ಯುವ ಬ್ರಿಗೇಡ್ ನಿಂದ 'ದಿ ಗೇಮ್ ಚೇಂಜರ್' ಸಂವಾದ
ಏಪ್ರಿಲ್ 9ರಂದು 'ಯುವ ಬ್ರಿಗೇಡ್' ಸಂಘಟನೆ 'ದಿ ಗೇಮ್ ಚೇಂಜರ್' ಎಂಬ ಸಂವಾದ ಕಾರ್ಯಕ್ರಮವೊಂದನ್ನು ಬೆಂಗಳೂರಿನ ಜಯನಗರದಲ್ಲಿ ಹಮ್ಮಿಕೊಂಡಿದೆ. ಖ್ಯಾತ ಪತ್ರಕರ್ತ ತುಫೈಲ್ ಅಹಮದ್ ಇದರಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಬೆಂಗಳೂರು, ಏಪ್ರಿಲ್ 7: ನಗರದಲ್ಲಿ ಏಪ್ರಿಲ್ 9ರಂದು 'ಯುವ ಬ್ರಿಗೇಡ್' ಸಂಘಟನೆ ಸಂವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. 'ದಿ ಗೇಮ್ ಚೇಂಜರ್' ಎಂಬ ಹೆಸರಿನಲ್ಲಿ ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ ಜಾತ್ಯಾತೀತತೆಯ ಸ್ಥಿತಿಗತಿ ಎಂಬ ವಿಚಾರದಲ್ಲಿ ಈ ಸಂವಾದವನ್ನು ಹಮ್ಮಿಕೊಳ್ಳಲಾಗಿದೆ.
ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಪತ್ರಕರ್ತ, ಲೇಖಕ ತುಫೈಲ್ ಅಹಮದ್ ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ. ಪಿಟಿಐ, ಬಿಬಿಸಿ ಸೇರಿದಂತೆ ಜಾಗತಿಕ ಮಟ್ಟದ ಹಲವು ಸಂಸ್ಥೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಸದ್ಯ ನವದೆಹಲಿಯ 'ಓಪನ್ ಸೋರ್ಸ್ ಇನ್ಸಿಟ್ಯೂಟ್'ನ ಕಾರ್ಯನಿರ್ವಾಹನ ನಿರ್ದೇಶಕರಾಗಿದ್ದಾರೆ.[ಪಂಡಿತ್ ಬಸವರಾಜ ರಾಜಗುರುವಿಗೆ ಗುರುವಂದನೆ ಸಲ್ಲಿಸಲು ಬನ್ನಿ]

ಪಾಕಿಸ್ತಾನದಿಂದ ಕಾರ್ಯನಿರ್ವಹಿಸುವ ಉಗ್ರರು ಹಾಗೂ ಜಿಹಾದಿಗಳ ಕುರಿತು ಇವರು 'ಜಿಹಾದಿಸ್ಟ್ ಥ್ರೆಟ್ ಟು ಇಂಡಿಯಾ - ದ ಕೇಸ್ ಫಾರ್ ಇಸ್ಲಾಮಿಕ್ ರಿಫಾರ್ಮೇಶನ್' ಎಂಬ ಪುಸ್ತಕವನ್ನೂ ಬರೆದಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಈಟಿವಿ ನ್ಯೂಸ್ ಮುಖ್ಯ ಉಪಸಂಪಾದಕ ರಮಾಕಾಂತ್ ಆರ್ಯನ್ ಭಾಗವಹಿಸಲಿದ್ದಾರೆ. ಯುವ ಬ್ರಿಗೇಡ್ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.[ಏಪ್ರಿಲ್ 8ರಂದು ಫೇಜರ್ ಟೌನ್‍ನಲ್ಲಿ ಕ್ರೈಸ್ತ ಬಾಂಧವರ 'ವಿಮೋಚನಾ ಓಟ']
ಎಲ್ಲಿ? ಯಾವಾಗ?
ಏಪ್ರಿಲ್ 9 ರಂದು ಭಾನುವಾರ ಸಂಜೆ 5.30 ಕ್ಕೆ ಬೆಂಗಳೂರಿನ ಜಯನಗರ ಏಳನೇ ಹಂತದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.












Click it and Unblock the Notifications