ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಹಂಕದಲ್ಲಿ ಕರೋನಾ: ನ್ಯೂಟೌನ್‌ನಲ್ಲಿರುವ ಆಸ್ಪತ್ರೆ ಬಂದ್

|
Google Oneindia Kannada News

ಬೆಂಗಳೂರು, ಮೇ 21: ಬೆಂಗಳೂರಿನಲ್ಲಿ ಯಲಹಂಕದಲ್ಲಿ ಆಂಧ್ರಮೂಲದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನಲೆ ನ್ಯೂಟೌನ್ ನಲ್ಲಿರುವ ಆಸ್ಪತ್ರೆ ಬಂದ್ ಮಾಡಲಾಗಿದೆ.

Recommended Video

ಅವನಿಗೆ ಇರೋ ಅಷ್ಟು ಬುದ್ಧಿ ನನಗಿಲ್ಲ ಎಂದ GT DeveGowda

ಯಲಹಂಕ ನ್ಯೂಟೌನ್‌ನ ಖಾಸಗಿ ಆಸ್ಪತ್ರೆಯಲ್ಲಿ ಆಂಧ್ರ ಮೂಲದ ವ್ಯಕ್ತಿ ಚಿಕಿತ್ಸೆಗೆ ದಾಖಲಾಗಿದ್ದು, ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಬಿಬಿಎಂಪಿ ಆರೋಗ್ಯಾಧಿಕಾರಿಗಳು ಸೋಂಕಿತ ವ್ಯಕ್ತಿ ಇದ್ದ ಖಾಸಗಿ ಆಸ್ಪತ್ರೆಯನ್ನು ಮುಚ್ಚಿ ಸೀಲ್ ಡೌನ್ ಮಾಡಿದ್ದಾರೆ.

ಭಾರತದಲ್ಲಿ 14 ದಿನದಲ್ಲೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಡಬಲ್! ಭಾರತದಲ್ಲಿ 14 ದಿನದಲ್ಲೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಡಬಲ್!

ಆಂಧ್ರದ ಹಿಂದೂಪುರದ ನಿವಾಸಿ ಮೂಗಿನಲ್ಲಿ ರಕ್ತಸ್ರಾವ ತೊಂದರೆಯಿಂದ ಬಳಲುತ್ತಿದ್ದು, ಮೊದಲಿಗೆ ಹಿಂದೂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋಗಿದ್ದಾರೆ. ಅಲ್ಲಿಂದ ಕರ್ನೂಲ್ ಗೆ ತೆರಳಿದ್ದಾರೆ. ಅಲ್ಲಿ ಚಿಕಿತ್ಸೆ ದೊರೆಯದಿದ್ದಾಗ ಯಲಹಂಕ ನ್ಯೂಟೌನ್ ಖಾಸಗಿ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.

A Telugu Based Person Tested Positive In Yelahanka New Town Hospital

ನ್ಯೂಟೌನ್ ಖಾಸಗಿ ಆಸ್ಪತ್ರೆಯವರು ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯ ಬೇಸ್ ಮೆಂಟ್‌ನಲ್ಲಿ ಐಸೋಲೇಷನ್ ಸೆಂಟರ್ ಮಾಡಿಕೊಂಡಿದ್ದು, ಅಲ್ಲೇ ರೋಗಿಯ ವಿವಿಧ ಪರೀಕ್ಷೆಗಳು ನಡೆಸಿದ್ದಾರೆ. ಹೀಗಾಗಿ, ರೋಗಿಯು ಆಸ್ಪತ್ರೆಯಲ್ಲಿ ಓಡಾಟ ಮಾಡಿರುವುದು ಕಡಿಮೆ ಎನ್ನಲಾಗಿದೆ.

ನಿನ್ನೆ ರಾತ್ರಿ ಈತನಿಗೆ ಪಾಸಿಟಿವ್ ದೃಢಪಟ್ಟಿದ್ದರಿಂದ ರಾತ್ರಿಯೇ ಕೋವಿಡ್ ಅಂಬ್ಯುಲೆನ್ಸ್ ನಲ್ಲಿ ಶಿಫ್ಟ್ ಮಾಡಲಾಗಿದೆ. ರೋಗಿಯ ಸಂಪರ್ಕಕ್ಕೆ ಬಂದಿದ್ದ ಹತ್ತು ಜನರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಖಚಿತ ಮೂಲಗಳು ತಿಳಿಸಿವೆ.

English summary
A telugu based person tested positive in Yelahanka new town hospital. BBMP officers seal down that private hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X