ವಿಡಿಯೋ: ಟ್ರ್ಯಾಕ್ಟರ್ ಚಲಾಯಿಸಿ ಮದುವೆ ಸ್ಥಳಕ್ಕೆ ಬಂದ ಸಿಂಗಾರಗೊಂಡ ವಧು

ಭೋಪಾಲ್ ಮೇ 28: ಇತ್ತೀಚೆಗೆ ಮದುವೆ ಸಮಾರಂಭಗಳು ವಿಭಿನ್ನತೆ ಪಡೆದುಕೊಳ್ಳುತ್ತಿವೆ. ಕಾರು, ಕುದುರೆಯಲ್ಲಿ ವರ ಮದುವೆ ಸಮಾರಂಭಕ್ಕೆ ಆಗಮಿಸುವ ರೂಢಿ ಈಗ ಬದಲಾಗಿದೆ. ಈಗೇನಿದ್ದರೂ ವಧು ಹೇಗೆ ಮದುವೆ ಮನೆಗೆ ಆಗಮಿಸುತ್ತಾಳೆ ಎನ್ನುವುದು ಟ್ರೆಂಡ್ ಆಗಿದೆ. ಇತ್ತೀಚಿಗೆ ಹರಿಯಾಣದಲ್ಲಿ ವಧು ಕೂಡ ವರನಿಗೇನು ಕಡಿಮೆ ಇಲ್ಲ ಎಂಬಂತೆ ಕುದುರೆ ಮೇಲೆ ಮೆರವಣಿಗೆ ಮಾಡಲಾಗಿತ್ತು. ಇದೀಗ ಟ್ರ್ಯಾಕ್ಟರ್ ಸರದಿ ಶುರುವಾಗಿದೆ. ಮಧ್ಯಪ್ರದೇಶದಲ್ಲಿ ಟ್ಯ್ರಾಕ್ಟರ್ ಮೇಲೆ ವಧುವನ್ನು ಮೆರವಣಿಗೆ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಧ್ಯಪ್ರದೇಶದ ಬೇತುಲ್‌ನಲ್ಲಿ ವಧು ತನ್ನ ಮದುವೆ ಮೆರವಣಿಗೆ ವೇಳೆ ಟ್ರ್ಯಾಕ್ಟರ್‌ನಲ್ಲಿ ಆಗಮಿಸಿರುವುದು ಕಂಡುಬಂದಿದೆ. ಈ ಅಸಾಮಾನ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ವಧು ಭಾರತಿ ತಾಗ್ಡೆ ಅವರು ಕಪ್ಪು ಕನ್ನಡಕವನ್ನು ಧರಿಸಿ ಟ್ರಾಕ್ಟರ್‌ನಲ್ಲಿ ಮದುವೆ ಮಂಟಪಕ್ಕೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಟ್ರ್ಯಾಕ್ಟರ್‌ನಲ್ಲಿ ಆಕೆಯ ಇಬ್ಬರು ಸಹೋದರರು ಸಹ ಇರುವುದನ್ನು ಕಾಣಬಹುದು. ವಧುವಿನ ಪ್ರವೇಶವು ಮದುವೆ ಮೆರವಣಿಗೆಯಲ್ಲಿ ಎಲ್ಲರನ್ನು ಆಶ್ಚರ್ಯಗೊಳಿಸಿತು.

Video: Bride Comes Driving Tractor To Wedding Venue In Madhya Pradesh

ನಿನ್ನೆ ಸಂಜೆ ಬೇತುಲ್ ಜಿಲ್ಲೆಯ ಜಾವ್ರಾ ಗ್ರಾಮದಲ್ಲಿ ಈ ಮದುವೆ ನಡೆದಿದೆ. ವಧು ಪಲ್ಲಕ್ಕಿ ಅಥವಾ ಕಾರಿನಲ್ಲಿ ಪ್ರವೇಶಿಸುವ ಪ್ರವೃತ್ತಿ ಹಳೆಯದಾಗಿದೆ. ಜೊತೆಗೆ ಇಂಥಹ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳುವುದು ಇಂದಿಗೆ ಟ್ರೆಂಡ್ ಆಗಿದೆ ಎಂದು ಭಾರತಿ ತಗ್ದೆ ತಾಯಿ ಶ್ರೀಮತಿ ತಗ್ಡೆ ಹೇಳಿದರು.

ಏಪ್ರಿಲ್ 20ರಂದು ಹರಿಯಾಣದಲ್ಲಿ ವಧು ಕುದುರೆ ಮೇಲೆ ಮೆರವಣಿಗೆ ಮಾಡಿರುವುದು ಕಂಡುಬಂದಿತ್ತು. ಇಲ್ಲಿ ರಮೇಶ್ ಕುಮಾರ್ ಅವರು ತಮ್ಮ ಮಗಳ ಮದುವೆಯಲ್ಲಿ ಪುತ್ರರಂತೆ ಮಗಳನ್ನು ಕುದುರೆ ಮೇಲೆ ಮೆರವಣಿಗೆ ಮಾಡಿಸಿದ್ದಾರೆ. ಇದರ ಮೂಲಕ ಪುತ್ರರಿಗಿಂತ ಹೆಣ್ಣು ಮಕ್ಕಳು ಕಡಿಮೆ ಇಲ್ಲ ಎಂಬ ಸಂದೇಶ ನೀಡಿದ್ದಾರೆ.

Video: Bride Comes Driving Tractor To Wedding Venue In Madhya Pradesh

ಈ ವರ್ಷದ ಆರಂಭದಲ್ಲಿ, ಹರಿಯಾಣದ ಅಂಬಾಲಾದಲ್ಲಿ ನಡೆದ ಮದುವೆಯೊಂದರಲ್ಲಿ ವಧು ತನ್ನ ಕೈಯಲ್ಲಿ ಕತ್ತಿಯೊಂದಿಗೆ ಕುದುರೆಯ ಮೇಲೆ ಸವಾರಿ ಮಾಡುತ್ತಾ ವರನ ಮನೆಗೆ ಹೋಗಿ ಮದುವೆಯಾದ್ದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+