ಬಿಎಸ್ ವೈ ವಿರುದ್ಧದ ಡಿನೋಟಿಫೈ ಕೇಸು ತನಿಖೆಗೆ ತಡೆಯಾಜ್ಞೆ ಇಲ್ಲ
ಯಡಿಯೂರಪ್ಪ ವಿರುದ್ಧದ ಡಿನೋಟಿಫೈ ಪ್ರಕರಣ ತನಿಖೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಣೆ. ಬಿಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಟ. 2010ರ ಗಂಗೇನಹಳ್ಳಿಯಲ್ಲಿನ ಡಿನೋಟಿಫೈ ಹಗರಣ.
ಬೆಂಗಳೂರು, ಜುಲೈ 3: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಡಿನೋಟಿಫೈ ಪ್ರಕರಣದ ತನಿಖೆಯನ್ನು ನಿಲ್ಲಿಸಲು ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ರಾಜ್ಯ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಇದರಿಂದಾಗಿ, ತನಿಖೆಗೆ ತಡೆಯಾಜ್ಞೆ ಬಂದು ಕೊಂಚ ನಿರಾಳತೆಯನ್ನು ನಿರೀಕ್ಷಿಸುತ್ತಿದ್ದ ಬಿಎಸ್ ವೈ ಅವರಿಗೆ ಕೊಂಚ ಹಿನ್ನಡೆಯುಂಟಾಗಿದೆ.

ಏನಿದು ಪ್ರಕರಣ?: 2010ರಲ್ಲಿ ಗಂಗೇನಹಳ್ಳಿ ವ್ಯಾಪ್ತಿಯಲ್ಲಿ 1 ಎಕರೆ 11 ಗುಂಟೆ ಜಮೀನನ್ನು ಡಿನೋಟಿಫೈ ಮಾಡಿರುವ ಪ್ರಕರಣದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ, ನ್ಯಾಯಾಲಯದಿಂದ ತನಿಖೆಗೆ ಆದೇಶವಾಗಿ, ಲೋಕಾಯುಕ್ತ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ ಬಿಎಸ್ ವೈ ವಿರುದ್ಧ ತನಿಖೆ ಆರಂಭಿಸಿದ್ದರು.
ಈ ತನಿಖೆಯನ್ನು ನಿಲ್ಲಿಸುವಂತೆ ಬಿಎಸ್ ವೈ ನ್ಯಾಯಾಲಯದ ಮೆಟ್ಟಿಲೇರಿದ್ದರು.












Click it and Unblock the Notifications