Get Updates
Get notified of breaking news, exclusive insights, and must-see stories!

ಜಿನ್ನಾ, ರಾಹುಲ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ : ಶತ್ರುಘ್ನ ಸಿನ್ಹಾ!

ಚಿಂದವಾಡ (ಮಧ್ಯ ಪ್ರದೇಶ), ಏಪ್ರಿಲ್ 27 : ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಾ ಗಾಂಧಿಯಿಂದ ಹಿಡಿದು, ಮುಹಮ್ಮದ್ ಅಲಿ ಜಿನ್ನಾ, ಸರ್ದಾರ್ ಪಟೇಲ್, ಜವಾಹರಲಾಲ್ ನೆಹರೂ ಮುಂತಾದ ಕಾಂಗ್ರೆಸ್ಸಿಗರ ಕೈವಾಡ ಅಪಾರವಿದೆ ಎಂದು ಶತ್ರುಘ್ನ ಸಿನ್ಹಾ ಅವರು ಹಾಡಿ ಹೊಗಳಿದ್ದಾರೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಚಿಂದವಾಡಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ, ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮಗ ನಕುಲ್ ನಾಥ್ ಅವರ ಪರ ಪ್ರಚಾರಕ್ಕೆಂದು ಬಂದಿದ್ದ ಮಾಜಿ ನಟ, ಹಾಲಿ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು, ಮಹಾತ್ಮಾ ಗಾಂಧಿಯಿಂದ ರಾಹುಲ್ ಗಾಂಧಿಯವರೆಗೆ ಹಲವರ ಯೋಗದಾನವಿದೆ ಎಂದು ಅಸಂಬದ್ಧವಾಗಿ ನುಡಿದಿದ್ದಾರೆ.

Gandhi to Jinnah played role in India development : Shatrughan Sinha

ಈ ಕಾಂಗ್ರೆಸ್ ಪರಿವಾರದಲ್ಲಿ ಮಹತ್ಮಾ ಗಾಂಧಿಯಿಂದ ಹಿಡಿದು, ಸರ್ದಾರ್ ವಲ್ಲಭ್ ಭಾಯಿ, ಮುಹಮ್ಮದ್ ಅಲಿ ಜಿನ್ನಾ (ಭಾರತ ಇಬ್ಭಾಗವಾಗಲು ಕಾರಣವಾದ ಮಹಾನುಭಾವ), ಜವಾಹರಲಾಲ್ ನೆಹರೂ, ಸರ್ಗೀಯ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಮುಂತಾದವರು ದೇಶದ ವಿಕಾಸದಲ್ಲಿ, ಅಭಿವೃದ್ಧಿಯಲ್ಲಿ, ದೇಶದ ಸ್ವಾತಂತ್ರ್ಯದಲ್ಲಿ ಭಾರೀ ಕಾಣಿಕೆ ನೀಡಿದ್ದಾರೆ ಎಂದು ವಾಗ್ಝರಿಯನ್ನು ಶತ್ರುಘ್ನ ಸಿನ್ಹಾ ಅವರು ಹೊರಿಸಿದರು.

ನಾನೀಗ ಕಾಂಗ್ರೆಸ್ಸನ್ನು ಮೊದಲ ಬಾರಿ ಮತ್ತು ಅಂತಿಮ ಬಾರಿ ಸೇರಿಕೊಂಡಿದ್ದೇನೆ. ಇನ್ನೆಂದೂ ಈ ಪಕ್ಷವನ್ನು ತೊರೆಯುವುದಿಲ್ಲ ಎಂದು, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಬಾಲಿವುಡ್ ಮಾಜಿ ನಟ ಡೈಲಾಗ್ ಬಾರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ಆ ಸಮಯದಲ್ಲಿ ಕಮಲ್ ನಾಥ್ ಮತ್ತು ನಕುಲ್ ನಾಥ್ ಅವರು ಕೂಡ ವೇದಿಕೆಯ ಮೇಲಿದ್ದರು.

Gandhi to Jinnah played role in India development : Shatrughan Sinha

ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಘಡದಲ್ಲಿ ರೈತರ ಸಾಲವನ್ನು ಕಾಂಗ್ರೆಸ್ ಸರಕಾರ ಮನ್ನಾ ಮಾಡಿದೆ. ಇದೀಗ, ಭಾರತದ ಜನತೆ ನ್ಯೂನತಮ್ ಆಯ್ ಯೋಜನಾ (ನ್ಯಾಯ್) ಬಗ್ಗೆ ಅತ್ಯಂತ ಕುತೂಹಲದಿಂದಿದ್ದಾರೆ. ಈ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರೆತರೆ ಈ ಯೋಜನೆಯನ್ನು ಖಂಡಿತ ಜಾರಿಗೆ ತರಲಾಗುವುದು ಎಂದು ಅವರು ನುಡಿದರು.

ಉಪ್ರದಲ್ಲಿ ಕಾಂಗ್ರೆಸ್ ವಿರುದ್ಧವೇ ಸಿನ್ಹಾ ಪ್ರಚಾರ : ತಮಾಷೆಯೆಂದರೆ, ಕಾಂಗ್ರೆಸ್ ಸೇರಿರುವ ಶತ್ರುಘ್ನ ಸಿನ್ಹಾ ಅವರು, ತಮ್ಮ ಪತ್ನಿ ಪೂನಂ ಸಿನ್ಹಾ ಅವರನ್ನು ಸಮಾಜವಾದಿ ಪಕ್ಷಕ್ಕೆ ಸೇರಿಸಿದ್ದಾರೆ ಮತ್ತು ಅವರ ಪರವಾಗಿ ಮತ್ತು ಕಾಂಗ್ರೆಸ್ ವಿರುದ್ಧವಾಗಿ ಉತ್ತರ ಪ್ರದೇಶದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ತಮ್ಮ ಪಕ್ಷದ ವಿರುದ್ಧ ಹೇಗೆ ಪ್ರಚಾರ ಮಾಡಬೇಕೆಂದು ಶತ್ರುಘ್ನ ಸಿನ್ಹಾ ಅವರಿಗೆ ಹೇಳಿಕೊಡುವ ಅಗತ್ಯವೇ ಇಲ್ಲ. ಬಿಜೆಪಿಯಲ್ಲಿದ್ದಾಗಲೂ ಅವರು ಮಾಡಿದ್ದು ಅದನ್ನೇ.

ಅವರನ್ನೇ ಕೇಳಿ ಅಂದ ಚಿದಂಬರಂ : ಶತ್ರುಘ್ನ ಸಿನ್ಹಾ ಅವರ ಈ ಅಸಂಬದ್ಧ ಮಾತುಗಳ ಬಗ್ಗೆ ವಿವರಣೆಯನ್ನು ಅವರನ್ನೇ ಕೇಳಿ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಹೇಳಿದ್ದಾರೆ. ಕಾಂಗ್ರೆಸ್ ನ ಪ್ರತಿ ಸದಸ್ಯ ಆಡುವ ಮಾತುಗಳಿಗೆ ಅರ್ಥ, ವಿವರಣೆಯನ್ನು ನಾನು ನೀಡಬೇಕಾಗಿಲ್ಲ ಎಂದು ಕೈ ಝಾಡಿಸಿಕೊಂಡಿದ್ದಾರೆ ಚಿದಂಬರಂ.

ಕಾಂಗ್ರೆಸ್ಸಿಗೆ ಮುಜುಗರ : ಶತ್ರುಘ್ನ ಸಿನ್ಹಾ ಅವರ ಈ ಹೇಳಿಕೆ ಭಾರೀ ಮುಜುಗರಕ್ಕೆ ಕಾರಣವಾಗಿದೆ. ಆದರೆ, ಭಾಷಣ ಮಾಡುವಾಗ ಮಾತಿನ ಉದ್ವೇಗದಲ್ಲಿ ಮೌಲಾನಾ ಆಜಾದ್ ಹೆಸರು ಹೇಳುವ ಬದಲು ಮುಹಮ್ಮದ್ ಅಲಿ ಜಿನ್ನಾ ಹೆಸರು ಹೇಳಿದ್ದೇನೆ ಎಂದು ಬಿಹಾರದ ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ ಸ್ಪರ್ಧಿಸುತ್ತಿರುವ ಸಿನ್ಹಾ ಸಮಜಾಯಿಷಿ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+