• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುವತಿ ಮೇಲೆ ಅಪ್ರಾಪ್ತ ಬಾಲಕ ಸೇರಿ 7 ಮಂದಿಯಿಂದ ಸಾಮೂಹಿಕ ಅತ್ಯಾಚಾರ

|

ಭೋಪಾಲ್ ಮೇ 1: ಹದಿನೆಂಟು ವರ್ಷದ ಯುವತಿ ಮೇಲೆ ಅಪ್ರಾಪ್ತ ಬಾಲಕ ಸೇರಿ ಏಳು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಆಕೆ ತನ್ನ ಸಹೋದರನ ಜೊತೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಏಪ್ರಿಲ್ 29-30ರಂದು ಈ ಘಟನೆ ನಡೆದಿದ್ದು, ಅತ್ಯಾಚಾರಕ್ಕೂ ಮುನ್ನ ಆಕೆಯ ಸಹೋದರನನ್ನು ಬಾವಿಗೆ ತಳ್ಳಿದ್ದರು ಎಂದು ತಿಳಿದುಬಂದಿದೆ.

ಪೊಲೀಸರು ಮೂರು ಅಪ್ರಾಪ್ತ ಬಾಲಕರು ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಕಣ್ಮರೆಯಾಗಿದ್ದಾರೆ.ಆಕೆ ತನ್ನ 21 ವರ್ಷದ ಸಹೋದರನ ಜೊತೆಗೆ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಳು.

ರಾತ್ರಿ 8.30ರ ಸುಮಾರಿಗೆ ಬೈಕ್‌ ತಡೆದು ನಿಲ್ಲಿಸಿದ ಆರೋಪಿಗಳು ಆಕೆಯ ಸಹೋದರನನ್ನು ತಳ್ಳಿ ಆಕೆಯನ್ನು ಎಳೆದುಕೊಂಡು ಹೋಗಿದ್ದರು. ಮಧ್ಯರಾತ್ರಿ 2 ಗಂಟೆಯವರೆಗೂ ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾರೆ.

ಹೈದರಾಬಾದ್ ಅತ್ಯಾಚಾರ ಪ್ರಕರಣ: ಜನರು ಮಾಡುತ್ತಿರುವುದೇನು ಗೊತ್ತೇ?

ಅತ್ಯಾಚಾರಿಗಳು ಆಕೆಯನ್ನು ಅಲ್ಲಿಯೇ ಬಿಟ್ಟು ಓಡಿ ಹೋದ ಬಳಿಕ ಆಕೆ ಬಾವಿಗೆ ಬಿದ್ದಿದ್ದ ತನ್ನ ಸಹೋದರನನ್ನು ರಕ್ಷಣೆ ಮಾಡಿದ್ದಾಳೆ. ಬಳಿಕ ಮನೆಗೆ ತೆರಳಿ ಮರುದಿನ ಬೆಳಗ್ಗೆ ದೂರು ನೀಡಿದ್ದಾಳೆ.

ಇಬ್ಬರು ಆರೋಪಿಗಳನ್ನು ಶುಭಂ ಬೆಳೆ,ಸಂದೀಪ್ ಕಾಟಿಯಾ ಹಾಗೂ ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ಲೋಕೇಶ್ ಸೋನಿ, ಪವನ್ ಬೆಲೆ ನಾಪತ್ತೆಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಐಪಿಸಿ ಸೆಕ್ಷನ್ 376(ಅತ್ಯಾಚಾರ) , 365(ಅಪಹರಣ),307(ಕೊಲೆ ಯತ್ನ) ಪ್ರಕರಣ ದಾಖಲಾಗಿದೆ.

English summary
An 18-year-old woman was allegedly raped by seven people, including three minors, when she was returning to her village in Madhya Pradesh with her brother, police said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X