Bengaluru: ಬೆಂಗಳೂರು ನಮ್ಮ ಮೆಟ್ರೋ ಹೊಸ ಯೆಲ್ಲೋಲೈನ್‌ನಿಂದ ತಪ್ಪದ ಸಂಕಷ್ಟ!

Bengaluru Metro Yellow Line: ಬೆಂಗಳೂರಿನಲ್ಲಿ ಮೆಟ್ರೋ ಅಭಿವೃದ್ಧಿಯಿಂದ ಟ್ರಾಫಿಕ್ ಜಾಮ್ ಕಡಿಮೆಯಾಗಲಿದೆ ಎನ್ನುವುದು ಮತ್ತೊಮ್ಮೆ ಸುಳ್ಳಾಗಿದೆ ಎಂದು ಹೇಳಲಾಗುತ್ತಿದೆ. ಹೌದು ಬೆಂಗಳೂರಿಗೆ ಮೆಟ್ರೋ ಬರುತ್ತಿದ್ದಂತೆಯೇ ಬೆಂಗಳೂರಿನಲ್ಲಿ ವಿಪರೀತವಾಗಿರುವ ಟ್ರಾಫಿಕ್ ಜಾಮ್ ಕಡಿಮೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಇದು ಸುಳ್ಳಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೌದು ಬೆಂಗಳೂರಿನಲ್ಲಿ ಮೆಟ್ರೋ ಲೈನ್ ಅಥವಾ ಮಾರ್ಗಗಳ ಅಭಿವೃದ್ಧಿಯಾದರೂ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಬೆಂಗಳೂರು ನಮ್ಮ ಮೆಟ್ರೋದ ಹಳದಿ ಮಾರ್ಗ. ಅದು ಹೇಗೆ ಎನ್ನುವ ವಿವರವನ್ನು ನೋಡೋಣ.

ಬೆಂಗಳೂರು ಮೆಟ್ರೋದ ಹಳದಿ ಮಾರ್ಗವು ಹೊಸೂರು ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಲು ವಿಫಲವಾಗಿದೆ. ಬೆಂಗಳೂರು ನಗರದ ಸಂಚಾರ ನಿಯಂತ್ರಣ ಸರ್ಕಸ್‌ ಅಥವಾ ಪ್ರಯತ್ನದಲ್ಲಿ ಮತ್ತೊಂದು ವೈಫಲ್ಯ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಗೆ ಪ್ರವೇಶವನ್ನು ಸುಧಾರಿಸಲು ಹಾಗೂ ನಗರದ ವಿವಿಧ ಭಾಗದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಬೆಂಗಳೂರು ಮೆಟ್ರೋ ಯೆಲ್ಲೋ ಲೈನ್ ಹೊಂದಿತ್ತು. ನಮ್ಮ ಮೆಟ್ರೋದ ಬಹುನಿರೀಕ್ಷಿತ ಹಳದಿ ಮಾರ್ಗವು ನಿರೀಕ್ಷಿತ ಪರಿಹಾರವನ್ನು ನೀಡಿಲ್ಲ ಎಂದು ಹೇಳಲಾಗುತ್ತಿದೆ. ಹೌದು ಪ್ರಾರಂಭದಲ್ಲಿ ಈ ಮಾರ್ಗದಲ್ಲಿ ಶೇ 10ರಿಂದ 20% ರಷ್ಟು ಟ್ರಾಫಿಕ್ ಜಾಮ್ ಇಳಿಕೆಯಾಗಿದೆ ಎಂದು ವರದಿಯಾಗಿತ್ತು.

Yellow Line Brings Hope but More Traffic Chaos to Bengaluru

ಆದರೆ, ದೀರ್ಘ ಅವಧಿಯಲ್ಲಿ ಇದು ಸುಳ್ಳಾಗಿದೆ. ಬೆಂಗಳೂರಿನ ಅತ್ಯಂತ ಜನನಿಬಿಡ ಕಾರಿಡಾರ್‌ಗಳಲ್ಲಿ ಒಂದಾದ ಯೆಲ್ಲೋಲೈನ್ ಮೆಟ್ರೋ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಈ ಭಾಗದಲ್ಲಿ ಇನ್ನೂ ಟ್ರಾಫಿಕ್ ಜಾಮ್‌ ಸಮಸ್ಯೆ ಮುಂದುವರಿದಿದೆ ಎಂದು ಹೇಳಲಾಗಿದೆ.

ಬೆಂಗಳೂರು ಟ್ರಾಫಿಕ್‌ ಪೊಲೀಸರ ದತ್ತಾಂಶವು ಇದನ್ನು ಬಹಿರಂಗಪಡಿಸಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ನಡುವಿನ 12 ಕಿ.ಮೀ. ಉದ್ದದ ರಸ್ತೆ - ಇದು ಮೆಟ್ರೋ ಮಾರ್ಗಕ್ಕೆ ಸಮಾನಾಂತರವಾಗಿ ಚಲಿಸುತ್ತದೆ. ಈ ಮಾರ್ಗದಲ್ಲಿ ಇನ್ನೂ ಟ್ರಾಫಿಕ್ ಜಾಮ್‌ ಸಮಸ್ಯೆ ಕಡಿಮೆಯಾಗಿಲ್ಲ. ಈ ಮಾರ್ಗಗಳಲ್ಲಿ ಟ್ರಾಫಿಕ್ ಜಾಮ್ ಮುಂದುವರಿದಿದೆ. ಅಂತರರಾಜ್ಯ ಬಸ್ಸುಗಳು ಮತ್ತು ದೈನಂದಿನ ಪ್ರಯಾಣಿಕರು ವ್ಯಾಪಕವಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಸರಾಸರಿ ದೈನಂದಿನ ಟ್ರಾಫಿಕ್ ಜಾಮ್‌ ಉದ್ದವನ್ನು 60 ಕಿ.ಮೀ.ಗಿಂತ ಹೆಚ್ಚು ಎಂದು ದಾಖಲಿಸಲಾಗಿದೆ.

ಮೆಟ್ರೋ ಆರಂಭಕ್ಕೆ ಒಂದು ತಿಂಗಳ ಮೊದಲು, ಸರಾಸರಿ ಟ್ರಾಫಿಕ್ ಜಾಮ್ ದಿನಕ್ಕೆ 65.2 ಕಿ.ಮೀ. ಆಗಿತ್ತು. ಉದ್ಘಾಟನೆಯ ನಂತರ, ಆಗಸ್ಟ್ 11 ಮತ್ತು ಸೆಪ್ಟೆಂಬರ್ 11 ರ ನಡುವೆ, ಈ ಸಂಖ್ಯೆ 61.7 ಕಿ.ಮೀ.ಗೆ ಸ್ವಲ್ಪ ಕಡಿಮೆಯಾಗಿದೆ - ಇದು ನಿರೀಕ್ಷೆಗಳಿಗಿಂತ ಬಹಳ ಕಡಿಮೆ. ಹಳದಿ ಮಾರ್ಗವು ಬೆಂಗಳೂರು ಮೆಟ್ರೋದ ಒಟ್ಟಾರೆ ಪ್ರಯಾಣಿಕರ ಸಂಖ್ಯೆಯನ್ನು 1 ಮಿಲಿಯನ್ ಗಡಿ ದಾಟಲು ಸಹಾಯ ಮಾಡಿದೆ. ಆದರೆ ಇದರ ಪ್ರಯೋಜನಗಳು ಕೇವಲ ಸಂಖ್ಯೆಗೆ ಸಮೀತವಾಗಿದೆ. ಟ್ರಾಫಿಕ್ ಜಾಮ್ ಕಡಮೆಯಾಗುವುದರಲ್ಲಿ ಕಾಣಿಸುತ್ತಿಲ್ಲ. ಈ ಮಾರ್ಗದಲ್ಲಿ ವೈಯಕ್ತಿಕ ವಾಹನ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಹೇಳಲಾಗುತ್ತಿದೆ.

ಈ ಮಾರ್ಗದಲ್ಲಿ ಕಡಿಮೆ ಮೆಟ್ರೋ ರೈಲುಗಳ ಸಂಚಾರ (ರೈಲು ಆವರ್ತನ) ಮತ್ತು ಮೆಟ್ರೋದ ನಿಲ್ದಾಣಗಳ ಸಂಪರ್ಕ ಅಡೆತಡೆಗಳು ಸಹ ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಎಂಡ್ ಟು ಎಂಡ್ ಕನೆಕ್ಟಿವಿಟಿ (ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನೇರ ಸಾರಿಗೆ ಸಂಪರ್ಕ) ಇಲ್ಲದೆ ಇರುವುದು ಪ್ರಮುಖ ಸವಾಲಾಗಿದೆ. ಪಾರ್ಕಿಂಗ್ ಸೌಲಭ್ಯಗಳ ಕೊರತೆ ಮತ್ತು ಹೆಚ್ಚಿನ ಆಟೋ ಬೆಲೆ ಈ ಮಾರ್ಗದಲ್ಲಿ ಪ್ರಮುಖ ಅಡೆತಡೆಗಳಾಗಿವೆ.

ಪ್ರಸ್ತುತ ಹಳದಿ ಮಾರ್ಗ ರೈಲುಗಳು ಪ್ರತಿ 19 ನಿಮಿಷಗಳಿಗೊಮ್ಮೆ ಕಾರ್ಯನಿರ್ವಹಿಸುತ್ತವೆ. ಇದರಿಂದ ಈ ಭಾಗದಲ್ಲಿ ಜನ ಹೆಚ್ಚು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಅಧಿಕಾರಿಗಳು ಹಳದಿ ಮಾರ್ಗ ನಿಲ್ದಾಣಗಳಿಗೆ ಫೀಡರ್ ಸೇವೆಗಳು (ಮೆಟ್ರೋ ನಿಲ್ದಾಣ ಮತ್ತು ಒಳ ಪ್ರದೇಶಗಳ ನಡುವಿನ ಬಸ್‌ಗಳು) ಕಿಕ್ಕಿರಿದು ತುಂಬಿದ್ದು, ಪ್ರಯಾಣಿಕರ ನಿರಾಶೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+