ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಕಲ್‌ನಲ್ಲಿ ತವರಿಗೆ ಹೊರಟಿದ್ದ ವಲಸೆ ಕಾರ್ಮಿಕ ಅರ್ಧದಾರಿಯಲ್ಲೇ ಪ್ರಾಣಬಿಟ್ಟ

|
Google Oneindia Kannada News

ಭೋಪಾಲ್, ಮೇ 2: ಮಹಾರಾಷ್ಟ್ರದಿಂದ ಉತ್ತರ ಪ್ರದೇಶದಲ್ಲಿರುವ ತಮ್ಮ ಊರಿಗೆ ಸೈಕಲ್‌ನಲ್ಲಿ ಹೊರಟಿದ್ದ ವಲಸೆ ಕಾರ್ಮಿಕರೊಬ್ಬರು ಅರ್ಧದಾರಿ ಕ್ರಮಿಸುವಷ್ಟರಲ್ಲೇ ಮೃತಪಟ್ಟಿದ್ದಾರೆ.

Recommended Video

Nirbhaya convict's last moment befor hanging | Hanging story | Oneindia kannada

ಮಧ್ಯಪ್ರದೇಶದ ಬರ್ವಾನಿಯಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ತಬರಕ್ ಅನ್ಸಾರಿ(50) ಎಂದು ಗುರುತಿಸಲಾಗಿದೆ. ಅವರು ಮಹಾರಾಷ್ಟ್ರದ ಭಿವಂಡಿ ಇಂದ ಎರಡು ದಿನಗಳ ಹತ್ತು ಮಂದಿ ಕಾರ್ಮಿಕರ ಜೊತೆಗೆ ಹೊರಟಿದ್ದರು.

820 ಕಿ. ಮೀ. ದೂರದಿಂದ ಬಂದವರು ಊರಿನ ಮುಂದೆ ಪ್ರಾಣಬಿಟ್ಟರು!820 ಕಿ. ಮೀ. ದೂರದಿಂದ ಬಂದವರು ಊರಿನ ಮುಂದೆ ಪ್ರಾಣಬಿಟ್ಟರು!

ಭಿವಂಡಿಯಲ್ಲಿ ಪವರ್‌ಲೂಮ್ ಯುನಿಟ್‌ನಲ್ಲಿ ಕೆಲಸ ಮಾಡುತ್ತಿದ್ದೆವು. ಲಾಕ್‌ಡೌನ್ ಪರಿಣಾಮ ಎಲ್ಲರೂ ಕೆಲಸ ಕಳೆದುಕೊಂಡಿದ್ದೆವು. ಮನೆಗೆ ಹಿಂದಿರುಗದೆ ಬೇರೆ ಆಯ್ಕೆಗಳೇ ಇರಲಿಲ್ಲ ಎಂದು ಅವರ ಜೊತೆ ತೆರಳಿದ್ದ ರಮೇಶ್ ಕುಮಾರ್ ತಿಳಿಸಿದ್ದಾರೆ.

Migrant Tabarak Ansari Worker Dies Mid-Way After 350-Km Bicycle Ride

ಹಣವೂ ಇರಲಿಲ್ಲ, ಊಟವೂ ಇರಲಿಲ್ಲ, ನಾವು 350 ಕಿ.ಮೀ ಪ್ರಯಾಣಿಸಿದ ಬಳಿಕ ತಬರಕ್ ಏಕಾಏಕಿ ಕುಸಿದು ಬಿದ್ದರು, ಬಿಸಿಲಿನಿಂದಾಗಿ ಆಯಾಸವಾಗಿರಬಹುದು ಎಂದು ತಿಳಿದೆವು ಆದರೆ ತಕ್ಷಣವೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಆದರೆ ನಿಜವಾದ ಕಾರಣ ಪೋಸ್ಟ್‌ಮಾರ್ಟಮ್ ಬಳಿಕವೇ ತಿಳಿದುಬರಬೇಕಿದೆ. ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ಕಳೆದ ಹತ್ತು ದಿನಗಳಲ್ಲಿ ಇಂತಹದ್ದೇ ಮತ್ತೆರೆಡು ಘಟನೆಗಳು ನಡೆದಿವೆ.

ಗಡಿ ಪ್ರದೇಶದ ಚೆಕ್‌ಪೋಸ್ಟ್‌ನಿಂದ ತೆರಳುತ್ತಿದ್ದಾಗ ಏಪ್ರಿಲ್ 28ರಂದು 45 ವರ್ಷದ ಬಲರಾಂ ಎಂಬುವವರು ಮೃತಪಟ್ಟಿದ್ದರು. ಅವರಿಗೆ ಅಸ್ತಮಾ ಇತ್ತು ಎಂಬುದು ಪತ್ತೆಯಾಗಿದೆ. ಏಪ್ರಿಲ್ 21ರಂದು ಉತ್ತರ ಪ್ರದೇಶಕ್ಕೆ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದರು. ಬುಧವಾರ 1 ಸಾವಿರ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶ ಮಧ್ಯಪ್ರದೇಶ ಗಡಿಯಲ್ಲಿ ತಡೆಹಿಡಿಯಲಾಗಿತ್ತು.

ವಲಸೆ ಕಾರ್ಮಿಕರಿಗಾಗಿಯೇ ವಿಶೇಷ ರೈಲಿನ ವ್ಯವಸ್ಥೆ ಮಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರವು ಮೇ 17ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿದೆ.

English summary
A migrant labourer, going again to his residence state Uttar Pradesh on a bicycle from Maharashtra, died mid-way in Madhya Pradesh's Barwani right now, changing into the third such loss of life reported from the district within the final 10 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X