8,000 ಅಪರಾಧಿಗಳು ಇನ್ನೆರೆಡು ದಿನಗಳಲ್ಲಿ ಜೈಲಿನಿಂದ ಬಿಡುಗಡೆ
ಭೂಪಾಲ್, ಮಾರ್ಚ್.30: ಕೊರೊನಾ ವೈರಸ್ ಭೀತಿಗೆ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೆಲ್ಲ ತತ್ತರಿಸಿ ಹೋಗಿವೆ. ಭಾರತ ಕೂಡಾ ಇದರಿಂದ ಹೊರತಾಗಿಲ್ಲ. ಮಾರಕ ಸೋಂಕಿನಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಇನ್ನೆರೆಡು ದಿನಗಳಲ್ಲಿ 8 ಸಾವಿರ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಲು ಮಧ್ಯಪ್ರದೇಶ ಸರ್ಕಾರ ತೀರ್ಮಾನಿಸಿದೆ.
ತುರ್ತು ಜಾಮೀನು ಅಡಿಯಲ್ಲಿ 5 ಸಾವಿರ ಕೈದಿಗಳನ್ನು ಮತ್ತು ಆಂತರಿಕ ಜಾಮೀನು ಅಡಿಯಲ್ಲಿ 3 ಸಾವಿರ ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.
ತುರ್ತು ಜಾಮೀನು ಅಡಿಯಲ್ಲಿ 60 ದಿನ ಮತ್ತು ಆಂತರಿಕ ಜಾಮೀನು ಅಡಿಯಲ್ಲಿ 45 ದಿನಗಳ ಕಾಲ ಕೈದಿಗಳನ್ನು ಬಿಡುಗಡೆ ಮಾಡಲು ಅವಕಾಶವಿದೆ. ಈ ಹಿನ್ನೆಲೆ ಜೈಲುಗಳಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಸರ್ಕಾರವು ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿದೆ.

ಮಧ್ಯಪ್ರದೇಶದಲ್ಲಿ ತುಂಬಿ ತುಳಕುತ್ತಿರುವ ಜೈಲು:
ಮಧ್ಯಪ್ರದೇಶದ ಜೈಲುಗಳಲ್ಲಿ 29 ಸಾವಿರ ಕೈದಿಗಳನ್ನು ಇರಿಸುವ ಸಾಮರ್ಥ್ಯವಿದೆ. ಆದರೆ ಈ ಜೈಲುಗಳಲ್ಲಿ 45 ಸಾವಿರಕ್ಕೂ ಅಧಿಕ ಅಪರಾಧಿಗಳಿದ್ದಾರೆ ಎಂದು ಜೈಲಿನ ಮುಖ್ಯಾಧಿಕಾರಿ ಸಂಜಯ್ ಚೌಧರಿ ತಿಳಿಸಿದ್ದಾರೆ. ಇನ್ನು, ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.












Click it and Unblock the Notifications