ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವನಹಳ್ಳಿ: ಜ. 12 ರಂದು ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆ ಯೋಗ ಸ್ಪರ್ಧೆ

|
Google Oneindia Kannada News

ಬೆಂಗಳೂರು ಗ್ರಾಮಾಂತರ, ಜ.11 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆಯ ಅಂಗವಾಗಿ 2023 ರ ಜನವರಿ 12 ರಂದು ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಯೋಗ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಜನವರಿ 12 ರಂದು ಬೆಳಗ್ಗೆ 8.00 ರಿಂದ 9.00 ಗಂಟೆಯವರೆಗೆ 2023ರ ಜನವರಿ 15 ರಂದು ನಡೆಯುವ ಯೋಗಥಾನ್ ಗಿನ್ನಿಸ್ ದಾಖಲೆಗೆ ರಿಹರ್ಸಲ್ ನಡೆಯಲಿದೆ. ಬೆಳಗ್ಗೆ 9.00 ಗಂಟೆಗೆ ಉಪಹಾರದ ವಿರಾಮವಿರುತ್ತದೆ.

ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್‌ ಟೌನ್‌ ರಿಂಗ್‌ ರಸ್ತೆ ನಿರ್ಮಾಣ ಕೈ ಬಿಟ್ಟ ಸರ್ಕಾರಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್‌ ಟೌನ್‌ ರಿಂಗ್‌ ರಸ್ತೆ ನಿರ್ಮಾಣ ಕೈ ಬಿಟ್ಟ ಸರ್ಕಾರ

ಉಪಹಾರದ ವಿರಾಮದ ಬಳಿಕ ಬೆಳಗ್ಗೆ 9.30 ಗಂಟೆಗೆ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ನಡೆಯುತ್ತದೆ. ನಂತರ 10.00 ಗಂಟೆಗೆ ಯೋಗ ಸ್ಪರ್ಧೆಗಳು ಪ್ರಾರಂಭವಾಗುತ್ತದೆ.

Yoga competition as part of Swami Vivekananda Jayanti celebrations on Jan12

*ಯೋಗ ಸ್ಪರ್ಧೆಗಳ ವಿವರ*

ಯೋಗಾಸನ ಸ್ಪರ್ಧೆ (ವೈಯಕ್ತಿಕ), ಆರ್ಟಿಸ್ಟಿಕ್ ಯೋಗ ಸ್ಪರ್ಧೆ (ವೈಯಕ್ತಿಕ), ರಿದಮಿಕ್ (ತಾಳಬದ್ಧ), ಯೋಗ ಸ್ಪರ್ಧೆ (ವೈಯಕ್ತಿಕ)

*ವಯೋಮಿತಿ*

8 ರಿಂದ 12 ವರ್ಷದವರೆಗೆ

12 ವರ್ಷ ಮೇಲ್ಪಟ್ಟು - 15 ವರ್ಷದೊಳಗೆ

15 ವರ್ಷ ಮೇಲ್ಪಟ್ಟು - 18 ವರ್ಷದೊಳಗೆ

18 ವರ್ಷ ಮೇಲ್ಪಟ್ಟು - 21 ವರ್ಷದೊಳಗೆ

ಮತ್ತು 21 ವರ್ಷ ಮೇಲ್ಪಟ್ಟವರಿಗೆ.

*ಎಲ್ಲಾ ವಯೋಮಿತಿಯವರಿಗೆ ಕಡ್ಡಾಯ ಆಸನಗಳು*

ವೃಕ್ಷಾಸನ, ತ್ರಿಕೋನಾಸನ, ಪಶ್ಚಿಮೋತ್ತಾಸನ, ಗೋಮುಖಾಸನ, ಅರ್ಧ ಮತ್ತೇಂದ್ರಾಸನ, ಉಷ್ಟ್ರಾಸನ, ಧನುರಾಸನ, ಆಕರ್ಣಧನುರಾಸನ, ಉತ್ತಿತ ಪದ್ಮಾಸನ, ಸರ್ವಾಂಗಾಸನ.

*ಆರ್ಟಿಸ್ಟಿಕ್ ಯೋಗ (ಕಲಾತ್ಮಕ) ಸ್ಪರ್ಧೆ*

ನಟರಾಜಾಸನ, ಪೂರ್ಣಧನುರಾಸನ, ಹನುಮಾನಾಸನ,ಪೂರ್ಣ ಶಲಭಾಸನ, ಬಕಾಸನ, ಚಕ್ರಾಸನ, ವಾತಾಯನಾಸನ, ಸೇತುಬಂಧ ಸರ್ವಾಂಗಾಸನ.

*ರಿದಮಿಕ್ ಯೋಗಸ್ಪರ್ಧೆ' (ತಾಳಬದ್ಧ)*

10 ಚದುರ ಅಡಿಯ ಪರಿಮಿತಿಯಲ್ಲಿ, ನಾಲ್ಕು ಮೂಲೆ ಹಾಗೂ ಮಧ್ಯಭಾಗದಲ್ಲಿ ಹಿಂದೆ ಬಾಗಿ, ಮುಂದೆ ಬಾಗಿ, ನಿಂತು ಮಾಡುವ, ತಿರುಚಿ ಮಾಡುವ ಸಮತ್ವ (ಬ್ಯಾಲೆನ್ಸಿಂಗ್) ಕೈಗಳ ಮೇಲೆ ಮಾಡುವ ಎರಡೆರಡು ಆಸನ ಒಟ್ಟು 10 ಆಸನಗಳನ್ನು ಪ್ರದರ್ಶಿಸಬೇಕು. ಇದಕ್ಕೆ 2 ನಿಮಿಷ 30 ಸೆಕೆಂಡುಗಳ ಅವಧಿಯಿರುತ್ತದೆ.

ಸಂಗೀತ (ದೇಶಭಕ್ತಿ, ಭಾವಗೀತೆ, ಜಾನಪದ ಗೀತೆ, ಭಕ್ತಿಗೀತೆ, ಉತ್ತಮ, ಸುಸಂಸ್ಕೃತ ಹಾಡುಗಳೊಂದಿಗೆ) ನೃತ್ಯ ಹಾಗೂ ಆಸನಗಳ ಸಮ್ಮಿಳನದೊಂದಿಗೆ ಪ್ರದರ್ಶಿಸಬೇಕು.

ಉತ್ತಮ, ವೈವಿದ್ಯಮಯ ಉಡುಪುಗಳೊಂದಿಗೆ ಪ್ರದರ್ಶಿಸಬಹುದು. ಸ್ಪರ್ಧಿಗಳೇ ಸಂಗೀತಕ್ಕೆ ಸಂಬಂಧಿಸಿದ ವ್ಯವಸ್ಥೆ ಮಾಡಿಕೊಳ್ಳಬೇಕು.

Yoga competition as part of Swami Vivekananda Jayanti celebrations on Jan12

*ಸಾಮಾನ್ಯ ನಿಯಮಗಳು*

ಯೋಗಾಸನ ಸ್ಪರ್ಧೆಯಲ್ಲಿ ಸಂಘಟಕರು ತಿಳಿಸುವ ಮೂರು ಕಡ್ಡಾಯ ಆಸನಗಳೊಂದಿಗೆ, ಎರಡು ಐಚ್ಚಿಕ (ಕ್ಲಿಷ್ಟಕರ) ಆಸನಗಳನ್ನು ಮಾಡಬೇಕು. ಅಂತಿಮ ಸ್ಥಿತಿಯಲ್ಲಿ 10 ಸೆಕೆಂಡುಗಳ ಕಾಲ ನೆಲೆಸಬೇಕು. ಎರಡು ಪ್ರಯತ್ನಗಳು ಮಾತ್ರ ಇರುತ್ತದೆ.

ಆರ್ಟಿಸ್ಟಿಕ್ (ಕಲಾತ್ಮಕ) ಯೋಗ ಸ್ಪರ್ಧೆಯಲ್ಲಿ ಸ್ಪರ್ಧಿಗಳು 8 ಆಸನಗಳಲ್ಲಿ ಯಾವುದಾದರು 5 ಆಸನಗಳನ್ನು ಪ್ರದರ್ಶಿಸಬೇಕು. ಒಂದೇ ಪ್ರಯತ್ನದಲ್ಲಿ ಆಸನಗಳನ್ನು ಮಾಡಬೇಕು. 1 ನಿಮಿಷ 30 ಸೆಕೆಂಡುಗಳಲ್ಲಿ 5 ಆಸನಗಳನ್ನು ಪ್ರದರ್ಶಿಸಬೇಕು. ಅಂತಿಮ ಸ್ಥಿತಿಯಲ್ಲಿ 10 ಸೆಕೆಂಡುಗಳ ಕಾಲ ನೆಲೆಸಬೇಕು.

ರಿದಮಿಕ್ (ತಾಳಬದ್ಧ ಯೋಗ ಸ್ಪರ್ಧೆ) ಸ್ಪರ್ಧೆಯಲ್ಲಿ ಆಸನಗಳ ಅಂತಿಮ ಸ್ಥಿತಿಯಲ್ಲಿ 4 ರಿಂದ 5 ಸೆಕೆಂಡುಗಳ ಕಾಲ ನೆಲೆಸಬೇಕು, ಒಬ್ಬ ಸ್ಪರ್ಧಿಯ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿದೆ.

ಸ್ಪರ್ಧೆಯ ನಿಯಮಗಳು ಅಗತ್ಯ ಬಿದ್ದಲ್ಲಿ ಬದಲಾಯಿಸುವ ವ್ಯವಸ್ಥೆ ಸಂಘಟಕರಿಗೆ ಸೇರಿದ್ದು. ತೀರ್ಪುಗಾರರ ತೀರ್ಮಾನವೇ ಅಂತಿಮ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದವರು ಭಾಗವಹಿಸಬಹುದು. ಜನನ ಪ್ರಮಾಣ ಪತ್ರಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಮುನ್ನ ಸಂಘಟಕರಿಗೆ ನೀಡಬೇಕು. ವಿಜೇತರಿಗೆ ಪ್ರತಿ ವಿಭಾಗದಲ್ಲಿ ಮೂರು ಬಹುಮಾನಗಳನ್ನು, ಪ್ರಶಸ್ತಿ ಪತ್ರಗಳು ನೀಡಲಾಗುವುದು. ಸ್ಪರ್ಧೆಗಳು ಗಂಡು ಮತ್ತು ಹೆಣ್ಣು ಸ್ಪರ್ಧಿಗಳಿಗೆ ಪ್ರತ್ಯೇಕವಾಗಿ ನಡೆಸಲಾಗುವುದು.

*ಉಡುಪುಗಳು*

ಗಂಡಸರು ಒಳ ಉಡುಪಿನೊಂದಿಗೆ ಚಡ್ಡಿ(ಶಾರ್ಟ್ಸ್) ಧರಿಸಿರಬೇಕು, ಬಾಲಕಿಯರು ಜಿಮ್ಯಾಸ್ಟಿಕ್ ಉಡುಪನ್ನು ಧರಿಸಬೇಕು. ಮಹಿಳೆಯರು ಟೀ-ಶರ್ಟ್ ಮತ್ತು ಟ್ರಾಕ್ ಪ್ಯಾಂಟ್ ಧರಿಸಲು ಅವಕಾಶವಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Yoga competition as part of Swami Vivekananda Jayanti celebrations on January 12 in Devanahalli Town Stadium. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X