ಶಾಲಾ ಬಸ್‌ನಲ್ಲಿ ಮೂರುವರೆ ವರ್ಷದ ಬಾಲಕಿ ಮೇಲೆ ಚಾಲಕನ ಅತ್ಯಾಚಾರ..!

ಭೋಪಾಲ್‌ ಸೆಪ್ಟೆಂಬರ್ 13: ಭೋಪಾಲ್‌ನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಶಾಲಾ ಬಸ್‌ನಲ್ಲಿ ನರ್ಸರಿ ಮಗುವಿನ ಮೇಲೆ ಅತ್ಯಾಚಾರ ನಡೆದಿದ್ದು ಮಹಿಳಾ ಸಹಾಯಕಿ ಅಪರಾಧವನ್ನು ಮುಚ್ಚಿಡಲು ಪ್ರಯತ್ನಿಸಿದ ಘಟನೆ ನಡೆದಿದೆ.

ಮೂರೂವರೆ ವರ್ಷದ ನರ್ಸರಿ ಶಾಲಾ ವಿದ್ಯಾರ್ಥಿನಿಯನ್ನು ಶಾಲಾ ಬಸ್ ಚಾಲಕ ಮಹಿಳಾ ಸಹಾಯಕಿಯ ಸಮ್ಮುಖದಲ್ಲಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಇಬ್ಬರೂ ಅಪರಾಧವನ್ನು ಮುಚ್ಚಿಡಲು ಪ್ರಯತ್ನಿಸಿದ್ದಾರೆ. ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ.

ವಿದ್ಯಾರ್ಥಿನಿಯ ತಾಯಿ ಆಕೆಯ ದೇಹದ ಮೇಲೆ ಗುರುತುಗಳನ್ನು ನೋಡಿ ಏನಾಯಿತು ಎಂದು ಕೇಳಿದಾಗ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕಿ ತನ್ನ ತಾಯಿಗೆ ಘಟನೆಯ ಬಗ್ಗೆ ತಿಳಿಸಿದಾಗ, ಕುಟುಂಬವು ಶಾಲಾ ಆಡಳಿತವನ್ನು ಸಂಪರ್ಕಿಸಿತು. ಆದರೆ ಶಾಲಾ ಅಧಿಕಾರಿಗಳು ಸಂತ್ರಸ್ತ ಬಾಲಕಿಯ ಕುಟುಂಬಸ್ಥರ ಎಲ್ಲಾ ಆರೋಪಗಳನ್ನು ನಿರಾಕರಿಸಿತು.

Driver raped a three-and-a-half-year-old girl in a school bus..!

ನಂತರ ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿದೆ. ಆರೋಪಿ ಚಾಲಕನನ್ನು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳ ಲೈಂಗಿಕ ಅಪರಾಧಗಳ (ಪೋಕ್ಸೊ) ಕಾಯ್ದೆಯಡಿ ಚಾಲಕನನ್ನು ಬಂಧಿಸಿ ಅತ್ಯಾಚಾರ ಪ್ರಕರಣವನ್ನೂ ದಾಖಲಿಸಲಾಗಿದೆ. ಅಪರಾಧವನ್ನು ಮರೆಮಾಚಲು ಯತ್ನಿಸಿದ ಸಹಾಯಕಿಯನ್ನೂ ಬಂಧಿಸಲಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, 'ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ ಮತ್ತು ಶಾಲೆಯ ಅಧಿಕಾರಿಗಳು ಕೂಡ ಅಪರಾಧವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಆದ್ದರಿಂದ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗುವುದು ಮತ್ತು ಅವರು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು'

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+