ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಗೆ ಕಾನೂನು ಹೋರಾಟದಲ್ಲಿ ಗೆಲುವು
ಬೆಂಗಳೂರು, ಜನವರಿ 19: ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಹಣವನ್ನು ದುಂದುವೆಚ್ಚ ಮಾಡಿರುವ ಆರೋಪದಿಂದ ಕಾನೂನಾತ್ಮಕವಾಗಿ ಹೊರಬಂದಿದ್ದಾರೆ.
ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದ ವೇಳೆ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಅಕಾಡೆಮಿ ಹಣವನ್ನು ದುಂದುವೆಚ್ಚ ಮಾಡಿರುವ ಆರೋಪ ಕೇಳಿಬಂದಿತ್ತು.
ಇದರ ಬಾಬ್ತು 30 ಲಕ್ಷ ನಷ್ಟ ಬಾಬ್ತು ಪಡೆಯಬೇಕು ಎಂಬ ಅಕಾಡೆಮಿಯ ಶಿಸ್ತು ಸಮಿತಿ ಆದೇಶವನ್ನು ರದ್ದುಗೊಳಿಸಿದ್ದ ನ್ಯಾಯಪೀಠದ ಆದೇಶವನ್ನು ಇದೀಗ ರಾಜ್ಯ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವೂ ಎತ್ತಿಹಿಡಿದಿದೆ. ಹೀಗಾಗಿ ಇಂದಿನ ಆದೇಶ 67 ವರ್ಷದ ಕೃಷ್ಣಮೂರ್ತಿ ಅವರು ತಮ್ಮ ಕಾನೂನು ಸಮರದಲ್ಲಿ ಜಯ ಸಾಧಿಸಿ ನಿರಮ್ಮಳರಾಗುವಂತೆ ಮಾಡಿದೆ.

ತನ್ನ ಆದೇಶ ನೀಡುವ ಮುನ್ನ ಸಮಿತಿ, ನಡೆಸಿರುವ ವಿಚಾರಣಾ ಪ್ರಕ್ರಿಯೆ ಸರಿಯಿಲ್ಲ ಮತ್ತು ಬೈ-ಲಾ ಪ್ರಕಾರ, ನಿವೃತ್ತಿ ಹೊಂದಿದವರ ಮೇಲೆ ಈ ರೀತಿಯ ಕ್ರಮ ಕೈಗೊಂಡಿರುವುದು ಕಾನೂನು ಬಾಹಿರ' ಎಂದು ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿತ್ತು.
ಮೇಲ್ಮನವಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಸ್.ಸುಜಾತ ಹಾಗೂ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ವಿಭಾಗೀಯ ನ್ಯಾಯಪೀಠವು, ಬುಧವಾರ ಪ್ರಕಟಿಸಿತು. ಕಂಬಾರರ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿತು.
Recommended Video
ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳಿಗೆ ಕೃಷ್ಣಮೂರ್ತಿ ಅವರು ನಿಗದಿಗಿಂತಲೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ ಮತ್ತು ದೆಹಲಿಯಲ್ಲಿ ಕಚೇರಿ ಹೊಂದಿದ್ದು ಮೇಲಿಂದ ಮೇಲೆ ಬೆಂಗಳೂರಿಗೆ ಅಧಿಕೃತ ಪ್ರವಾಸ ಕೈಗೊಂಡು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತಂತೆ ಶಿಸ್ತು ಸಮಿತಿ 2014ರ ಜೂನ್ 3ರಂದು ನಷ್ಟ ಭರ್ತಿ ಪಾವತಿಗೆ ಆದೇಶಿಸಿತ್ತು.












Click it and Unblock the Notifications