ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಜಿನ್‌ನಿಂದ ಬೇರ್ಪಟ್ಟ ವಲಸೆ ಕಾರ್ಮಿಕರಿದ್ದ ರೈಲು ಬೋಗಿ!

|
Google Oneindia Kannada News

ಭೋಪಾಲ್, ಮೇ 10 : ವಲಸೆ ಕಾರ್ಮಿಕರು ಸಂಚಾರ ನಡೆಸುತ್ತಿದ್ದ ರೈಲಿನ ಬೋಗಿ ಎಂಜಿನ್‌ನಿಂದ ಬೇರ್ಪಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬೋಗಿಯನ್ನು ಪುನಃ ಎಂಜಿನ್‌ಗೆ ಸೇರಿಸಲಾಗಿದ್ದು, ಯಾವುದೇ ಅನಾಹುತವಾಗಿಲ್ಲ.

ಸೂರತ್‌ನಿಂದ ಪ್ರಯಾಗ್‌ರಾಜ್‌ಗೆ ವಲಸೆ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲಿನಲ್ಲಿ ಕರೆತರಲಾಗುತ್ತಿತ್ತು. ಶ್ರಮಿಕ್ ರೈಲಿನ 20 ಬೋಗಿಗಳು ಎಂಜಿನ್‌ನಿಂದ ಭಾನುವಾರ ಬೆಳಗ್ಗೆ ಬೇರ್ಪಟ್ಟಿವೆ.

ಬ್ರೇಕಿಂಗ್ : ಗೂಡ್ಸ್ ರೈಲು ಡಿಕ್ಕಿ; 14 ವಲಸೆ ಕಾರ್ಮಿಕರು ಸಾವು ಬ್ರೇಕಿಂಗ್ : ಗೂಡ್ಸ್ ರೈಲು ಡಿಕ್ಕಿ; 14 ವಲಸೆ ಕಾರ್ಮಿಕರು ಸಾವು

ಮಧ್ಯಪ್ರದೇಶದ ಬಿತೌನಿ ರೈಲು ನಿಲ್ದಾಣದಿಂದ 30 ಕಿ. ಮೀ. ದೂರದಲ್ಲಿ ಈ ಘಟನೆ ನಡೆದಿದೆ. ರೈಲನ್ನು ನಿಲ್ಲಿಸಿ ಬೋಗಿಯನ್ನು ಪುನಃ ಎಂಜಿನ್‌ಗೆ ಜೋಡಿಸಲಾಗಿದೆ.ಎಂಜಿನ್‌ನಿಂದ ಬೋಗಿ ಬೇರ್ಪಟ್ಟ ಬಗ್ಗೆ ಭಾರತೀಯ ರೈಲ್ವೆಯೇ ಪ್ರಕಟಣೆ ನೀಡಿದೆ. ಯಾವುದೇ ಅಪಾಯವಾಗಿಲ್ಲ ರೈಲು ಪುನಃ ಸಂಚಾರ ಆರಂಭಿಸಿದೆ ಎಂದು ಇಲಾಖೆ ಹೇಳಿದೆ.

ಲಾರಿ ಡಿಕ್ಕಿ; 5 ವಲಸೆ ಕಾರ್ಮಿಕರು ಸಾವು, 15 ಜನರಿಗೆ ಗಾಯಲಾರಿ ಡಿಕ್ಕಿ; 5 ವಲಸೆ ಕಾರ್ಮಿಕರು ಸಾವು, 15 ಜನರಿಗೆ ಗಾಯ

20 Coaches Of Train Carrying Migrant Workers Detached From Engine

ದೇಶದ ವಿವಿಧ ರಾಜ್ಯಗಳಲ್ಲಿರುವ ವಲಸೆ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲಿನ ಮೂಲಕ ಅವರ ತವರು ರಾಜ್ಯಗಳಿಗೆ ಕಳಿಸಲಾಗುತ್ತಿದೆ. ಗುಜರಾತ್‌ನ ಸೂರತ್‌ನಲ್ಲಿದ್ದ ಉತ್ತರ ಪ್ರದೇಶ ಮೂಲದ ಕಾರ್ಮಿಕರು ರೈಲಿನಲ್ಲಿ ರಾಜ್ಯಕ್ಕೆ ವಾಪಸ್ ಆಗುವಾಗ ಈ ಘಟನೆ ನಡೆದಿದೆ.

ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ

ರೈಲು ಹಳಿಯ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 14 ಜನರು ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ ಶುಕ್ರವಾರ ನಡೆದಿತ್ತು. ಮಧ್ಯಪ್ರದೇಶದಲ್ಲಿ ಲಾರಿ ಪಲ್ಟಿಯಾಗಿ 5 ಕಾರ್ಮಿಕರು ಮೃತಪಟ್ಟ ಘಟನೆ ಭಾನುವಾರ ಮುಂಜಾನೆ ನಡೆದಿತ್ತು.

English summary
20 coaches of the train carrying migrant workers from Surat to Prayagaraj got detached in Madhya Pradesh near Bhitauni station. The coaches have attached again & the train has resumed the journey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X