ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಡಿ ಓಡಿಸುವಾಗ ನಿಮ್ಮ ಕರೆ ನನಗೆ ಕನೆಕ್ಟ್ ಆದ್ರೆ ನಂಗೊತ್ತಿಲ್ಲ, ಹುಷಾರ್!

|
Google Oneindia Kannada News

ಬೆಂಗಳೂರು, ಜನವರಿ 25: ವಾಹನ ಚಾಲನೆ ಮಾಡುವ ವೇಳ ನೀವು ಮಾಡುವ ಕರೆಯು ನನಗೂ ಕನೆಕ್ಟ್ ಆಗಬಹುದು ಹೀಗೆ ಹೇಳ್ತಿರೋದು ಯಾರುಗೊತ್ತೇ? ಯಮದೇವ.

ಹೌದು ಇತ್ತೀಚಿನ ದಿನಗಳಲ್ಲಿ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ವಿಪರೀತವಾಗಿದೆ. ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸುವುದು, ಬೈಕ್‌ನಲ್ಲಿ ಪ್ರಯಾಣಿಸುವಾಗ ಹೆಲ್ಮೆಟ್ ಹಾಕುವ ಹಾಗೆಯೇ ಗಾಡಿ ಓಡಿಸುವಾಗ ಮೊಬೈಲ್ ಬಳಕೆಯನ್ನು ಬಿಡಬೇಕಾಗಿರುವುದು ನಿಮ್ಮ ಜವಾಬ್ದಾರಿ.

ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಕೂರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ?ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಕೂರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ?

ಮೊಬೈಲ್ ಬಳಕೆಯಿಂದ ನಿಮ್ಮ ಜೊತೆಗೆ ಬೇರೆಯವರ ಜೀವಕ್ಕೂ ಕುತ್ತು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಬೆಂಗಳೂರು ಸಿಟಿ ಪೊಲೀಸರು ವಾಹನ ಚಲಾವಣೆ ವೇಳೆ ಮೊಬೈಲ್ ಬಳಕೆ ಬೇಡ ಎನ್ನುವ ಜಾಗೃತಿ ಸಂದೇಶ ಸಾರಲು ಸಿದ್ಧರಾಗಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಒಂದನ್ನು ಹಾಕಿರುವ ಅವರು ಎಚ್ಚರವಿರಲಿ, ಗಾಡಿ ಓಡಿಸ್ತಾ ನೀವು ಮಾಡುವ ಕರೆ ನನಗೂ ಕನೆಕ್ಟ್ ಆಗಬಹುದು ಎನ್ನುವ ಸುಂದರ ಶೀರ್ಷಿಕೆ ನೀಡಿ ಜೊತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.

Yamaraj, Want to connect Me, Use Mobiles While Riding

ವಾಹನ ಚಲಾವಣೆ ವೇಳೆ ಮೊಬೈಲ್ ಬಳಕೆ ಜೀವಕ್ಕೆ ಅಪಾಯವನ್ನು ತರಬಹುದು ಹಾಗಾಗಿ ಯಾವುದೇ ಕಾರಣಕ್ಕು ಮೊಬೈಲ್ ಬಳಕೆ ಬೇಡ ಎಂದು ಮನವಿ ಮಾಡಿದ್ದಾರೆ. ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಬರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ, ನನ್ನ ಜತೆ ಬರ್ತೀರಾ ಅಂತ ವಾರ್ನಿಂಗ್‌ ಕೊಡ್ತಾನೆ, ಒಂದು ಹೆಲ್ಮೆಟ್‌ ಧರಿಸದಿದ್ದರೆ ಏನೆಲ್ಲಾ ಅನಾಹುತವಾಗುತ್ತದೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಯಮನ ಕಾನ್ಸೆಪ್ಟ್‌ ಇಟ್ಟುಕೊಂಡು ನಗರಾದ್ಯಂತ ಜಾಗೃತಿ ಮೂಡಿಸಿದ್ದರು.

English summary
Using a handheld cell phone while driving is dangerous to the driver, so Bengaluru city police tried to convey message to the people that If you want connect Yamraj Use Mobiles While Riding/driving.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X