ಸೋಮಶೇಖರ್ ರೆಡ್ಡಿ ವಿರುದ್ಧ ಜಮೀರ್ ಏಕವಚನದಲ್ಲಿ ವಾಗ್ದಾಳಿ
ಬೆಂಗಳೂರು, ಜನವರಿ 6: ಸೋಮಶೇಖರ್ ರೆಡ್ಡಿಯವರನ್ನು ಜಮೀರ್ ಅಹಮದ್ ಅವರು ಏಕವಚನದಲ್ಲಿ ನಿಂದಿಸಿದ್ದಾರೆ.
ಸೋಮಶೇಖರ್ ರೆಡ್ಡಿಗೆ ಮಾನ ಮರ್ಯಾದೆ ಇದೆಯಾ, ಅವರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕು.ಮುಂದಿನ ಸೋಮವಾರದ ವರೆಗೆ ಕಾಯುತ್ತೇನೆ ಇಲ್ಲದೇ ಹೋದರೆ ಸೋಮಶೇಖರ್ ರೆಡ್ಡಿ ಮನೆ ಮುಂದೆ ನಾನೇ ಧರಣಿ ಕೂರುತ್ತೇನೆ ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನೆ ಮಾಡುವವರನ್ನು ಬಂದೂಕಿನಿಂದ ಶೂಟ್ ಮಾಡಿದರೆ ಜನಸಂಖ್ಯೆಯಾದರೂ ಕಡಿಮೆಯಾಗುತಿತ್ತು ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೆ ನೀವು ಶೇ.17ರಷ್ಟಿದ್ದೀರಿ ನಾವು 80 ರಷ್ಟಿದ್ದೇವೆ ನಾವು ತಿರುಗಿಬಿದ್ದರೆ ನಿಮ್ಮ ಪರಿಸ್ಥಿತಿ ಏನಾಗಬಹುದು ಊಹಿಸಿಕೊಳ್ಳಿ ಎಂದು ಹೇಳಿದ್ದರು.

ಇದಕ್ಕೆ ಆಕ್ರೋಶಗೊಂಡು ಮಾತನಾಡಿರುವ ಜಮೀರ್ ಅಹಮದ್ ಸೋಮಶೇಖರ್ ರೆಡ್ಡಿ ಖಡ್ಗ ತರ್ತಾನೋ ಏನ್ ತರ್ತಾನೋ ನೋಡ್ತೀನಿ, ಮೊದಲು ನನ್ನನ್ನ ಉಫ್ ಅಂತ ಹಾರಿಸಲಿ ನೋಡೋಣ, ಅವನು ಖಡ್ಗ ತಂದರೆ ನಾವು ಬಳೆ ಹಾಕ್ಕೊಂಡು ಕೂತಿಲ್ಲ ಎಂದು ಎದೆ ತಟ್ಟಿ ಸೋಮಶೇಖರ್ ರೆಡ್ಡಿಗೆ ಸವಾಲು ಹಾಕಿದ್ದಾರೆ.












Click it and Unblock the Notifications