ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಪಟ್ಟ ಬೇಕೆಂದು ರಾಹುಲ್ ಗಾಂಧಿ ಎಂದಿಗೂ ಹೇಳಿಲ್ಲ: ಕಮಲ್ ನಾಥ್

|
Google Oneindia Kannada News

Recommended Video

ಪ್ರಧಾನಿ ಪಟ್ಟ ಬೇಕೆಂದು ರಾಹುಲ್ ಗಾಂಧಿ ಎಂದಿಗೂ ಹೇಳಿಲ್ಲ..! | Oneindia Kannada

ಭೋಪಾಲ್, ಡಿಸೆಂಬರ್ 17: ರಾಹುಲ್ ಗಾಂಧಿಯವರೇ ದೇಶದ ಪ್ರಧಾನಿಯಾಗಬೇಕು ಎಂದು ಡಿಎಂಕೆ ಮುಖಂಡ ಎಂ ಕೆ ಸ್ಟಾಲಿನ್ ನೀಡಿದ ಹೇಳಿಕೆಗೆ ಮಧ್ಯಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಕಮಲ್ ನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

"ಪ್ರಧಾನಿ ಯಾರಾಗಬೇಕೆಂದು ಯೋಚಿಸುವುದಕ್ಕೆ ಇದು ಸರಿಯಾದ ಸಮಯವಲ್ಲ. ಆ ಬಗ್ಗೆ ಕಾಂಗ್ರೆಸ್ ಇನ್ನೂ ಯೋಚಿಸಿಲ್ಲ. ಸ್ವತಃ ರಾಹುಲ್ ಗಾಂಧಿಯವರೂ ತಾವೇ ಪ್ರಧಾನಿಯಾಗಬೇಕೆಂದು ಎಂದಿಗೂ ಹೇಳಿಲ್ಲ" ಎಂದು ಖಾಸಗಿ ಚಾನೆಲ್ ವೊಂದಕ್ಕೆ ಕಮಲ್ ನಾಥ್ ಪ್ರತಿಕ್ರಿಯೆ ನೀಡಿದರು.

ಕರ್ನಾಟಕ ರಾಜಕಾರಣದ ಮೇಲೆ ರಾಹುಲ್ ಪ್ರಭಾವ ಎಷ್ಟಿದೆ? ಕರ್ನಾಟಕ ರಾಜಕಾರಣದ ಮೇಲೆ ರಾಹುಲ್ ಪ್ರಭಾವ ಎಷ್ಟಿದೆ?

"ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕೆಲವು ಪಕ್ಷಗಳು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎನ್ನುತ್ತಿದೆಯಷ್ಟೆ. ಕಾಂಗ್ರೆಸ್ ಎಂದಿಗೂ ಈ ಬಗ್ಗೆ ಅಧಿಕೃತವಾಗಿ ಹೇಳಿಲ್ಲ" ಎಂದು 72 ವರ್ಷ ವಯಸ್ಸಿನ ಕಮಲ್ ನಾಥ್ ಹೇಳಿದ್ದಾರೆ.

Rahul Gandhi never said he wants PM post, says Kamal Nath

"ಪ್ರಧಾನಿ ಯಾರು ಎಂಬ ಬಗ್ಗೆ ಲೋಕಸಭಾ ಚುನಾವಣೆಯ ನಂತರ ಏರ್ಪಡುವ ಸನ್ನಿವೇಶವನ್ನು ಆಧರಿಸಿ ನಿರ್ಧರಿಸಬೇಕಿದೆ. ಎಲ್ಲಾ ನಾಯಕರೂ ಒಗ್ಗಟ್ಟಿನಿಂದ ಒಂದು ಹೆಸರನ್ನು ಆರಿಸಿದರೆ ಅದಕ್ಕೆ ಬೆಂಬಲವಿರುತ್ತದೆ. ಅದಕ್ಕೂ ಮುನ್ನವೇ ಪ್ರಧಾನಿ ಯಾರು ಎಂಬ ಬಗ್ಗೆ ನಿರ್ಧರಿಸುವುದು ಅಪ್ರಬುದ್ಧವೆನ್ನಿಸುತ್ತದೆ" ಎಂದು ಕಮಲ್ ನಾಥ್ ಹೇಳಿದರು.

ಪಪ್ಪು ಬನ್ ಗಯಾ ಪಪ್ಪಾ: ಕೇಂದ್ರ ಸಚಿವರಿಂದ ರಾಹುಲ್ ಗುಣಗಾನಪಪ್ಪು ಬನ್ ಗಯಾ ಪಪ್ಪಾ: ಕೇಂದ್ರ ಸಚಿವರಿಂದ ರಾಹುಲ್ ಗುಣಗಾನ

ಇದಕ್ಕೂ ಮುನ್ನ ಡಿಎಂಕೆ ಪಕ್ಷದ ನಾಯಕ ಎಂ ಕೆ ಸ್ಟಾಲಿನ್, 'ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕು' ಎಂಬ ಹೇಳಿಕೆ ನೀಡಿದ್ದರು.

English summary
Congress president Rahul Gandhi never said he wants the prime minister's post, Congress leader Kamal Nath Said to media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X