• search
 • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಲಿ ಇರೋದು ಒಂದೇ, ಅದು ಕಾಡಿನಲ್ಲಿದೆ: ಸಿಂಧಿಯಾಗೆ ದಿಗ್ವಿಜಯ್ ಸಿಂಗ್ ಉತ್ತರ

|
Google Oneindia Kannada News

ಬೋಪಾಲ್, ಜುಲೈ 3: ಬಿಜೆಪಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಮಾತಿಗೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ತಿರುಗೇಟು ನೀಡಿದ್ದಾರೆ. 'ಟೈಗರ್ ಅಭಿ ಝಿಂದಾ ಹೈ' ಎಂದಿದ್ದ ಮಾಜಿ ಕೇಂದ್ರ ಸಚಿವ, ಸಿಂಧಿಯಾಗೆ 'ಹುಲಿ ಇರೋದು ಒಂದೇ' ಅದು ಕಾಡಿನಲ್ಲಿದೆ ಎಂದಿದ್ದಾರೆ.

Recommended Video

   Virat Kohli improvises Hardik Pandya's Flying push-ups and challenges him | Oneindia Kannada

   ಶುಕ್ರವಾರ, ದಿಗ್ವಿಜಯ್ ಸಿಂಗ್ ಎರಡು ಟ್ವೀಟ್ ಮಾಡಿದ್ದಾರೆ, ಮೊದಲಿಗೆ ಅವರು 'ಆಗ ನಾನು ಮತ್ತು ಶ್ರೀಮಂತ ಮಾಧವರಾವ್ ಸಿಂಧಿಯಾ ಜಿ ಹುಲಿಯನ್ನು ಬೇಟೆಯಾಡುತ್ತಿದ್ದೆವು. ಇಂದಿರಾ ಜಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಪರಿಚಯಿಸಿದಾಗಿನಿಂದ, ನಾನು ಈಗ ಹುಲಿಯನ್ನು ಮಾತ್ರ ಕ್ಯಾಮರಾಕ್ಕೆ ತರುತ್ತೇನೆ ಎಂದಿದ್ದಾರೆ.

   ಸೈಕಲ್ ಏರಿದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಎಫ್ಐಆರ್!ಸೈಕಲ್ ಏರಿದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಎಫ್ಐಆರ್!

   ಇದೇ ವೇಳೆ ಇನ್ನೊಂದು ಟ್ವೀಟ್‌ನಲ್ಲಿ ' ಹುಲಿಯ ಗುಣ ತಿಳಿದಿದೆ, ಕಾಡಿನಲ್ಲಿ ಕೇವಲ ಒಂದು ಹುಲಿ ಮಾತ್ರ ಇರುತ್ತದೆ' ಎಂದು ಸಿಂಧಿಯಾ ಅವರ 'ಟೈಗರ್ ಅಭಿ ಝಿಂದಾ ಹೈ' ಹೇಳಿಕೆಗೆ ದಿಗ್ವಿಜಯ್ ಸಿಂಗ್ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.

   ವಾಸ್ತವವಾಗಿ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾಂಗ್ರೆಸ್ಸಿನ ಕಮಲ್ ನಾಥ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹುಲಿ ಇನ್ನೂ ಜೀವಂತವಾಗಿದೆ ಎಂದು ನಿರಂತರವಾಗಿ ಹೇಳುತ್ತಲೇ ಇದ್ದರು. ಅದಕ್ಕಾಗಿಯೇ ದಿಗ್ವಿಜಯ್ ಸಿಂಗ್, ಸಿಂಧಿಯಾ ಮತ್ತು ಶಿವರಾಜ್ ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ಕಾಡಿನಲ್ಲಿ ಒಂದೇ ಹುಲಿ ಮಾತ್ರ ವಾಸಿಸುತ್ತದೆ ಎಂದು ಹೇಳಿದ್ದಾರೆ.

   ನಿನ್ನೆಯಷ್ಟೇ ಮಧ್ಯಪ್ರದೇಶ ಸಂಪುಟ ವಿಸ್ತರಣೆಯಾಗಿದ್ದು, ಶಿವರಾಜ್ ಸಿಂಗ್ ಚೌಹಾಣ್ 28 ಸಚಿವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. 28 ಸಚಿವರ ಪೈಕಿ 14 ಮಂದಿ ಸಿಂಧಿಯಾ ಬೆಂಬಲಿಗರಾಗಿದ್ದಾರೆ.

   ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಿಂಧಿಯಾ, ದಿಗ್ವಿಜಯ್ ಸಿಂಗ್ ಅಥವಾ ಕಮಲನಾಥ್ ಅವರಿಂದ ನನಗೆ ಯಾವುದೇ ಪ್ರಮಾಣ ಪತ್ರ ಬೇಕಾಗಿಲ್ಲ, ಕಳೆದ 15 ತಿಂಗಳಲ್ಲಿ ಅವರು ರಾಜ್ಯವನ್ನು ಯಾವು ರೀತಿ ಕೊಳ್ಳೆ ಹೊಡೆದಿದ್ದಾರೆ ಎಂಬ ಬಗ್ಗೆ ಜನರಿಗೆ ತಿಳಿದಿದೆ. ಅವರಿಗೋಸ್ಕರ ಅವರಿಬ್ಬರು ಎಲ್ಲವನ್ನು ಮಾಡಿದ್ದಾರೆ, ಅವರು ನೀಡಿದ್ದ ಭರವಸೆಗಳನ್ನು ಜನ ಪರಿಶೀಲನೆ ಮಾಡಲಿದ್ದಾರೆ, ನಾನು ಬೇರೆ ಏನು ಮಾತನಾಡುವುದಿಲ್ಲ ಟೈಗರ್ ಅಭಿ ಜಿಂದಾ ಹೈ ಎಂದು ಮಾತ್ರ ಹೇಳುತ್ತೇನೆ ಎಂದಿದ್ದರು.

   English summary
   In response to Scindia's 'Tiger Zinda Hai' comment, now former Chief Minister Digvijay Singh has said that you know the character of a lion, only one lion lives in a forest.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X