• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿಗರಿಗೆ ಶುಭ ಸುದ್ದಿ ಕೊಟ್ಟ ಬಿಎಂಆರ್‌ಸಿಎಲ್

|
Google Oneindia Kannada News

ಬೆಂಗಳೂರು, ಆಗಸ್ಟ್ 10 : ಬೆಂಗಳೂರು ನಗರದ ಜನರಿಗೆ ಬಿಎಂಆರ್‌ಸಿಎಲ್ ಶುಭ ಸುದ್ದಿ ಕೊಟ್ಟಿದೆ. ಯಲಚೇನಹಳ್ಳಿ-ಅಂಜನಾಪುರ ನಡುವಿನ ನಮ್ಮ ಮೆಟ್ರೋ ಮಾರ್ಗದಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ. ಸೆಪ್ಟೆಂಬರ್‌ನಲ್ಲಿ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ನಡೆಸಲಿದೆ.

   SSLC Results : Chikkaballapura ರಾಜ್ಯಕ್ಕೆ ಫರ್ಸ್ಟ್ | Oneindia Kannada

   ನಮ್ಮ ಮೆಟ್ರೋ ಯೋಜನೆ 2ನೇ ಹಂತದ ಮೊದಲ ವಿಸ್ತರಿತ ಮಾರ್ಗ ಇದಾಗಿದೆ. ರೀಚ್ 4 ಬಿ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಮುಗಿದ ಬಳಿಕ ನಮ್ಮ ಮೆಟ್ರೋ ರೈಲಿನ ಸಂಚಾರ ಆರಂಭವಾಗಲಿದೆ. ಪ್ರಸ್ತುತ ನಾಗಸಂದ್ರದಿಂದ ಯಲಚೇನಹಳ್ಳಿ ತನಕ ಮಾತ್ರ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ.

   ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್ ಹೆಸರಿಡಿ: ಎಎಪಿ ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್ ಹೆಸರಿಡಿ: ಎಎಪಿ

   ಒಟ್ಟು 6.29 ಕಿ. ಮೀ. ಮಾರ್ಗವಿದು, ಶೇ 90ರಷ್ಟು ಕೆಲಸಗಳು ಪೂರ್ಣಗೊಂಡಿದ್ದು ಪರೀಕ್ಷಾರ್ಥ ಸಂಚಾರಕ್ಕೆ ಮಾರ್ಗ ಸಿದ್ಧವಾಗಿದೆ. ನಿಲ್ದಾಣಗಳ ನಿರ್ಮಾಣಕಾರ್ಯವೂ ಅಂತ್ಯಗೊಂಡಿದೆ. ಟ್ರಾಕ್ಷನ್ ಮತ್ತು ಸಿಗ್ನಲಿಂಗ್ ಕಾರ್ಯ ಮಾತ್ರ ಬಾಕಿ ಇದೆ.

   ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ; ಟೆಂಡರ್‌ ಆಹ್ವಾನ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ; ಟೆಂಡರ್‌ ಆಹ್ವಾನ

   ಈ ಹಿಂದೆ ರೂಪಿಸಿದ್ದ ಯೋಜನೆ ಅನ್ವಯ ಜುಲೈ 25ಕ್ಕೆ ಪರೀಕ್ಷಾರ್ಥ ಸಂಚಾರ ಆರಂಭವಾಗಿ, ಆಗಸ್ಟ್ 15ರ ವೇಳೆಗೆ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ, ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮ ಕಾಮಗಾರಿ ವಿಳಂಬವಾಯಿತು.

   ನಮ್ಮ ಮೆಟ್ರೋ ಕಾಮಗಾರಿ; 12 ಲಕ್ಷ ಮೌಲ್ಯದ ವಸ್ತುಗಳು ಕಳವು ನಮ್ಮ ಮೆಟ್ರೋ ಕಾಮಗಾರಿ; 12 ಲಕ್ಷ ಮೌಲ್ಯದ ವಸ್ತುಗಳು ಕಳವು

   ನಿಲ್ದಾಣಗಳ ಕಾಮಗಾರಿ

   ನಿಲ್ದಾಣಗಳ ಕಾಮಗಾರಿ

   ನಮ್ಮ ಮೆಟ್ರೋ ನಿಲ್ದಾಣದಲ್ಲಿನ ಫ್ಲಾಟ್‌ಫಾರಂ, ಟಿಕೆಟ್ ಕೌಂಟರ್, ಗ್ರಾಹಕ ಸೇವಾ ಕೇಂದ್ರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹಳಿಗಳ ಅಗಲ ಪರೀಕ್ಷೆ ನಂತರ ರೈಲ್ವೆ ಇಲಾಖೆಯ ಸುರಕ್ಷತಾ ಆಯುಕ್ತರು ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರಕ್ಕೆ ಅನುಮೋದನೆ ನೀಡಲಿದ್ದಾರೆ.

   ನಮ್ಮ ಮೆಟ್ರೋ ರೀಚ್ 4ಬಿ ಮಾರ್ಗ

   ನಮ್ಮ ಮೆಟ್ರೋ ರೀಚ್ 4ಬಿ ಮಾರ್ಗ

   ನಮ್ಮ ಮೆಟ್ರೋ ಯೋಜನೆ 2ನೇ ಹಂತದ ಮೊದಲ ವಿಸ್ತರಿತ ಮಾರ್ಗವಿದು. ರೀಚ್ 4ಬಿ ಮಾರ್ಗ 6.29 ಕಿ. ಮೀ. ದೂರವಿದೆ. ಒಟ್ಟು 5 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿದೆ. ತುಮಕೂರು ರಸ್ತೆಯ ನಾಗಸಂದ್ರದಿಂದ ಹೊರಡುವ ರೈಲು ಕನಕಪುರ ರಸ್ತೆಯ ಅಂಜನಾಪುರವನ್ನು ಸಂಪರ್ಕಿಸಲಿದೆ.

   ನಿಲ್ದಾಣಗಳ ವಿವರ

   ನಿಲ್ದಾಣಗಳ ವಿವರ

   ಈ ಮಾರ್ಗದಲ್ಲಿ ಯಲಚೇನಹಳ್ಳಿ-ಕೋಣನಕುಂಟೆ ಕ್ರಾಸ್-ದೊಡ್ಡಕಲ್ಲಸಂದ್ರ-ವಜ್ರಹಳ್ಳಿ-ತಲಘಟ್ಟಪುರ-ಅಂಜನಾಪುರ ನಿಲ್ದಾಣಗಳು ಬರುತ್ತವೆ. 2016ರ ಮೇ ತಿಂಗಳಿನಲ್ಲಿ ಈ ಮಾರ್ಗದ ಕಾಮಗಾರಿಯನ್ನು ಆರಂಭಿಸಲಾಗಿದೆ. ಎನ್‌ಸಿಸಿ ಲಿಮಿಟೆಡ್ ಈ ಮಾರ್ಗದ ಕಾಮಗಾರಿ ಗುತ್ತಿಗೆಯನ್ನು ಪಡೆದಿದೆ.

   ಸೆಪ್ಟೆಂಬರ್‌ನಲ್ಲಿ ವಾಣಿಜ್ಯ ಸಂಚಾರ

   ಸೆಪ್ಟೆಂಬರ್‌ನಲ್ಲಿ ವಾಣಿಜ್ಯ ಸಂಚಾರ

   ಆಗಸ್ಟ್ ಅಂತ್ಯದಲ್ಲಿ ಯೆಲಚೇನಹಳ್ಳಿ-ಅಂಜನಾಪುರ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಪೂರ್ಣಗೊಂಡರೆ ಸೆಪ್ಟೆಂಬರ್‌ನಲ್ಲಿ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

   English summary
   BMRCL said that trail run in Yelachenahalli-Anjanapura namma metro route will be be began in August end. 6.29 km route has 5 stations.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X