ಬಾಸ್ಕೆಟ್ ಬಾಲ್ ಬಳಿಕ ಈಗ ಪ್ರಗ್ಯಾ ಡ್ಯಾನ್ಸ್ ವಿಡಿಯೋ ವೈರಲ್: ಕಾಂಗ್ರೆಸ್ ಟಾಂಗ್
ಭೋಪಾಲ್, ಜು.09: ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಭೋಪಾಲ್‌ನಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿರುವ ವೀಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಈಗ ವಿವಾಹವೊಂದರಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ವಿಚಾರದಲ್ಲಿ ಪ್ರಗ್ಯಾಗೆ ಕಾಂಗ್ರೆಸ್ ಟಾಂಗ್ ನೀಡಿದೆ.
ಬಿಜೆಪಿ ಸಂಸದೆ ತಾನು ಆಯೋಜಿಸಲು ಸಹಾಯ ಮಾಡಿದ ವಿವಾಹ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ್ದು ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾಗಿದೆ. ಅನಾರೋಗ್ಯದ ಕಾರಣವನ್ನು ಉಲ್ಲೇಖಿಸಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದಿರುವ ಪ್ರಗ್ಯಾರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದೆ.
ಭೋಪಾಲ್‌ನ ಸಂಸದೆಯ ನಿವಾಸದಲ್ಲಿ ಎರಡು ಅತ್ಯಂತ ಬಡ ಕುಟುಂಬಗಳ ಯುವತಿಯರ ವಿವಾಹವನ್ನು ನಡೆಸಲಾಗಿದ್ದು, ಈ ಸಂದರ್ಭ 51 ವರ್ಷದ ಪ್ರಗ್ಯಾ ಠಾಕೂರ್, ಅತ್ಯಂತ ಸಂತೋಷದಿಂದ ನೃತ್ಯ ಮಾಡಿದ್ದು, ಅಷ್ಟು ಮಾತ್ರವಲ್ಲದೇ ಇತರರಿಗೂ ನೃತ್ಯ ಮಾಡಲು ಆಹ್ವಾನ ನೀಡಿದ್ದಾರೆ. ಬನ್ನಿ ನೃತ್ಯ ಮಾಡಿ ಎಂದು ಕೈ ಬೀಸಿ ಕರೆದಿದ್ದಾರೆ.

ಈ ವಿವಾಹದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ವಧುಗಳಿಬ್ಬರು, "ತುಂಬಾ ಸಂತೋಷವಾಗಿದೆ" ಎಂದು ಹೇಳಿದ್ದಾರೆ. ತನ್ನ ಮಗಳ ವಿವಾಹವನ್ನು ಆಯೋಜಿಸಿದ ಕಾರಣ ಭೋಪಾಲ್ ಸಂಸದೆಗೆ ಕೃತಜ್ಞನಾಗಿದ್ದೇನೆ ಎಂದು ವಧುವಿನ ತಂದೆ, ದೈನಂದಿನ ಕೂಲಿ ಕಾರ್ಮಿಕ ಹೇಳಿದ್ದಾರೆ.
हमारी भोपाल की सांसद बहन प्रज्ञा ठाकुर को जब भी बास्केट बॉल खेलते हुए , बग़ैर सहारे के चलते हुए या इस तरह ख़ुशी से झूमते हुए देखते है तो बड़ी ख़ुशी होती है…? pic.twitter.com/MR01Gumnun
— Narendra Saluja (@NarendraSaluja) July 7, 2021
"ನನಗೆ ಎರಡನೆಯ ಜೀವನವನ್ನು ನೀಡಲಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ತುಂಬಾ ಬಡವನಾಗಿದ್ದೇನೆ. ನನ್ನ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಲು ಬೇಕಾದಷ್ಟು ಹಣ ನನ್ನಲ್ಲಿ ಇಲ್ಲ. ಆದರೆ ಪ್ರಗ್ಯಾ ಠಾಕೂರ್ ನಮಗೆ ಸಹಾಯ ಮಾಡಿದರು. ಪ್ರಗ್ಯಾ ದೀರ್ಘ ಕಾಲ ಜೀವಿಸಲಿ ಎಂದು ನಾನು ತಾಯಿ ದೇವಿಯನ್ನು ಪ್ರಾರ್ಥಿಸುತ್ತೇನೆ. ನಾನು ತುಂಬಾ ಸಂತೋಷ ಮತ್ತು ಕೃತಜ್ಞನಾಗಿದ್ದೇನೆ," ಎಂದು ತಿಳಿಸಿದ್ದಾರೆ.
ಆದರೆ ಈ ನಡುವೆ ಈ ಪ್ರಗ್ಯಾ ಡ್ಯಾನ್ಸ್‌ಗೆ ಕಾಂಗ್ರೆಸ್ ನಾಯಕ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್‌ನ ನರೇಂದ್ರ ಸಲೂಜಾ, "ನಮ್ಮ ಭೋಪಾಲ್ ಸಂಸದೆ ಸಹೋದರಿ ಪ್ರಗ್ಯಾ ಠಾಕೂರ್ ಬಾಸ್ಕೆಟ್ ಬಾಲ್ ಆಡುವುದನ್ನು, ಯಾರದೇ ಬೆಂಬಲವಿಲ್ಲದೆ ನಡೆಯುವುದನ್ನು ಅಥವಾ ಈ ರೀತಿ ಸಂತೋಷದಿಂದ ಕುಣಿಯುವುದನ್ನು ನಾವು ನೋಡಿದಾಗಲೆಲ್ಲಾ ನನಗೆ ತುಂಬಾ ಸಂತೋಷವಾಗುತ್ತದೆ?" ಎಂದು ಕುಟುಕಿದ್ದಾರೆ.
ಈ ಹಿಂದೆ ಜುಲೈ ಮೊದಲ ವಾರದಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ ಭೋಪಾಲ್‌ನಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿತ್ತು. ಇತ್ತೀಚೆಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಬಿಜೆಪಿ ನಾಯಕಿ ಪ್ರಗ್ಯಾ ಸಿಂಗ್ ಠಾಕೂರ್, ಭಾರೀ ಸರಳ, ಸುಲಭವಾಗಿ ಬಾಸ್ಕೆಟ್ ಬಾಲ್ ಅನ್ನು ಆಡುವುದನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಕೆಲವು ಸ್ಥಳೀಯ ನಾಯಕರು ಮತ್ತು ಛಾಯಾಗ್ರಾಹಕರು ಜೊತೆಯಲ್ಲೇ ಇದ್ದ ಸಂದರ್ಭದಲ್ಲಿ ಪ್ರಗ್ಯಾ ಚೆಂಡನ್ನು ಸರಿಯಾಗಿ ಬಾಸ್ಕೆಟ್‌ಗೆ ಹಾಕುವಲ್ಲಿ ಸಫಲರಾಗಿ ಚಪ್ಪಾಳೆಗಿಟ್ಟಿಸಿಕೊಂಡಿದ್ದರು.
ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ನರೇಂದ್ರ ಸಲೂಜಾ, ''ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಠಾಕೂರ್ ಗಾಲಿ ಕುರ್ಚಿಯಲ್ಲೇ ಕೂತಿದ್ದನ್ನು ಇತ್ತೀಚೆಗೆ ನೋಡಿದ್ದೆ. ಆದರೆ ಇಂದು ಅವರು ಭೋಪಾಲ್‌ನ ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿದ್ದಾರೆ. ಇದನ್ನು ನೋಡಿ ಬಹಳ ಸಂತೋಷವಾಯಿತು,'' ಎಂದು ಹೇಳಿದ್ದರು.
10 ಮಂದಿ ಸಾವನ್ನಪ್ಪಿ, ಅನೇಕರು ಗಾಯಗೊಂಡ 2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಗ್ಯಾ ಸಿಂಗ್ ಆರೋಪಿಯಾಗಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2017 ರಲ್ಲಿ ಆರೋಗ್ಯದ ಆಧಾರದ ಮೇಲೆ ಪ್ರಗ್ಯಾ ಸಿಂಗ್ ಜಾಮೀನು ಪಡೆದಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್‌ನಿಂದ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್‌ನನ್ನು 3.6 ಲಕ್ಷ ಮತಗಳಿಂದ ಪ್ರಗ್ಯಾ ಸೋಲಿಸಿದ್ದಾರೆ.
(ಒನ್‌ಇಂಡಿಯಾ ಸುದ್ದಿ)
-
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Viral Video: ತೆಂಗಿನ ಚಿಪ್ಪನ್ನು ಮಗುವಿನ ಶೌಚಾಲಯ ಮಾಡಿಕೊಂಡ ದಂಪತಿ, ವಿಡಿಯೋ ವೈರಲ್ -
Free Biryani: ಒಂದು ಸಿಲಿಂಡರ್ ಕೊಡಿ, ತಿಂಗಳು ಪೂರ್ತಿ ಉಚಿತ ಬಿರಿಯಾನಿ ತಿನ್ನಿ: ಹೊಸೂರು ಹೋಟೆಲ್ನಿಂದ ಭರ್ಜರಿ ಆಫರ್ -
Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications