• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎಂಗೆ ಹೊಸ ಕಾರು ಬೇಡ್ವಂತೆ ಹಳೆಯ ಕಾರೇ ಸಾಕಂತೆ: ಕಾರಣ ಇಲ್ಲಿದೆ

|
   ಸಿಎಂಗೆ ಹೊಸ ಕಾರು ಬೇಡ್ವಂತೆ ಹಳೆಯ ಕಾರೇ ಸಾಕಂತೆ: ಕಾರಣ ಇಲ್ಲಿದೆ | Oneindia Kannada

   ಬೆಂಗಳೂರು, ಆಗಸ್ಟ್ 3: ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಎಂಟು ದಿನ ಕಳೆದಿದ್ದರೂ ಹಳೆಯ ಕಾರಿನಲ್ಲೇ ಓಡಾಡುತ್ತಿದ್ದಾರೆ.

   ಮುಖ್ಯಮಂತ್ರಿ ಹುದ್ದೇಗೇರಿದ ಬಳಿಕ ಸರ್ಕಾರದಿಂದ ಬರುವುದೆಲ್ಲಾ ಬರಲಿ ಎನ್ನುವ ಸಚಿವರು ಎಷ್ಟೋ ಮಂದಿ ಇದ್ದಾರೆ. ಆದರೆ ಯಡಿಯೂರಪ್ಪ ಮಾತ್ರ ಸರ್ಕಾರದಿಂದ ಕಾರು ಬೇಡ ಎಂದಿದ್ದಾರೆ.

   ಸಿಎಂ ಯಡಿಯೂರಪ್ಪ ನಿವಾಸಕ್ಕೆ ಅನರ್ಹ ಶಾಸಕರ ಭೇಟಿ: ಏನೇನು ಚರ್ಚೆ?

   ವಿಧಾನಸಭೆ ವಿಪಕ್ಷ ನಾಯಕರಾಗಿದ್ದ ವೇಳೆ ಬಳಸುತ್ತಿದ್ದ ಕಾರನ್ನೇ ಬಳಸಲು ಯಡಿಯೂರಪ್ಪ ಇಚ್ಛಿಸಿದ್ದಾರೆ. KA 01 G 6309 ನೋಂದಣಿ ಸಂಖ್ಯೆಯ ಟೊಯೋಟಾ ಫಾರ್ಚೂನರ್ ಕಾರನ್ನೇ ಬಳಸುತ್ತಿದ್ದಾರೆ.

   ಆ ಕಾರು ಬಳಕೆ ಆರಂಭಿಸಿದ ಬಳಿಕ ಯಡಿಯೂರಪ್ಪ ಅಂದುಕೊಂಡ ರೀತಿಯಲ್ಲೇ ರಾಜಕೀಯ ಬೆಳವಣಿಗೆಗಳು ಜರುಗಿವೆ ಅದೇ ಕಾರಿನಲ್ಲೇ ಲೋಕಸಭಾ ಚುನಾವಣೆಗೆ ಓಡಾಟ ನಡೆಸಿದ್ದ ಯಡಿಯೂರಪ್ಪ 25 ಸ್ಥಾನ ಗೆದ್ದು ದೇವೇಗೌಡ, ಖರ್ಗೆ, ಮೊಯ್ಲಿ, ಮುನಿಯಪ್ಪ ಸೋಲಿಸುವ ಉದ್ದೇಶ ಕೂಡಾ ಈಡೇರಿದೆ.

   ಸರ್ಕಾರ ರಚನೆಯ ಪ್ರಯತ್ನ ಕೂಡಾ ಈ ಕಾರು ಬಳಕೆ ಆರಂಭಿಸಿದ ಬಳಿಕ ಕೈ ಹಿಡಿದಿದೆ ಆಟೋ ಗೇರ್ ಹೊಂದಿರುವ ಕಾರು ವೇಗವಾಗಿ ಮುನ್ನುಗ್ಗುತ್ತದೆ ಸಿಎಂ ಆಗಿರುವ ಕಾರಣ ಎಲ್ಲಾ ಕಡೆ ವೇಗವಾಗಿ ತಲುಪಲು ಸಹಾಯ ಆಗುತ್ತದೆ.

   ಯಡಿಯೂರಪ್ಪ ಕೂಡಾ ಒಂದು ವರ್ಷದಿಂದ ಅದೇ ಕಾರಿಗೆ ಹೊಂದಿಕೊಂಡಿದ್ದಾರೆ. ಹಾಗಾಗಿ ಸದ್ಯಕ್ಕೆ ಹೊಸ ಕಾರು ಬಳಸುವ ಉದ್ದೇಶ ಯಡಿಯೂರಪ್ಪ ಮುಂದೆ ಇಲ್ಲವೆಂದು ಹೇಳುತ್ತಿದ್ದಾರೆ.

   English summary
   Chief minister Denied Government car and he says Old car is his lucky car so he will travel in Old car.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X