ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮೀನು ಉಳುಮೆ ಮಾಡಿದ ಬುಡಕಟ್ಟು ಮಹಿಳೆಗೆ ಬೆಂಕಿ ಹಚ್ಚಿದ ದುರುಳರು

|
Google Oneindia Kannada News

ಭೋಪಾಲ್‌, ಜು.4: ತನ್ನ ಕುಟುಂಬಕ್ಕೆ ಸರ್ಕಾರಿ ಕಲ್ಯಾಣ ಯೋಜನೆಯಲ್ಲಿ ಸಿಕ್ಕಿದ್ದ ಭೂಮಿಯನ್ನು ಪಡೆದುಕೊಂಡ 38 ವರ್ಷದ ಬುಡಕಟ್ಟು ಮಹಿಳೆಗೆ ಪುರುಷರ ಗುಂಪೊಂದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಗುನಾ ಜಿಲ್ಲೆಯ ಬುಡಕಟ್ಟು ಮಹಿಳೆ ರಾಂಪ್ಯಾರಿ ಸಹರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮೂವರು ಪುರುಷರು ಆಕೆಗೆ ಮೈದಾನದಲ್ಲಿ ಬೆಂಕಿ ಹಚ್ಚಿದ್ದು, ನಂತರ ವಿಡಿಯೋ ಮಾಡಿದ್ದಾರೆ. ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಂಪಿ: ಸಿನಿಮಾ ಸ್ಟೈಲ್‌ನಲ್ಲಿ ಕಾಲೇಜಿನ ಟೆರೇಸ್ ಮೇಲೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ ಎಂಪಿ: ಸಿನಿಮಾ ಸ್ಟೈಲ್‌ನಲ್ಲಿ ಕಾಲೇಜಿನ ಟೆರೇಸ್ ಮೇಲೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಮಹಿಳೆಯ ಪತಿ ಅರ್ಜುನ್ ಸಹಾರಿಯಾ ತಮ್ಮ ಪತ್ನಿ ಸುಟ್ಟ ಗಾಯಗಳೊಂದಿಗೆ ನೋವಿನಿಂದ ನರಳುತ್ತಿರುವುದನ್ನು ಮೈದಾನದಲ್ಲಿ ಕಂಡು ಆತಂಕಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಪಂಕಜ್ ಶ್ರೀವಾಸ್ತವ ತಿಳಿಸಿದ್ದಾರೆ.

ಅನೇಕ ವರ್ಷಗಳ ಹಿಂದೆ ಮಧ್ಯಪ್ರದೇಶ ಸರ್ಕಾರದ ಕಲ್ಯಾಣ ಯೋಜನೆಯಡಿ ಸಹಾರಿಯಾ ಅವರ ಕುಟುಂಬಕ್ಕೆ ಮಂಜೂರಾದ 6 ಬಿಘಾ ಭೂಮಿಯನ್ನು ಈಗ ಉಳುಮೆ ಮಾಡಿದ್ದಕ್ಕಾಗಿ ಒಬಿಸಿ ಸಮುದಾಯಕ್ಕೆ ಸೇರಿದ ಮೂವರು ಪುರುಷರು ತನಗೆ ಬೆಂಕಿ ಹಚ್ಚಿದ್ದಾರೆ ಎಂದು ಶ್ರೀಮತಿ ಸಹಾರಿಯಾ ತನ್ನ ಪತಿಗೆ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Miscreants Set a Fire Fir Tribal Woman for Plowing the Land

ಮಂಜೂರಾದಾಗ ಭೂಮಿಯನ್ನು ಒಬಿಸಿ ಪುರುಷರು ಸ್ವಾಧೀನಪಡಿಸಿಕೊಂಡರು. ಇತ್ತೀಚಿಗೆ ಅದನ್ನು ಸ್ಥಳೀಯ ಕಂದಾಯ ಇಲಾಖೆಯು ಒತ್ತುವರಿದಾರರಿಂದ ಮುಕ್ತಗೊಳಿಸಿತು ಮತ್ತು ಸಹಾರಿಯಾ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಸಹಾರಿಯಾ ಪತಿ ಅವರು ತಮ್ಮ ಜಮೀನಿಗೆ ಹೋಗುತ್ತಿದ್ದಾಗ, ಪ್ರತಾಪ್, ಹನುಮತ್ ಮತ್ತು ಶ್ಯಾಮ್ ಕಿರಾರ್ ಮತ್ತು ಅವರ ಕುಟುಂಬ ಸದಸ್ಯರು ಟ್ರ್ಯಾಕ್ಟರ್‌ನಲ್ಲಿ ಹೋಗುವುದನ್ನು ನೋಡಿದರು. ಆಗ ಆ ಕಡೆಯಿಂದ ಹೊಗೆ ಬರುತ್ತಿರುವುದನ್ನು ಕಂಡು ಅರ್ಜುನ್ ಸಹಾರಿಯಾ ಮೈದಾನದತ್ತ ಓಡಿದರು. ಅಲ್ಲಿಗೆ ತಲುಪಿದಾಗ ಗಾಯಗೊಂಡಿದ್ದ ಪತ್ನಿಯನ್ನು ಕಂಡರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಗಂಡು ಮಗುವಿನ ಜನ್ಮ ನೀಡಿಲ್ಲ ಎಂದು ಮಹಿಳೆ ಮೇಲೆ ಹಲ್ಲೆಗಂಡು ಮಗುವಿನ ಜನ್ಮ ನೀಡಿಲ್ಲ ಎಂದು ಮಹಿಳೆ ಮೇಲೆ ಹಲ್ಲೆ

ಅರ್ಜುನ್ ಸಹಾರಿಯಾ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಮತ್ತು ಎಫ್‌ಐಆರ್ ಹೆಸರಿಸಲಾದ ಮೂವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಪಂಕಜ್ ಶ್ರೀವಾಸ್ತವ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮುರನ್ನು ಮುಂದಿಟ್ಟುಕೊಂಡ ಪಕ್ಷವೊಂದು ಈಗ ಬುಡಕಟ್ಟು ಮಹಿಳೆಯ ಮೇಲೆ ಇಂತಹ ಭೀಕರ ದೌರ್ಜನ್ಯಕ್ಕೆ ಅವಕಾಶ ನೀಡಿದೆ. ಇದು ನಾಚಿಕೆಗೇಡು ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.

ಮೂವರು ವ್ಯಕ್ತಿಗಳ ಕುಟುಂಬದಿಂದ ತನಗೆ ಜೀವ ಬೆದರಿಕೆ ಇದೆ ಎಂದು ಅರ್ಜುನ್ ಸಹಾರಿಯಾ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಬಗ್ಗೆ ಪೊಲೀಸರು ಇನ್ನೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

Recommended Video

Kohli ಆಟದ ಬಗ್ಗೆ ಚರ್ಚೆ, Rohit ವಾಪಸ್ Reverse swing 01 | *CricketWrap | OneIndia Kannada

English summary
A disturbing incident took place in Madhya Pradesh where a group of men set fire to a 38-year-old tribal woman who got land for her family under a government welfare scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X