕ್ತ ಎಸ್ ಶರ್ಮಾ ಎಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಪಬ್ ಜಿ ಮೊಬೈಲ್ ಗೇಮ್ ಚಟಕ್ಕೆ ಇತ್ತೀಚೆಗೆ ಮಕ್ಕಳು, ಯುವಕರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+