ದಿಢೀರನೆ ತಿರುಪತಿ ತಿಮ್ಮಪ್ಪನ ಮೊರೆ ಹೋದ ಯಡಿಯೂರಪ್ಪ
ಬೆಂಗಳೂರು, ಮೇ 05: ಸಿಎಂ ಕುಮಾರಸ್ವಾಮಿ ಅವರು ಶತೃ ವಿನಾಶಕ್ಕೆ ಹೋಮ-ಹವನದ ಮೊರೆ ಹೋದರೆ ಯಡಿಯೂರಪ್ಪ ಅವರು ತಿರುಪತಿಗೆ ಹೋಗಿ ವೆಂಕಟೇಶ್ವರನ ದರ್ಶನ ಪಡೆದು ಬಂದಿದ್ದಾರೆ.
ದಿಢೀರನೆ ನಿನ್ನೆ ತಿರುಪತಿಗೆ ತೆರಳಿದ ಯಡಿಯೂರಪ್ಪ ಅವರು ದರ್ಶನ ಮುಗಿಸಿ ಅಷ್ಟೆ ಬೇಗ ವಾಪಸ್ ಬಂದಿದ್ದಾರೆ. ಅಲ್ಲಿ ವಿಶೇಷ ಪೂಜೆಯನ್ನು ಅವರು ಕೈಗೊಂಡಿದ್ದರು.
ಇಂದು ಈ ಬಗ್ಗೆ ಸುದ್ದಿಗಾರರೊಂದಿಗೆ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ನೀಗಲಿ, ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲೆಂದು ದೇವರ ಬಳಿ ಪ್ರಾರ್ಥಿಸಿದ್ದಾಗಿ ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರು ಹೋಮ ಮಾಡಿಸಲಿಕ್ಕೂ, ಯಡಿಯೂರಪ್ಪ ಅವರು ತಿರುಪತಿಗೆ ಅಚಾನಕ್ಕಾಗಿ ಹೋಗಿರುವುದಕ್ಕೂ ಏನಾದರೂ ಸಂಬಂಧ ವಿದೆಯೇ ಎಂಬ ಚರ್ಚೆಯೂ ಅಲ್ಲಲ್ಲಿ ಕೇಳಿ ಬರುತ್ತಿದೆ.
ಮುಂದುವರೆದು ಮಾತನಾಡಿದ ಯಡಿಯೂರಪ್ಪ ಅವರು, ಉಪಚುನಾವಣೆಯಲ್ಲಿ ನಮ್ಮದೇ ಗೆಲುವು ಎಂದು ಹೇಳಿದ್ದಾರೆ. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 22 ಸೀಟು ಪಕ್ಕಾ ಎಂದು ಮತ್ತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications