Bengaluru: ಜಿಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ: ವಿಷ ಸೇವಿಸಿ ಪ್ರೇಮಿಗೆ ಕಾಲ್!

ಬೆಂಗಳೂರು ಜುಲೈ 3: ಇತ್ತೀಚೆಗೆ ಯುವ ಪೀಳಿಗೆ ಚಿಕ್ಕ ಚಿಕ್ಕ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಪೋಷಕರ ಬಲವಂತಕ್ಕೆ ಮದುವೆಯಾಗಲು ಒಪ್ಪದ ಯುವತಿಯೊಬ್ಬಳು ತಾನು ಕೆಲಸ ಮಾಡುತ್ತಿದ್ದ ಜಿಮ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಂಗಳೂರಿನ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

22 ವರ್ಷದ ಶ್ರಾವಣಿ ಆತ್ಮಹತ್ಯೆಗೆ ಶರಣಾದ ಯುವತಿ. ಮಲ್ಲನ ಗೌಡ ಹಾಗೂ ಜ್ಯೋತಿ ದಂಪತಿಗಳ ಪುತ್ರಿಯಾದ ಶ್ರಾವಣಿ ದಾವಣಗೆರೆ ಮೂಲದವರು. ಬೆಂಗಳೂರಿನ ದಾಸರಳ್ಳಿಯ ಎಂಟನೇ ಮೈಲಿನಲ್ಲಿ ಶ್ರಾವಣಿ ವಾಸವಾಗಿದ್ದರು. ಗೋಲ್ಡ್‌ ಜಿಮ್‌ನಲ್ಲಿ ಅವರು ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.

Young woman committed suicide in Bengaluru gym drank poison and called her lover

ಇತ್ತೀಚೆಗೆ ಶ್ರಾವಣಿಗೆ ಪೋಷಕರು ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ ಶ್ರಾವಣಿಗೆ ಈ ಮದುವೆ ಇಷ್ಟವಿರಲಿಲ್ಲ. ಅವರು ಶಂಕರ ಎಂಬಾಂತನನ್ನು ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಶ್ರಾವಣಿ ಮದುವೆಗೆ ನಿರಾಕರಿಸಿದ್ದರು.

ಶ್ರಾವಣಿಯನ್ನು ಮದುವೆಗೆ ಒಪ್ಪಿಸಲು ತಂದೆ-ತಾಯಿ ದಾವಣಗೆರೆಯಿಂದ ಬೆಂಗಳೂರಿಗೆ ಆಗಮಿಸಿದ್ದರು. ಮೂರು ದಿನಗಳಿಂದ ತಾಯಿ ಜ್ಯೋತಿ ಶ್ರಾವಣಿಯನ್ನು ಮದುವೆಗೆ ಒಪ್ಪಿಸಲು ಪ್ರಯತ್ನಿಸುತ್ತಲೇ ಇದ್ದರು. ಅಲ್ಲದೆ ಮದುವೆಗೆ ಎಲ್ಲಾ ತಯಾರಿ ಕೂಡ ಮಾಡಿಕೊಂಡಿದ್ದರು.

ಇದರಿಂದ ಮನನೊಂದ ಆಕೆ ವಿಷ ಸೇವಿಸಿದ್ದಾರೆ. ಬಳಿಕ ತಾನು ಕೆಲಸ ಮಾಡುತ್ತಿದ್ದ ಜಿಮ್‌ಗೆ ಆಗಮಿಸಿದ್ದಾರೆ. ಈ ವೇಳೆ ತನ್ನ ಪ್ರೀಯತಮ ಶಂಕರ್‌ಗೆ ಕರೆ ಕೂಡ ಮಾಡಿದ್ದಾರೆ. ಈ ದೃಶ್ಯ ಜಿಮ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶುಲ್ಲಕ ಕಾರಣಕ್ಕೆ ಕೈಗೆ ಬಂದ ಮಗಳು ತಮ್ಮನ್ನು ಅಗಲಿರುವುದಕ್ಕೆ ಪೋಷಕರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.

ಶ್ರಾವಣಿ ರೀಲ್ಸ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಎಲ್ಲರೊಂದಿಗೆ ಚೆನ್ನಾಗಿದ್ದ ಹುಡುಗಿ ಪೋಷಕರ ಮನವೊಲಿಸಿ ತಾನು ಇಷ್ಟಪಟ್ಟವರನ್ನೇ ಮದುವೆ ಮಾಡಿಕೊಳ್ಳಬಹುದಾಗಿತ್ತು. ಆದರೆ ಶ್ರಾವಣಿ ಹಾಗೆ ಮಾಡಲಿಲ್ಲ. ತನ್ನ ಸುಂದರ ಬದುಕಿಗೆ ತಾನೇ ಕಲ್ಲು ಹಾಕಿಕೊಂಡಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹರಿಸುತ್ತಿದ್ದಾರೆ.

Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+