Get Updates
Get notified of breaking news, exclusive insights, and must-see stories!

ತಮ್ಮನ ಶವದ ಜೊತೆ ರಸ್ತೆ ಬದಿಯಲ್ಲಿ ಕುಳಿತು ಅಪ್ಪನ ಆಗಮನಕ್ಕೆ ಕಾಯುತ್ತಿರುವ 8 ವರ್ಷದ ಬಾಲಕ

ಭೋಪಾಲ್, ಜುಲೈ 11: ಅವನಿನ್ನೂ ಜಗತ್ತು ಏನೆಂದು ಅರಿಯಾದ 8 ವರ್ಷದ ಪುಟ್ಟ ಬಾಲಕ, ಆತ ರಸ್ತೆ ಬದಿಯಲ್ಲಿ ಕುಳಿತಿದ್ದಾನೆ, ಅವನ ಮಡಿಲಲ್ಲಿ ಅವನ 2 ವರ್ಷದ ಸಹೋದರ ಮಲಗಿದ್ದಾನೆ, ಅದು ಶವವಾಗಿ. ಹೊದಿಸಿದ ಬಟ್ಟೆಯಿಂದ ಆತನ ಪುಟ್ಟ ಕೈ ಹೊರಚಾಚಿದೆ. ಏನಾಗುತ್ತಿದೆ ಎಂದೇ ಅರಿಯದ ಹುಡುಗನ ಕಣ್ಣುಗಳಲ್ಲಿ ಸಾವಿರ ಪ್ರಶ್ನೆಗಳಿವೆ, ಬಡತನ ತಂದಿಟ್ಟ ಅಸಹಾಯಕತೆ ಇದೆ. ಆತ ಯಾರಿಗೋ ಕಾಯುತ್ತಿದ್ದಾನೆ.

ಹೌದು, ಆತ ತಂದೆಗಾಗಿ ಕಾಯುತ್ತಿದ್ದಾನೆ. ಆತನ ತಂದೆ ಸತ್ತಿರುವ ತನ್ನ ಎರಡು ವರ್ಷದ ಮಗುವಿನ ಮೃತದೇಹ ಊರಿಗೆ ಕೊಂಡೊಯ್ಯಲು ವಾಹನಕ್ಕಾಗಿ ಹುಡುಕಾಡುತ್ತಿದ್ದಾರೆ. ಆದರೆ ವಾಹನ ವ್ಯವಸ್ಥೆ ಇನ್ನು ಆಗಿಲ್ಲ. ಇಂತಹದ್ದೊಂದು ಮನಕಲಕುವ ದೃಶ್ಯ ಕಂಡುಬಂದದ್ದು ಮಧ್ಯಪ್ರದೇಶದ ಮೊರೆನಾ ಎನ್ನುವ ಪಟ್ಟಣದಲ್ಲಿ.

ಸ್ಥಳೀಯ ಪತ್ರಕರ್ತರೊಬ್ಬರು ಚಿತ್ರೀಕರಿಸಿದ ದೃಶ್ಯಗಳಲ್ಲಿ, 8 ವರ್ಷದ ಗುಲ್ಶನ್ ತನ್ನ 2 ವರ್ಷದ ಸಹೋದರ ರಾಜನ ಶವದೊಂದಿಗೆ ಕುಳಿತಿದ್ದಾನೆ. ಅವರ ತಂದೆ ಪೂಜಾರಾಮ್ ಜಾತವ್ ಅವರನ್ನು ಮನೆಗೆ ಕರೆದೊಯ್ಯಲು ವಾಹನಕ್ಕಾಗಿ ತೀವ್ರವಾಗಿ ಹುಡುಕಾಟ ನಡೆಸುತ್ತಿದ್ದಾರೆ.

8 Year Old Boy Waiting By Road Side With Body Of 2-Year-Old Brother

ಅಂಬಾಹ್‌ನ ಬದ್ಫ್ರಾ ಗ್ರಾಮದ ನಿವಾಸಿ ಪೂಜಾರಾಮ್ ಅವರು ತಮ್ಮ 2 ವರ್ಷದ ಮಗನನ್ನು ಆಂಬುಲೆನ್ಸ್‌ನಲ್ಲಿ ಸ್ಥಳೀಯ ಆಸ್ಪತ್ರೆಯಿಂದ ಮೊರೆನಾ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು.

ಗ್ರಾಮದಿಂದ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು

ರಕ್ತಹೀನತೆ ಮತ್ತು ಅಸ್ಸೈಟ್ಸ್‌ನಿಂದ (ದ್ರವದ ಶೇಖರಣೆಯಿಂದ ಉಂಟಾದ ಹೊಟ್ಟೆಯ ಊತ, ಹೆಚ್ಚಾಗಿ ಯಕೃತ್ತಿನ ಕಾಯಿಲೆ) ಬಳಲುತ್ತಿರುವ ರಾಜಾ ಚಿಕಿತ್ಸೆ ಫಲಕಾರಿಯಾಗದೆ ಮೊರೆನಾ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಅಷ್ಟರಲ್ಲಾಗಲೇ ಅವರನ್ನು ಕರೆತಂದಿದ್ದ ಆಂಬ್ಯುಲೆನ್ಸ್ ಹಿಂತಿರುಗಿತ್ತು.

30 ಕಿಲೋ ಮೀಟರ್ ದೂರದಲ್ಲಿರುವ ತನ್ನ ಗ್ರಾಮಕ್ಕೆ ಮೃತದೇಹವನ್ನು ಕೊಂಡೊಯ್ಯಲು ವಾಹನ ಬೇಕೆಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಬಳಿ ಪೂಜಾರಾಮ್ ಮನವಿ ಮಾಡಿದ್ದಾರೆ. ಆದರೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ. ಆಸ್ಪತ್ರೆಯಲ್ಲಿ ವಾಹನವಿಲ್ಲ ಎಂದು ಹೇಳಿದ್ದಾರೆ. ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ, ಆದರೆ ಅದಕ್ಕೆ ಹಣ ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಆಂಬ್ಯುಲೆನ್ಸ್‌ಗೆ ಪಾವತಿಸಲು ಹಣದ ಕೊರತೆ

ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ಆಂಬ್ಯುಲೆನ್ಸ್ ನಿರ್ವಾಹಕರೊಬ್ಬರು ಮಗುವಿನ ಶವವನ್ನು ಅವರ ಗ್ರಾಮಕ್ಕೆ ಸಾಗಿಸಲು 1,500 ರುಪಾಯಿ ಕೇಳಿದ್ದಾರೆ. ಆದರೆ ಪೂಜಾರಾಮ್ ಬಳಿ ಅಷ್ಟೊಂದು ಹಣವಿರಲಿಲ್ಲ.

ಅಸಹಾಯಕರಾದ ಪೂಜಾರಾಮ್ ತನ್ನ ಮಗ ರಾಜಾ ದೇಹವನ್ನು ಎತ್ತಿಕೊಂಡು ಇನ್ನೊಬ್ಬ ಮಗ ಗುಲ್ಶನ್ ಜೊತೆ ಆಸ್ಪತ್ರೆಯಿಂದ ವಾಪಸ್ ಬಂದಿದ್ದಾರೆ. ಅಲ್ಲಿ ಆತನಿಗೆ ಯಾವುದೇ ವಾಹನ ಸಿಗಲಿಲ್ಲ.

ಯಾವುದೇ ದಾರಿ ಕಾಣದೆ ಪೂಜಾರಾಮ್ ಗ್ರಾಮಕ್ಕೆ ತೆರಳಿ ಹಣದ ವ್ಯವಸ್ಥೆ ಮಾಡಿಕೊಂಡು ಬರಲು ನಿರ್ಧರಿಸಿದ್ದಾರೆ. ಮಗ ಗುಲ್ಶನ್‌ನನ್ನು ಮೊರೆನಾದ ನೆಹರೂ ಪಾರ್ಕ್‌ನ ಮುಂದೆ ಕೂರಿಸಿ, ಮನೆಗೆ ಹೋಗಿ ಬರುವುದಾಗಿ ಹೇಳಿದ್ದಾರೆ.

ಏನಾಗುತ್ತಿದೆ ಎನ್ನುವುದನ್ನೂ ಅರಿಯದ ಗುಲ್ಶನ್ ಅರ್ಧ ಗಂಟೆಯವರೆಗೆ ರಸ್ತೆ ಬದಿಯಲ್ಲೇ ತಮ್ಮನ ಮೃತದೇಹದ ಜೊತೆ ಕಾಲಕಳೆದಿದ್ದಾನೆ. ಆತನ ಕಣ್ಣುಗಳಲ್ಲಿ ತಂದೆ ಯಾವಾಗ ಹಿಂದಿರುಗುತ್ತಾರೆ ಎನ್ನುವ ನಿರೀಕ್ಷೆ, ಆತಂಕ, ಭಯ ಕಾಡುತ್ತಿತ್ತು.

ತಮ್ಮನ ದೇಹವನ್ನು ಮುದ್ದಿಸುತ್ತಾ, ನೊಣಗಳನ್ನು ಓಡಿಸುತ್ತಾ, ಕಣ್ಣೀರು ಹಾಕುತ್ತಾ ಕೂತಿದ್ದಾನೆ. ಅಷ್ಟರಲ್ಲೇ ಈ ದೃಶ್ಯವನ್ನು ಕಂಡ ಜನ ಗುಂಪುಗೂಡಲು ಆರಂಭಿಸಿದ್ದಾರೆ. ಆಗ ಯಾರೋ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Recommended Video

      ದೇವೇಗೌಡರ ಮನೆಯ ತುಳಸಿ ಕಟ್ಟೆಗೆ ನಮಸ್ಕರಿಸಿದ ದ್ರೌಪದಿ ಮುರ್ಮು | *Politics | OneIndia Kannda

      ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿ ಯೋಗೇಂದ್ರ ಸಿಂಗ್ ಮಗುವಿನ ಮೃತದೇಹವನ್ನು ಎತ್ತಿಕೊಂಡು ಗುಲ್ಶನ್‌ ಜೊತೆ ಮತ್ತೆ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪೂಜಾರಾಮ್‌ಗೆ ಮನೆಗೆ ಮಗುವಿನ ಮೃತದೇಹ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಯಿತು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+