• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹನಿ ಟ್ರ್ಯಾಪ್ ಪ್ರಕರಣ: ಮಾಧ್ಯಮ ಸಂಸ್ಥೆ, ಉದ್ಯಮಿ ಕಚೇರಿ ಮೇಲೆ ದಾಳಿ

|
Google Oneindia Kannada News

ಇಂದೋರ್, ಡಿಸೆಂಬರ್ 01: ಹನಿ ಟ್ರ್ಯಾಪ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾಧ್ಯಮ ಸಂಸ್ಥೆ ಹಾಗೂ ಸ್ಥಳೀಯ ಉದ್ಯಮಿಯೊಬ್ಬರ ಕಚೇರಿ ಮೇಲೆ ಇಂದೋರ್ ಜಿಲ್ಲಾಡಳಿತ ಹಾಗೂ ಮಧ್ಯಪ್ರದೇಶ ಪೊಲೀಸರು ಭಾನುವಾರದಂದು ದಾಳಿ ನಡೆಸಿದ್ದಾರೆ.

ಜಿತೇಂದ್ರ ಸೋನಿ ಎಂಬ ಹೆಸರಿನ ಉದ್ಯಮಿಯ ಮನೆ, ಕಚೇರಿ, ರೆಸ್ಟೋರೆಂಟ್ ಮೇಲೆ ಶನಿವಾರ ರಾತ್ರಿಯಿಂದಲೇ ದಾಳಿ ಮುಂದುವರೆದಿದೆ. ಸ್ಥಳೀಯ ಮಾಧ್ಯಮ ಸಂಸ್ಥೆಯಲ್ಲಿ ಕೂಡಾ ಸೋನಿ ಹಣ ತೊಡಗಿಸಿದ್ದು, ಸಂಸ್ಥೆಯ ಮೇಲೆ ದಾಳಿ ನಡೆಸಲಾಗಿದೆ.

ಪರಿಚಯವಾದ 24 ಗಂಟೆಯೊಳಗೇ ಯುವತಿ ಖೆಡ್ಡಾಗೆ ಬಿದ್ದಿದ್ದ ಶಾಸಕ!ಪರಿಚಯವಾದ 24 ಗಂಟೆಯೊಳಗೇ ಯುವತಿ ಖೆಡ್ಡಾಗೆ ಬಿದ್ದಿದ್ದ ಶಾಸಕ!

ಹನಿ ಟ್ರ್ಯಾಪ್ ಪ್ರಕರಣ ಸದ್ದು ಮಾಡುತ್ತಿದ್ದಂತೆ, ಸೋನಿ ಒಡೆತನದ ಪತ್ರಿಕೆಯಲ್ಲಿ ಈ ಕುರಿತಂತೆ ರಸವತ್ತಾಗಿ ಲೇಖನಗಳು ಮೂಡಿ ಬಂದಿದ್ದವು. ಹನಿ ಟ್ರ್ಯಾಪ್ ಕೇಸಿಗೆ ಸಂಬಂಧಿಸಿದಂತೆ ಆಡಿಯೋ- ವಿಡಿಯೋ ಕ್ಲಿಪ್ ಗಳು ಲಭ್ಯವಿದೆ ಎಂದು ಸುದ್ದಿ ಪ್ರಸಾರ ಮಾಡಿದ್ದರು.

ಕರ್ನಾಟಕ ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ವೈರಲ್ಕರ್ನಾಟಕ ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ವೈರಲ್

ಆದರೆ, ಸೋನಿ ಅವರ ಮಾಧ್ಯಮ ಸಂಸ್ಥೆ ಮೇಲೆ ದಾಳಿಯನ್ನು ಸ್ಥಳೀಯ ಪತ್ರಕರ್ತರ ಸಂಘವು ಖಂಡಿಸಿದೆ. ಪ್ರಜಾಪ್ರಭುತ್ವದ ಮೇಲೆ ಪ್ರಹಾರ ಎಂದಿದ್ದಾರೆ. ಹನಿಟ್ರ್ಯಾಪ್ ಹಾಗೂ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಮಹಿಳೆ ಹಾಗೂ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ರಾಸಲೀಲೆ ವಿಡಿಯೋ: ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಿದ್ದು ಹೀಗೆರಾಸಲೀಲೆ ವಿಡಿಯೋ: ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಿದ್ದು ಹೀಗೆ

ಇಂದೋರ್ ಮುನ್ಸಿಪಾಲ್ ಕಾರ್ಪೊರೇಷನ್ ನ ಇಂಜಿನಿಯರ್ ರೊಬ್ಬರು ಈ ಪ್ರಕರಣದ ಬಗ್ಗೆ ಪೊಲೀಸರಿಗೆ ಮೊದಲಿಗೆ ದೂರು ನೀಡಿದರು. ಅಕ್ಷೇಪಾರ್ಹ ವಿಡಿಯೋವೊಂದನ್ನು ಇಟ್ಟುಕೊಂಡು 3 ಕೋಟಿ ರು ನೀಡುವಂತೆ ಕೆಲ ವ್ಯಕ್ತಿಗಳು ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಆರತಿ ದಯಾಳ್ (29), ಮೋನಿಕಾ ಯಾದವ್ (18), ಶ್ವೇತಾ ವಿಜಯ್ ಜೈನ್ (39), ಶ್ವೇತ ಸ್ವಪ್ನಿಲ್ ಜೈನ್ (48), ಬರ್ಕಾ ಸೋನಿ (34) ಹಾಗೂ ಓಂಪ್ರಕಾಶ್ ಕೋರಿ (45) ಎಂಬುವವರನ್ನು ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

English summary
Madhya Pradesh Police along with the Indore district authorities raided the home, media firm and three other establishments of a local businessman in connection with the honey-trap case, an official said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X