ಭೋಪಾಲ್‌; ನಗರಕ್ಕೆ ನುಗ್ಗಿದ ಮರುಭೂಮಿ ಮಿಡತೆಗಳು!

ಭೋಪಾಲ್, ಜೂನ್ 16 : ಕೊರೊನಾ ವೈರಸ್ ಸೋಂಕಿನ ನಡುವೆಯೇ ಮಧ್ಯಪ್ರದೇಶಕ್ಕೆ ಮಿಡತೆ ಕಾಟ ಆರಂಭವಾಗಿದೆ. ರಾಜಧಾನಿ ಭೋಪಾಲ್‌ನಲ್ಲಿ ಸಾವಿರಾರು ಮಿಡತೆಗಳು ಕಾಣಿಸಿಕೊಂಡಿವೆ.

Recommended Video

      ದೇಶದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳಿಗೆ ಕರೆಕೊಟ್ಟ ಮೋದಿ | Oneindia Kannada

      ಮಂಗಳವಾರ ಮಧ್ಯಪ್ರದೇಶದ ವಿಧಾನಸಭೆ, ಮುಖ್ಯಮಂತ್ರಿಗಳ ಕಚೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಿಡತೆಗಳು ಕಾಣಿಸಿಕೊಂಡಿವೆ. ಭೋಪಾಲ್‌ನಲ್ಲಿನ ವಿವಿಧ ಅಪಾರ್ಟ್‌ಮೆಂಟ್‌ಗಳ ಜನರು ಕಿಟಕಿಯನ್ನು ತೆರೆಯದ ಪರಿಸ್ಥಿತಿ ನಿರ್ಮಾಣವಾಗಿದೆ.

      ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ಕಂಡುಬಂದಿದ್ದ ಮರುಭೂಮಿ ಮಿಡತೆಗಳು ಇಂದು ಭೋಪಾಲ್‌ ಮೇಲೆ ದಾಳಿ ಮಾಡಿವೆ. ಅಗ್ನಿ ಶಾಮಕದ ದಳದ ಅಧಿಕಾರಿಗಳು ಮಿಡತೆಗಳನ್ನು ಓಡಿಸಲು ಔಷಧಿಗಳನ್ನು ಸಿಂಪಡಣೆ ಮಾಡುತ್ತಿದ್ದಾರೆ.

      Locust Attacked Bhopal Madhya Pradesh

      ರಾಜ್ಯ ವಿಧಾನಸಭೆಯ ವಲ್ಲಭ ಭವನ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ವಾಸ್ತವ್ಯ ಹೂಡಿರುವ ನಿವಾಸ, ಪ್ರೆಸ್ ಕಾಂಪ್ಲೆಕ್ಸ್, ಲಿಂಕ್ ರೋಡ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾವಿರಾರು ಮಿಡತೆಗಳು ಇವೆ.

      ಮಧ್ಯಪ್ರದೇಶ ಸಾರ್ವಜನಿಕ ಸಂಪರ್ಕ ಇಲಾಖೆ ಭೋಪಾಲ್, ಉಜ್ಜೈನಿ, ಸಾಗರ್, ಜಬಲ್ಪುರ್ ಜಿಲ್ಲೆಗಳಲ್ಲಿ ಮಿಡತೆಗಳು ಕಾಣಿಸಿಕೊಂಡಿವೆ. ಅವರುಗಳನ್ನು ನಾಶ ಪಡಿಸಲು ಔಷಧಿ ಸಿಂಪಡಣೆ ಮಾಡಲಾಗುತ್ತಿದೆ ಎಂದು ಹೇಳಿದೆ.

      ರಾಜ್ಯದ ಕೃಷಿ ಇಲಾಖೆ ರೈತರಿಗೆ ಮಿಡತೆ ದಾಳಿ ಬಗ್ಗೆ ಎಚ್ಚರಿಕೆ ನೀಡಿದೆ. ಮಿಡತೆ ಹಾವಳಿ ತಡೆಯಲು ಔಷಧಿ ಸಿಂಪಡಣೆ ಮಾಡಬೇಕು. ಮಿಡತೆ ಮೊಟ್ಟೆಗಳನ್ನು ನಾಶ ಮಾಡಬೇಕು ಎಂದು ಸೂಚನೆ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+