ತಂದೆ ಜೊತೆ ಅನಿವಾರ್ಯವಾಗಿ ಜೈಲಿನಲ್ಲಿದ್ದ ಬಾಲಕಿಗೆ ಕೊನೆಗೂ ಮುಕ್ತಿ,ಈಗ ಎಲ್ಲಿದ್ದಾಳೆ?

ರಾಯ್ಪುರ, ಜೂನ್ 26: ತಾಯಿ ತೀರಿಕೊಂಡು ಎಷ್ಟೋ ವರ್ಷಗಳಾಗಿದ್ದವು, ತಂದೆ ಅತ್ಯಾಚಾರ ಆರೋಪ ಹೊತ್ತು ಜೈಲಿನಲ್ಲಿದ್ದಾರೆ, ಅಪ್ಪನ ಕಡೆಯವರಾಗಲಿ, ಅಮ್ಮನ ಕಡೆಯವರಾಗಲಿ ಮಗಳೇ ನಾವು ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಯಾರೂ ಹೇಳಿದವರಿಲ್ಲ.

ಆಕೆ ತಾನೇ ಏನು ಮಾಡಬೇಕು ಹಾಗಾಗಿ ತಂದೆಯ ಜೊತೆ ಜೈಲಿನಲ್ಲಿಯೇ ಇದ್ದಳು. ಅಲ್ಲಿರುವ ಮಹಿಳಾ ಸಿಬ್ಬಂದಿಗಳು ಆಕೆಯ ಬೇಕು ಬೇಡವನ್ನು ಅರ್ಥಮಾಡಿಕೊಂಡು ಆಕೆಯನ್ನು ನೋಡಿಕೊಳ್ಳುತ್ತಿದ್ದರು.

ಆದರೆ ಆ ಮಗುವಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ, ಜಿಲ್ಲಾಧಿಕಾರಿ ಡಾ. ಸಂಜಯ್ ಅಳುಂಗ್ ಅವರು ಆ ಬಾಲಕಿಯನ್ನು ಉತ್ತಮ ಖಾಸಗಿ ಶಾಲೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಮಗುವಿನ ತಂದೆಗೆ ಹಾಗೂ ಮಗುವಿಗೆ ಖುಷಿಗೆ ಪಾರವೇ ಇಲ್ಲದಂತಾಗಿದೆ.

Girl admitted to school who was in Jail with father

ಗಂಭೀರ ಅಪರಾಧಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಆರೋಪಿ ತಂದೆ ಅವನ ಪುಟ್ಟ ಮಗಳು ಮೊದಲ ಬಾರಿಗೆ ಜೈಲಿನಾಚಿನ ಹೊಸ ಜಗತ್ತನ್ನು ಕಾಣುತ್ತಿದ್ದಾಳೆಂಬುದನ್ನು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ. ಮತ್ತು ಆತನ ಪಾಲಿಗಿದು ಅತ್ಯಂತ ಖುಷಿಯ ಸಂಗತಿಯಾಗಿದೆ.

ಹಿಂದಿನ ತಿಂಗಳು ತನ್ನ ಜೈಲು ತಪಾಸಣೆಯ ಸಮಯದಲ್ಲಿ, ಮಹಿಳಾ ಸೆಲ್ ಬ್ಯಾರೆಕ್ ನ ಒಂದು ಮೂಲೆಯಲ್ಲಿ ಹುಡುಗಿ ಸದ್ದಿಲ್ಲದೆ ಕುಳಿತಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ. ಹುಡುಗಿಯನ್ನು ಕರೆದು ಮಾತನಾಡಿದ್ದಾರೆ. ಅವಳು ಮಾಡಿರದ ತಪ್ಪಿಗೆ ಆಕೆ ಜೈಲಿನಲ್ಲಿದ್ದಾಳೆ.

ಇದನ್ನು ಕಂಡು ಆ ಅಧಿಕಾರಿಗೆ ಕರುಣೆ ಬಂದಿದ್ದು ಆಗ ಅವರು ತಡ ಮಾಡದೆ ಜೈಲಿನ ಅಧಿಕಾರಿಗಳಿಗೆ ಆ ಬಾಲಕಿಯನ್ನು ಜೈಲಿನಿಂದ ಹೊರತಂದು ಉತ್ತಮವಾಗಿರುವ ಶಾಲೆಗೆ ದಾಖಲಿಸುವಂತೆ ಆದೇಶಿಸಿದ್ದಾರೆ.

ಬಿಲಾಸ್ ಪುರ್ ಜಿಲ್ಲಾಧಿಕಾರಿಗಳು ತೆಗೆದುಕೊಂಡಿರುವ ಈ ಕ್ರಮಕ್ಕೆ ಬಾಲಕಿ ಸಹ ಸಂತಸದಿಂದ ಸ್ಪಂದಿಸಿದ್ದಾಳೆ.ಅಲ್ಲದೆ ಜೈಲಿನಲ್ಲಿ ಅವಳದೇ ವಯಸ್ಸಿನ 17 ಮಕ್ಕಳಿದ್ದಾರೆ ಎಂದು ಆಕೆ ಮಾಹಿತಿ ಕೊಟ್ಟಿದ್ದಾಳೆ.

ಬಾಲಕಿ ಮೊದಲ ದಿನ ಜೈಲಿನಿಂದ ಹೊರಬಂದು ಶಾಲೆಯತ್ತ ತೆರಳುವಾಗ ಅತ್ಯಂತ ಉತ್ಸುಕಳಾಗಿದ್ದಳು. ಕಲೆಕ್ಟರ್ ತಾವೇ ಸ್ವತಃ ಬಾಲಕಿಯನ್ನು ಶಾಲೆಗೆ ಬಿಡಲು ತನ್ನ ಅಧಿಕೃತ ಕಾರಿನಲ್ಲಿ ಕರೆದೊಯ್ದಿದ್ದರು. ಅವಳು ಪ್ರವೇಶ ಪಡೆದ ಜೈನ್ ಇಂಟರ್ನ್ಯಾಷನಲ್ ಶಾಲೆಯ ನಿರ್ದೇಶಕ ಅಶೋಕ್ ಅಗರ್ ವಾಲ್ ಖುಷಿಗೆ ಶಾಲೆಯ ಹಾಸ್ಟೆಲ್ನಲ್ಲಿ ಉಳಿದುಕೊಳ್ಳುವುದು ಸೇರಿದಂತೆ ಎಲ್ಲಾ ಖರ್ಚುಗಳನ್ನು ತನ್ನ ಸಂಸ್ಥೆ ಭರಿಸಲಿದೆ ಎಂದು ಅಭಯ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+