ಬರ್ತ್‌ಡೇ ಪಾರ್ಟಿಗೆ ಹೋಗಲು ಬಿಡಲಿಲ್ಲವೆಂದು ಯುವತಿ ಆತ್ಮಹತ್ಯೆ
ಬೆಂಗಳೂರು, ಮಾರ್ಚ್ 16: ಸ್ನೇಹಿತೆಯ ಬರ್ತ್‌ಡೇ ಪಾರ್ಟಿಗೆ ಹೋಗಲು ಅವಕಾಶ ನೀಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಬೇಸರಗೊಂಡು ಬೆಂಗಳೂರಿನ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಿಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಅರ್ಪಿತ (18) ನೇಣು ಹಾಕಿಕೊಂಡಿರುವ ಯುವತಿ, ನಿನ್ನೆ ರಾತ್ರಿ (ಮಾರ್ಚ್ 16) ಅರ್ಪಿತಾಳ ಗೆಳತಿಯದ್ದು ಹುಟ್ಟುಹಬ್ಬದ ಪಾರ್ಟಿ ಇತ್ತು, ಪಾರ್ಟಿಗೆ ಹೋಗುತ್ತೇನೆಂದು ಅರ್ಪಿತಾ ಕೇಳಿದಾಗ ತಾಯಿ ಹೋಗಬಾರದೆಂದು ತಡೆದಿದ್ದಾರೆ.
ಪರೀಕ್ಷೆ ಸಮೀಪಿಸುತ್ತಿದೆ, ಮತ್ತು ರಾತ್ರಿ ಸಮಯ ಪಾರ್ಟಿಗಳಿಗೆ ಹೋಗುವುದು ತರವಲ್ಲ ಎಂದು ಅರ್ಪಿತಾಳ ತಾಯಿ ವಿರೋಧಿಸಿದ್ದಾರೆ, ತಾಯಿಯೊಂದಿಗೆ ವಾಗ್ವಾದ ನಡೆಸಿದ ಅರ್ಪಿತಾ ನಂತರ ಬೇಸರಗೊಂಡ ಅರ್ಪಿತಾ ತನ್ನ ಕೋಣೆಗೆ ತೆರಳಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಗರದ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications