'8 ಎಂಎಂ' ಸಿನಿಮಾ ನೋಡಿ ರಿಲ್ಯಾಕ್ಸ್ ಮಾಡಿದ ಯಡಿಯೂರಪ್ಪ

ಬೆಂಗಳೂರು, ನವೆಂಬರ್ 21: ನಿರಂತರವಾಗಿ ರಾಜಕೀಯ ಚಟುವಟಿಕೆಗಳಲ್ಲಿ ಮುಳುಗಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬುಧವಾರ ಜಂಜಾಟದಿಂದ ಹೊರಬರುವ ಪ್ರಯತ್ನದಲ್ಲಿದ್ದರು.

ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳಿಂದಾಗಿ ಬಿಡುವಿಲ್ಲದೆ ದಣಿದಿದ್ದ ಯಡಿಯೂರಪ್ಪ, ಕನ್ನಡ ಸಿನಿಮಾ ನೋಡಿ ತುಸು ದಣಿವಾರಿಸಿಕೊಂಡರು.

'8 ಎಂಎಂ' ವಿಮರ್ಶೆ : ಗನ್ ಜೊತೆ ಆಟ, ಜೂಟಾಟ, ಹೊಡೆದಾಟ

ತಮ್ಮದೇ ಪಕ್ಷದ ಜಗ್ಗೇಶ್ ಅಭಿನಯದ '8 ಎಂಎಂ' ಸಿನಿಮಾವನ್ನು ಯಡಿಯೂರಪ್ಪ ವೀಕ್ಷಿಸಿದರು. ಬುಧವಾರ ಸಂಜೆ ಒರಾಯನ್ ಮಾಲ್‌ಗೆ ತೆರಳಿದ ಅವರು, ಸಿನಿಮಾ ವೀಕ್ಷಿಸಿದರು.

yeddyurappa watched 8 mm movie acted by jaggesh

ಅವರಿಗೆ ನಟ, ರಾಜಕಾರಣಿ ಜಗ್ಗೇಶ್ ಕೂಡ ಸಾಥ್ ನೀಡಿದರು.

ಇಂದು ಒರಾಯನ್ ಮಾಲ್‌ನಲ್ಲಿ ಬಿಎಸ್ ಯಡಿಯೂರಪ್ಪ ಅವರು 8 ಎಂಎಂ ಚಿತ್ರ ನೋಡಲು ಬರುತ್ತಾರೆ..ಅವರಿಗೆ ನಮ್ಮ ಚಿತ್ರತಂಡದಿಂದ ತುಂಬು ಹೃದಯದ ಸ್ವಾಗತ..ನಾನು ಇರುವೆ ನೀವುಬನ್ನಿ ಬೇಟಿಯಾಗುವ..ಧನ್ಯವಾದಗಳು ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.

ರಾಜಕಾರಣದಲ್ಲಿ ಸದಾ ಸಕ್ರಿಯರಾಗಿರುವ ಯಡಿಯೂರಪ್ಪ ಈ ಹಿಂದೆ ಟೈಗರ್, ನೀ ಇಲ್ಲದ ಮೇಲೆ ಮುಂತಾದ ಸಿನಿಮಾಗಳನ್ನು ನೋಡಿದ್ದರು.

ಕಳೆದ ವಾರ ಬಿಡುಗಡೆಯಾದ 8 ಎಂಎಂ ಸಿನಿಮಾ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಸ್ಯ ಪ್ರಧಾನ ಸಿನಿಮಾ ಮತ್ತು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಗ್ಗೇಶ್, ವಿಭಿನ್ನವಾದ ಥ್ರಿಲ್ಲರ್ ಕಥನದ ಚಿತ್ರದಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+