ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಕಮಲ; ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮ!

|
Google Oneindia Kannada News

ಭೋಪಾಲ್, ಮಾರ್ಚ್ 04 : ಮಧ್ಯಪ್ರದೇಶದಲ್ಲಿ ರಾತ್ರೋ ರಾತ್ರಿ ರಾಜಕೀಯ ಹೈಡ್ರಾಮ ನಡೆದಿದೆ. 4 ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿದೆ. ಮುಖ್ಯಮಂತ್ರಿ ಕಮಲ್‌ ನಾಥ್ ಸರ್ಕಾರವನ್ನು ಬೀಳಿಸುವ ತಂತ್ರ ನಡೆದಿದೆಯೇ? ಎಂಬ ಅನುಮಾನ ಮೂಡಿದೆ.

ಕಾಂಗ್ರೆಸ್ ಪಕ್ಷದ ನಾಲ್ವರು ಶಾಸಕರು ಮಂಗಳವಾರ ರಾತ್ರಿ ಗುರುಗಾಂವ್‌ನಲ್ಲಿರುವ ಖಾಸಗಿ ಹೋಟೆಲ್ ಸೇರಿಕೊಂಡರು. ಇದು ರಾಜಕೀಯ ಹೈಡ್ರಾಮಕ್ಕೆ ನಾಂದಿ ಹಾಡಿತು. 15 ತಿಂಗಳಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ.

'ನೋ ಪ್ರಾಬ್ಲಮ್' , ಬಹುಮತ ಸಾಬೀತುಪಡಿಸಲು ಸಿದ್ಧ: ಕಮಲನಾಥ್ 'ನೋ ಪ್ರಾಬ್ಲಮ್' , ಬಹುಮತ ಸಾಬೀತುಪಡಿಸಲು ಸಿದ್ಧ: ಕಮಲನಾಥ್

ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಈ ಕುರಿತು ಹೇಳಿಕೆ ನೀಡಿದ್ದು, "ಕಾಂಗ್ರೆಸ್‌ನ ನಾಲ್ವರು ಶಾಸಕರು ಹೋಟೆಲ್‌ಗೆ ಹೋಗಿರುವುದು ನಿಜ. ಈ ವಿಚಾರ ತಿಳಿಯುತ್ತಿದ್ದಂತೆ ಸಚಿವರಾದ ಜಿತು ಪತ್ವಾರಿ ಮತ್ತು ಜೈವರ್ಧನ್ ಸಿಂಗ್ ಆ ಹೋಟೆಲ್ ಬಳಿ ಹೋದರು" ಎಂದು ಮಾಹಿತಿ ನೀಡಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಮಲನಾಥ್ : ಕಾಂಗ್ರೆಸ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಮಲನಾಥ್ : ಕಾಂಗ್ರೆಸ್

"ನಾಲ್ವರು ಶಾಸಕರ ಮನವೊಲಿಸಲು ಕಾಂಗ್ರೆಸ್‌ನ ಸಚಿವರು ಪ್ರಯತ್ನ ನಡೆಸಿದ್ದಾರೆ. ರಮಾಬಾಯಿ ಅವರನ್ನು ವಾಪಸ್ ಕರೆತರಲಾಗಿದೆ. ಈ ವೇಳೆ ಬಿಜೆಪಿಯವರು ಅವರನ್ನು ತಡೆಯಲು ಪ್ರಯತ್ನಿಸಿದರು. ಶಾಸಕ ಬಿಸಾಹುಲಾಲ್ ಸಿಂಗ್ ಅವರನ್ನು ಸಂಪರ್ಕಿಸಿದ್ದೇವೆ" ಎಂದು ದಿಗ್ವಿಜಯ್ ಸಿಂಗ್ ಹೇಳಿದರು.

ಮತ್ತೆ ಆಪರೇಷನ್ ಕಮಲ; ಇಬ್ಬರು ಜೆಡಿಎಸ್ ಶಾಸಕರು ಬಿಜೆಪಿಗೆ? ಮತ್ತೆ ಆಪರೇಷನ್ ಕಮಲ; ಇಬ್ಬರು ಜೆಡಿಎಸ್ ಶಾಸಕರು ಬಿಜೆಪಿಗೆ?

ಹಣ ಹಂಚಲು ಹೋಗುತ್ತಿದ್ದಾರೆ

ಹಣ ಹಂಚಲು ಹೋಗುತ್ತಿದ್ದಾರೆ

"ಬಿಜೆಪಿ ನಾಯಕರಾದ ರಾಮ್ ಪಾಲ್ ಸಿಂಗ್, ನರೋತ್ತಮ್ ಮಿಶ್ರಾ, ಅರವಿಂದ್, ಸಂಜಯ್ ಪಾಠಕ್ ಹೋಟೆಲ್‌ನಲ್ಲಿರುವ ಶಾಸಕರಿಗೆ ಹಣ ಹಂಚಲು ಹೋಗುತ್ತಿದ್ದಾರೆ. ದಾಳಿ ನಡೆಸಿದರೆ ಅವರು ಸಿಕ್ಕಿ ಬೀಳುತ್ತಾರೆ. 8 ಶಾಸಕರನ್ನು ಬಿಜೆಪಿ ಅವರು ಹೋಟೆಲ್‌ನಲ್ಲಿದ್ದರು" ಎಂದು ದಿಗ್ವಿಜಯ್ ಸಿಂಗ್ ಆರೋಪಿಸಿದರು.

ನಾಲ್ವರು ಅವರ ಜೊತೆ ಇದ್ದಾರೆ

ನಾಲ್ವರು ಅವರ ಜೊತೆ ಇದ್ದಾರೆ

ಒಟ್ಟು 8 ಕಾಂಗ್ರೆಸ್ ಶಾಸಕರು ಬಿಜೆಪಿ ನಾಯಕರ ಜೊತೆ ಹೋಟೆಲ್‌ನಲ್ಲಿದ್ದಾರೆ. ನಾಲ್ವರು ಕಾಂಗ್ರೆಸ್ ಶಾಸಕರನ್ನು ವಾಪಸ್ ಕರೆತರುವಲ್ಲಿ ನಾಯಕರು ಸಫಲರಾಗಿದ್ದಾರೆ. ಇನ್ನೂ ನಾಲ್ಕು ಶಾಸಕರು ಬಿಜೆಪಿ ಜೊತೆಯೇ ಇದ್ದು, ಕಾಂಗ್ರೆಸ್ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಬಿಜೆಪಿಯಿಂದ ಪ್ರಯತ್ನ

ಬಿಜೆಪಿಯಿಂದ ಪ್ರಯತ್ನ

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 107 ಸ್ಥಾನಗಳನ್ನು ಪಡೆದು ಅಧಿಕಾರ ಕಳೆದುಕೊಂಡ ಬಿಜೆಪಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನ ನಡೆಸುತ್ತಲೇ ಇದೆ. ಕರ್ನಾಟಕದ ಮಾದರಿಯಲ್ಲಿ ಆಪರೇಷನ್ ಕಮಲ ನಡೆಸಲು ಮುಂದಾಗಿದೆ.

228 ಸದಸ್ಯ ಬಲದ ವಿಧಾನಸಭೆ

228 ಸದಸ್ಯ ಬಲದ ವಿಧಾನಸಭೆ

2019ರಲ್ಲಿ 228 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ 114 ಸ್ಥಾನಗಳಲ್ಲಿ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು, ಬಿಜೆಪಿ 107 ಸ್ಥಾನಗಳಲ್ಲಿ ಜಯಗಳಿಸಿತ್ತು. ಬಿಎಸ್‌ಪಿ, ಸಮಾಜವಾದಿ ಪಕ್ಷ, ಪಕ್ಷೇತರ ಶಾಸಕರ ಸಹಾಯ ಪಡೆದು ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. ಕಲಮನಾಥ್ ಮುಖ್ಯಮಂತ್ರಿಯಾಗಿದ್ದರು.

English summary
Late night political drama in Madhya Pradesh to topple Kamal Nath lead Congress government. Congress alleged that BJP took 4 MLA's to a hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X