ಬಯಲುಸೀಮೆ ರೈತ ಮಕ್ಕಳ ಪ್ರತಿಭಟನೆಯಲ್ಲಿ ನೀವು ಪಾಲ್ಗೊಳ್ಳಿ
ಬೆಂಗಳೂರು, ಅಕ್ಟೋಬರ್, 01 : ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮಾರ್ಗದರ್ಶನದಲ್ಲಿ ಯುವಶಕ್ತಿಯು 'ಬಯಲು ಸೀಮೆಯ ರೈತ ಮಕ್ಕಳ ಬೃಹತ್ ಪ್ರತಿಭಟನೆ'ಯನ್ನು ಅಕ್ಟೋಬರ್ 02ರ ಶುಕ್ರವಾರ ಗಾಂಧಿ ಜಯಂತಿಯಂದು ನಗರದ ಮೌರ್ಯ ಸರ್ಕಲ್ ನ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ನೀರಾವರಿ ತಜ್ಞ ಜಿ.ಎಸ್ ಪರಮಶಿವಯ್ಯನವರ ಪರಿಕಲ್ಪನೆಯಾದ 'ಸಮಗ್ರವಾದ ಶಾಶ್ವತ ನೀರಾವರಿ ಯೋಜನೆ'ಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುವ ಸಲುವಾಗಿ ನಡೆಯುವ ಈ ಬೃಹತ್ ಪ್ರತಿಭಟನೆ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಿ ಸಂಜೆ 5 ರವರೆಗೆ ಮುಂದುವರೆಯಲಿದೆ.[ನೀರಿನ ಬಗ್ಗೆ ಕಾಳಜಿ ಇದ್ದರೆ ಈ ಕಾರ್ಯಕ್ರಮಕ್ಕೆ ನೀವು ಬಂದೇ ಬರುತ್ತೀರಿ]

ಕೆರೆಗಳಿಗೆ ನದಿ ನೀರು ಹರಿಸುವಿಕೆಗೆ ಒತ್ತಾಯ, ಅಂತರ್ಜಲ ಅಭಿವೃದ್ಧಿ, ಜನ-ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವಿಕೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವ ಸಲುವಾಗಿ ಈ ಹೋರಾಟವನ್ನು ಕೈಗೊಂಡಿದ್ದಾರೆ.[ಬಾಪೂ ಇನ್ನೂ ಸತ್ತಿಲ್ಲ, ಇಲ್ಲೊಂದು ಪತ್ರ ಬರೆದಿದ್ದಾರೆ ಓದಿ!]
ಹೆಚ್ಚಿನ ಮಾಹಿತಿಗಾಗಿ 9900900114, 9035744933, 9483518201, http://yuvashakthi.org, http://neeravarihorata.org












Click it and Unblock the Notifications