ಬಿಜೆಪಿ ಸಂಸದೆ ಪ್ರಗ್ಯಾ ಮನೆಯಲ್ಲಿ ಅನುಮಾನಾಸ್ಪದ ಪತ್ರ ಪತ್ತೆ
Recommended Video
ಭೋಪಾಲ್, ಜನವರಿ 14: ಮಧ್ಯಪ್ರದೇಶದ ಭೋಪಾಲ್‌ನ ಸಂಸದೆ ಪ್ರಗ್ಯಾ ಠಾಕೂರ್ ನಿವಾಸಕ್ಕೆ ಅನುಮಾನಾಸ್ಪದ ಪತ್ರ ಮತ್ತು ಪೌಡರ್ ಹೋಲುವ ಪದಾರ್ಥ ರವಾನೆಯಾಗಿದೆ.
ಉರ್ದು ಭಾಷೆಯಲ್ಲಿ ಪತ್ರವನ್ನು ಬರೆಯಲಾಗಿದೆ. ಪತ್ರದೊಂದಿಗೆ ಪೌಡರ್‌ನಂತ ಪದಾರ್ಥವೂ ಸಿಕ್ಕಿದೆ. ಈ ಪತ್ರವನ್ನು ನೋಡಿದ ಪ್ರಗ್ಯಾ ಠಾಕೂರ್ ಅವರ ನಿವಾಸದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಭೋಪಾಲ್‌ನ ಹಿರಿಯ ಪೊಲೀಸ್ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ಪತ್ರ ಮತ್ತು ಪೌಡರ್ ಹೋಲುವ ಪದಾರ್ಥವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರಿಶೀಲನೆಗಾಗಿ ಕಳುಹಿಸಿದ್ದಾರೆ. ಈ ಪತ್ರದಲ್ಲಿ ಪ್ರಗ್ಯಾ ಠಾಕೂರ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಚಿತ್ರಗಳಿದ್ದು, ಅವುಗಳಿಗೆ 'ಇಂಟು' ಆಕಾರದಲ್ಲಿ ಕೆಂಪು ಶಾಹಿಯಲ್ಲಿ ಗೆರೆಗಳನ್ನು ಎಳೆಯಲಾಗಿದೆ.

'ಈ ಪತ್ರವನ್ನು ಭಯೋತ್ಪಾದಕರು ಕಳುಹಿಸಿರಬಹುದು. ಆದರೆ ಅಂತಹ ಬೆದರಿಕೆಗಳಿಗೆ ನಾನು ಜಗ್ಗುವವಳಲ್ಲ' ಎಂದು ಪ್ರಗ್ಯಾ ಠಾಕೂರ್ ಪ್ರತಿಕ್ರಿಯಿಸಿದ್ದಾರೆ.
ಭೋಪಾಲ್ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 (ಉದ್ದೇಶಪೂರ್ವಕವಾಗಿ ತೀವ್ರ ಗಾಸಿಗಳಿಸುವುದು) ಮತ್ತು 507ರ ಅಡಿಯಲ್ಲಿ (ಅನಾಮಿಕ ಸಂವಹನಕಾರನ ಮೂಲಕ ಅಪರಾಧದ ಚಟುವಟಿಕೆ) ಅಪವರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.












Click it and Unblock the Notifications