ಪಿಂಕ್ ಡ್ರೆಸ್..ಮುಖಕ್ಕೆ ಮಾಸ್ಕ್: ದರ್ಶನ್ ನೋಡಲು ಜೈಲಿಗೆ ಬಂದ ಈ ಯುವತಿ ಯಾರು..?
ಬೆಂಗಳೂರು, ಜೂನ್ 29: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಸದ್ಯ ವಿಚಾರಣಾಧೀನ ಕೈದಿಯಾಗಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದು, ದರ್ಶನ್ ನೋಡಲು ಜೈಲಿಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ನೋಡಲು ಸಂಬಂಧಿಕರು ಮಾತ್ರವಲ್ಲದೇ ದರ್ಶನ್ ಅಭಿಮಾನಿಗಳು ಕೂಡ ಬರುತ್ತಿದ್ದು, ಭೇಟಿಗೆ ಅವಕಾಶ ಸಿಗದೇ ವಾಪಸ್ ಆಗುತ್ತಿದ್ದಾರೆ. ಇತ್ತ ವಾರದ ಹಿಂದೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಭೇಟಿಯಾಗಿದ್ದರು. ಹೀಗಾಗಿ ಯಾರಿಗೂ ಮತ್ತೆ ಭೇಟಿಗೆ ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ.

ಆದರೆ ಕೆಲ ಅಭಿಮಾನಿಗಳು ಹಾಗೂ ಕೆಲ ಸೆಲೆಬ್ರೆಟಿಗಳು ದಿನವೂ ದರ್ಶನ್ ನೋಡಲು ಪರಪ್ಪನ ಅಗ್ರಹಾರದತ್ತ ಬರುತ್ತಿದ್ದು, ನಿನ್ನೆ ಮಾಸ್ಕ್ ಧರಿಸಿ ಬಂದ ಯುವತಿ ಎಲ್ಲರ ಗಮನ ಸೆಳೆದಿದ್ದಾಳೆ. ಪಿಂಕ್ ಡ್ರೆಸ್ ತೊಟ್ಟು, ಮುಖಕ್ಕೆ ಮಾಸ್ಕ್ ಧರಿಸಿದ ಯುವತಿ ತನ್ನ ಗುರುತು ಮರೆ ಮಾಚಿದ್ದು, ಯಾರಿಗೂ ಪರಿಚಯ ಸಿಗದಂತೆ ಬಂದಿದ್ದಾಳೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನ ಬಳಿ ದರ್ಶನ್ ನೋಡಲು ಆಗಮಿಸಿದ್ದ ಯುವತಿ ಬ್ಲೂ ಕಲರ್ ಹುಂಡೈ ಕ್ರೆಟಾ ಕಾರಿನಲ್ಲಿ ಬಂದಿದ್ದು, ಮಾಸ್ಕ್ ಧರಿಸಿಯೇ ಕಾರಿನಿಂದ ಇಳಿದು ಕ್ಯಾಮೆರಾ ನೋಡುತ್ತಿದ್ದಂತೆ ಓಡೋಡಿ ಹೋಗಿ ಪೊಲೀಸರ ಬಳಿಕ ಮನವಿ ಮಾಡಿದ್ದಾರೆ. ನಾನು ದರ್ಶನ್ ಸಂಬಂಧಿ ಅವರನ್ನು ನೋಡಲೇಬೇಕು ಎಂದಿದ್ದಾರೆ. ಆದರೆ ಯುವತಿಯ ಈ ಮನವಿ ನಿರಾಕರಿಸಲಾಗಿದೆ ಎನ್ನಲಾಗಿದೆ.
ಬಳಿಕ ಮಾಹಿತಿ ನೀಡಿದ ಯುವತಿ ದರ್ಶನ್ ಸರ್ ನಮ್ಮ ಕುಟುಂಬದವರು. ಅವರನ್ನು ನೋಡಲು ಬಂದಿದ್ದೆ. ಜೈಲು ಅಧಿಕಾರಿಗಳು ಅವಕಾಶ ನೀಡುವುದಿಲ್ಲ ಎಂದಿದ್ದಾರೆ ಎಂದು ಹೇಳಿ ತನ್ನ ಹೆಸರು ಹೇಳದೆ ಅಲ್ಲಿಂದ ಹೊರಟು ಹೋಗಿದ್ದಾರೆ. ಯುವತಿ ಯಾರಿರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ. ಆದರೆ ಯಾರಿಗೂ ಇದು ನಟಿ ಅಥವಾ ನಿಜವಾಗಿ ದರ್ಶನ್ ಸಂಬಂಧಿ ಎನ್ನುವುದು ಖಚಿತವಿಲ್ಲ. ಸದ್ಯ ಈ ಯುವತಿಯ ಫೋಟೋಗಳನ್ನು ನೋಡಿದ ಕೆಲವರು ಇದು ನಟಿ ಸೊನಾಲ್ ಇರಬಹುದು ಎಂದು ಅಂದಾಜಿಸಿದ್ದಾರೆ. ಆದರೆ ಖಚಿತತೆ ಯಾರಿಗೂ ಇಲ್ಲ.












Click it and Unblock the Notifications