ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಪುಟ ವಿಸ್ತರಣೆ: ಮತ್ತೆ ದೆಹಲಿ ಪ್ರವಾಸ ಮುಂದೂಡಿದ ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಡಿಸೆಂಬರ್ 23: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ದೆಹಲಿ ಪ್ರವಾಸವನ್ನು ಮುಂದೂಡಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯುಂಟಾಗಿದೆ.

ಒಂದು ವಾರದ ಬಳಿಕ ದೆಹಲಿಗೆ ತೆರಳುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. ಇದು ಮತ್ತೆ ಸಂಪುಟ ವಿಸ್ತರಣೆಯ ಕಗ್ಗಂಟಾಗಿಯೇ ಉಳಿಯಲಿದೆ.

ಸಚಿವ ಸ್ಥಾನ ಸಿಗಲ್ಲ, ಬಿಜೆಪಿಗೆ ಸೆಡ್ಡು ಹೊಡೆಯಲು ಶಾಸಕ ರೆಡಿಸಚಿವ ಸ್ಥಾನ ಸಿಗಲ್ಲ, ಬಿಜೆಪಿಗೆ ಸೆಡ್ಡು ಹೊಡೆಯಲು ಶಾಸಕ ರೆಡಿ

ಇನ್ನು ಸಿಎಎ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಮಂಗಳೂರು ಗೋಲಿಬಾರ್ ಪ್ರಕರಣವನ್ನು ಸಿಐಡಿಗೆ ಕೊಡಲಾಗಿದೆ.,ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರಿಗೆ ಕಠಿಣ ಕ್ರಮ ಆಗಬೇಕು.ಈಗಾಗಲೇ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ.

Yediyurappa Postpones Delhi Tour Again

ಇನ್ನಾದರೂ ಮಂಗಳೂರು ಶಾಂತವಾಗಿರುತ್ತೆ ಎಂದು ಭಾವಿಸಿದ್ದೇನೆ, ಈ ಕಾನೂನಿನಿಂದ ಅಲ್ಪಸಂಖ್ಯಾತರ ಬಗ್ಗೆ ಯಾವ ರೀತಿ ಸಮಸ್ಯೆ ಆಗುತ್ತೆ ಅಂತಾ ಯಾರು ಹೇಳ್ತಿಲ್ಲ, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಈ ದೇಶದ ಯಾವೊಬ್ಬ ಅಲ್ಪ ಸಂಖ್ಯಾತನಿಗೂ ತೊಂದರೆ ಆಗಲ್ಲ ಅಂತಾ.ಇಷ್ಟಾದರೂ ಕೂಡ ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ನ ಷಡ್ಯಂತ್ರ, ಪಿತೂರಿಯಿಂದ ಗೊಂದಲ ಸೃಷ್ಠಿಯಾಗುತ್ತಿದೆ.

ಈ ಬಗ್ಗೆ ಜನರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ,ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಸಿಐಡಿ ಬೇರೆ, ಮ್ಯಾಜಿಸ್ಟ್ರೇಟ್ ತನಿಖೆ ಬೇರೆ, ಸದ್ಯ ಮಂಗಳೂರು ಘಟನೆಯ ನ್ನು ಸಿಐಡಿಗೆ ಕೊಡಲಾಗಿದೆ ಎಂದು ತಿಳಿಸಿದ್ದಾರೆ.

English summary
Chief Minister B.S. Yediyurappa has postponed the Delhi tour again and the ministerial position is again disappointing for aspirants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X