ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್‌ನಲ್ಲಿ ನಿಮ್ಮ ಮುಖವೇ ನಿಮಗೆ ಬೋರ್ಡಿಂಗ್ ಪಾಸ್, ಹೇಗಂತೀರಾ?

|
Google Oneindia Kannada News

ಬೆಂಗಳೂರು, ಮೇ 9: ಇನ್ನುಮುಂದೆ ವಿಮಾನ ಏರಲು ನಿಮಗೆ ಪ್ರತ್ಯೇಕವಾಗಿ ಬೋರ್ಡಿಂಗ್ ಪಾಸ್ ತೆಗೆದುಕೊಳ್ಳುವ ಅಗತ್ಯವಿಲ್ಲ.ನಿಮ್ಮ ಮುಖವೇ ನಿಮಗೆ ಬೋರ್ಡಿಂಗ್ ಪಾಸ್ ಆಗಲಿದೆ.

ಹೊಸ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸುವುದರಿಂದ ಇನ್ನುಮುಂದೆ ಬೋರ್ಡಿಂಗ್ ಪಾಸ್ ಹಿಡಿದು ಸರತಿ ಸಾಲಿನಲ್ಲಿ ನಿಲ್ಲುವ ತೊಂದರೆ ತಪ್ಪಲಿದೆ. ನಾಗರಿಕ ವಿಮಾನಯಾನ ಸಂಸ್ಥೆಯು ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಶೀಘ್ರದಲ್ಲಿ ಈ ವ್ಯವಸ್ಥೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾರಿಗೆ ಬರಲಿದೆ.

ದೇಶದಲ್ಲೇ ಮೊದಲ ಬಾರಿಗೆ ಕೆಐಎನಲ್ಲಿ ಈ ವ್ಯವಸ್ಥೆ

ದೇಶದಲ್ಲೇ ಮೊದಲ ಬಾರಿಗೆ ಕೆಐಎನಲ್ಲಿ ಈ ವ್ಯವಸ್ಥೆ

ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶನ್ ಬಾಕ್ಸ್‌ ಸಂಸ್ಥೆಯ ಸಹಯೋಗದಲ್ಲಿ ಕಾಗದ ರಹಿತ ಬಯೋಮೆಟ್ರಿಕ್‌ ಸೆಲ್ಫ್‌ ಬೋರ್ಡಿಂಗ್ ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಪ್ರಯಾಣಿಕರಿಗೆ ತ್ವರಿತ ಸೇವೆ ನೀಡುವ ಜತೆಗೆ, ಹೆಚ್ಚುವರಿ ಕ್ಯೂ ವ್ಯವಸ್ಥೆ ಕೊನೆಗೊಳ್ಳಲಿದೆ, ಜತೆಗೆ ಭವಿಷ್ಯದ ತಂತ್ರಜ್ಞಾನದ ಅನುಭವ ದೊರೆಯಲಿದೆ.

ಕಿರಿಕಿರಿ ರಹಿತ ತ್ವರಿತ ಸೇವೆಗಾಗಿ ಈ ವ್ಯವಸ್ಥೆ

ಕಿರಿಕಿರಿ ರಹಿತ ತ್ವರಿತ ಸೇವೆಗಾಗಿ ಈ ವ್ಯವಸ್ಥೆ

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಮತ್ತು ಡಿಜಿಯಾತ್ರಾ ಯೋಜನೆ ಅಡಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕಿರಿಕಿರಿ ರಹಿತ, ತ್ವರಿತ ಸೇವೆ ನೀಡುವ ಉದ್ದೇಶದಿಂದ ಬಯೋಮೆಟ್ರಿಕ್ ಫೇಸ್‌ ರೆಕಗ್ನಿಷನ್‌ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಇದರಿಂದ ಬೋರ್ಡಿಂಗ್ ಪಾಸ್ ಪಡೆಯಲು ಕ್ಯೂ ನಿಲ್ಲುವ ತೊಂದರೆ ತಪ್ಪಲಿದ್ದು, ಒಮ್ಮೆ ಪ್ರಯಾಣಿಕ ವ್ಯವಸ್ಥೆಯಡಿ ನೋಂದಾಯಿಸಿಕೊಂಡರೆ ಮತ್ತೆ ಅದನ್ನು ಪ್ರತಿ ಪ್ರಯಾಣದ ಸಂದರ್ಭದಲ್ಲಿ ಬಳಸಬಹುದಾಗಿದೆ. ಹೀಗಾಗಿ ಮುಖವೇ ಬೋರ್ಡಿಂಗ್ ಪಾಸ್ ಆಗಲಿದ್ದು, ಪೇಪರ್‌ರಹಿತ ವಿಮಾನ ನಿಲ್ದಾಣ ಮತ್ತು ಪ್ರಯಾಣಕ್ಕೆ ಅನುಕೂಲವಾಗಲಿದೆ.

ಕೆಂಪೇಗೌಡ ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಬದಲಾವಣೆ,ಕಾರಣಗಳೇನು? ಕೆಂಪೇಗೌಡ ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಬದಲಾವಣೆ,ಕಾರಣಗಳೇನು?

ಜೂನ್-ಜುಲೈ ವೇಳೆಗೆ ಲಭ್ಯ

ಜೂನ್-ಜುಲೈ ವೇಳೆಗೆ ಲಭ್ಯ

2019ರ ಜೂನ್-ಜುಲೈ ವೇಳೆಗೆ ಮೊದಲ ಹಂತದ ಅಳವಡಿಕೆಯಾಗಲಿದ್ದು, ಆರಂಭದಲ್ಲಿ ಜೆಟ್‌ ಏರ್‌ವೇಸ್‌, ಸ್ಪೈಸ್‌ ಜೆಟ್‌ ಮತ್ತು ಏರ್ ಏಷ್ಯಾ ಸಂಸ್ಥೆಗಳ ಪ್ರಯಾಣಿಕರಿಗೆ ಈ ಸೌಲಭ್ಯ ಲಭ್ಯವಾಗಲಿದೆ.

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಚೆಕ್‌ ಇನ್ ಸುಲಭ: ಕೇವಲ 45 ಸೆಕೆಂಡ್

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಚೆಕ್‌ ಇನ್ ಸುಲಭ: ಕೇವಲ 45 ಸೆಕೆಂಡ್

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನು ಮುಂದೆ ಕೇವಲ 45 ಸೆಕೆಂಡುಗಳಲ್ಲಿ ಲಗೇಜ್ ಚೆಕ್ ಇನ್ ಮಾಡಬಹುದಾಗಿದೆ.
ಸ್ವಯಂ ಚಾಲಿತ ಸೆಲ್ಫ್ ಬ್ಯಾಗ್ ಡ್ರಾಪ್ ಯಂತ್ರಗಳನ್ನು ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದೆ. ಈ ವ್ಯವಸ್ಥೆ ಅಳವಡಿಸಿಕೊಂಡ ದೇಶದ ಮೊದಲ ವಿಮಾನ ನಿಲ್ದಾಣ ಇದಾಗಿದೆ.

ಮ್ಯಾಟೆರ್ನಾ ಐಪಿಎಸ್ ಎಂಬ ಕಂಪನಿ ಈ ಯಂತ್ರಗಳನ್ನು ಅಳವಡಿಸಿದೆ.ಆರಂಭದಲ್ಲಿ ಏರ್ ಏಷಿಯಾ ಮತ್ತು ಸ್ಪೈಸ್ ಜೆಟ್ ಪ್ರಯಾಣಿಕರ ಬಳಕೆಗೆ ಮಾತ್ರ ಲಭ್ಯವಿರಲಿದೆ. ನಂತರದ ದಿನಗಳಲ್ಲಿ ಇತರೆ ಏರ್‌ಲೈನ್ ಪ್ರಯಾಣಿಕರಿಗೂ ಈ ಸೌಲಭ್ಯ ದೊರೆಯಲಿದೆ.

ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ

English summary
For passenger embarking from Kempegowda International Airport in the next few months. their faces will be their boarding passes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X