ಸಾಧ್ವಿ ಪ್ರಜ್ಞಾ ಸಿಂಗ್ ವಿರುದ್ದ ಕಣಕ್ಕಿಳಿದ ಹೇಮಂತ್ ಕರ್ಕರೆ ಸಹದ್ಯೋಗಿ

ಭೋಪಾಲ್, ಏ 25: ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಪ್ರಜ್ಞಾ ಸಿಂಗ್ ಠಾಕೂರ್, ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿರುವುದನ್ನು ವಿರೋಧಿಸಿ, ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಕಣಕ್ಕಿಳಿದಿದ್ದಾರೆ.

ಔರಂಗಾಬಾದ್ ಮೂಲದ, ನಿವೃತ್ತ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಆಗಿರುವ ರಿಯಾಜ್ ದೇಶಮುಖ್, ಮಂಗಳವಾರ (ಏ 23) ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರು ಹೇಮಂತ್ ಕರ್ಕರೆಯವರ ಸಹದ್ಯೋಗಿಯಾಗಿದ್ದವರು.

ನಾಮಪತ್ರ ಸಲ್ಲಿಕೆಯ ನಂತರ ಮಾತನಾಡಿದ ರಿಯಾಜ್, ಸಾಧ್ವಿ ಸ್ಪರ್ಧಿಸಲಿದ್ದಾರೆ ಎಂದು ಖಾತ್ರಿಯಾದ ಕೂಡಲೇ, ಇಂತಹ ಆರೋಪಿಗಳ ವಿರುದ್ದ ಕಣಕ್ಕಿಳಿಯಬೇಕು ಎಂದು ನಿರ್ಧರಿಸಿದೆ. ನನ್ನ ವೃತ್ತಿ ಜೀವನದಲ್ಲಿ ಹೇಮಂತ್ ಕರ್ಕರೆಯವರ ಪ್ರಭಾವ ಬಹಳಷ್ಟಿದೆ ಎಂದು ರಿಯಾಜ್ ಹೇಳಿದ್ದಾರೆ.

Karkare aide to contest against Pragya Retired ACP Files His Nomination As Independent

ಮಹಾರಾಷ್ಟ್ರದ ಅಮರಾವತಿ ವಲಯದಿಂದ 2016ರಲ್ಲಿ ನಿವೃತ್ತಿಯಾಗಿರುವ ರಿಯಾಜ್ ಮೂರು ದಶಕಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರ ವೆಬ್ ಪೋರ್ಟಲ್ ಮೂಲಕ, ಸಾರ್ವಜನಿಕರಿಗೆ ಕಾನೂನು, ಸುವ್ಯವಸ್ಥೆಯ ಸಂಬಂಧ ಸಲೆಹಗಳನ್ನು ನೀಡುತ್ತಿದ್ದಾರೆ.

ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಪ್ರಮುಖ ಆರೋಪಿಯಾಗಿದ್ದರು. ಇತ್ತೀಚೆಗೆ ಎನ್‌ಐಎ ಕೋರ್ಟ್ ಅವರನ್ನು ಆರೋಪ ಮುಕ್ತಗೊಳಿಸಿ ಆದೇಶಿಸಿತ್ತು. ಯುಪಿಎ ಅವಧಿಯಲ್ಲಿ 'ಹಿಂದೂ ಭಯೋತ್ಪಾದನೆ' ಎಂಬ ಶಬ್ದವನ್ನು ಹುಟ್ಟುಹಾಕಿದ್ದ ದಿಗ್ವಿಜಯ್ ಸಿಂಗ್ ವಿರುದ್ಧ ಸಾಧ್ವಿ ಸ್ಪರ್ಧಿಸಿದ್ದಾರೆ.

ಸಾಧ್ವಿ ಪ್ರಗ್ಯಾ ಠಾಕೂರ್ ನಾಮಪತ್ರ ಸಲ್ಲಿಸಿದ ದಿನವೇ ನಿವೃತ್ತ ಪೊಲೀಸ್ ಅಧಿಕಾರಿ ರಿಯಾಜ್ ದೇಶಮುಖ್ ಕೂಡಾ ನಾಮಪತ್ರ ಸಲ್ಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+