ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2.7 ಕಿ.ಮೀ ಹೋಗಲು 40 ನಿಮಿಷ: ಇದು ಮಾರತ್ತಹಳ್ಳಿ ಫ್ಲೈಓವರ್ ಬಳಕೆದಾರರ ಸ್ಥಿತಿ

|
Google Oneindia Kannada News

ಬೆಂಗಳೂರು, ನ.25: ಅತೀ ವೇಗವಾಗಿ ಅಭಿವೃದ್ಧಿ ಹೊಂದಿದ ಮಹದೇವಪುರದಲ್ಲಿ ಜನಸಂಖ್ಯೆ, ಕಚೇರಿಗಳು, ಐಟಿ ವಲಯಗಳಿಂದಾಗಿ ಮಾರತ್ತಹಳ್ಳಿಯಲ್ಲಿ ಟ್ರಾಫಿಕ್ ಜಾಮ್ ಭಾರೀ ಕಿರಿಕಿರಿ ಉಂಟುಮಾಡುತ್ತಿದೆ.

ಪ್ರತಿನಿತ್ಯ ವಾಹನಗಳ ಹಾರನ್‌ಗಳ ಸದ್ದು ಕೇಳಿ ಎಚ್ಚರವಾಗುತ್ತದೆ ಎನ್ನುತ್ತಾರೆ ಮಾರತ್ತಹಳ್ಳಿ ನಿವಾಸಿಗಳು. ಒಂದು ದಶಕದ ಹಿಂದೆ ಆರಂಭವಾದ ಮಹದೇವಪುರದ ನಗರೀಕರಣದಿಂದಾಗಿ, ಅದರ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾದ ಮಾರತಹಳ್ಳಿ ಮೇಲ್ಸೇತುವೆಯ ಸುತ್ತ ವಾಹನಗಳ ಸಂಚಾರ ದಿನದಿಂದ ದಿನಕ್ಕೆ ನಿಧಾನವಾಗುತ್ತಿದೆ.

ಹೆಬ್ಬಾಳ ಫ್ಲೈಓವರ್‌ ಮೇಲೆ ಸರಕು ವಾಹನಗಳ ನಿರ್ಬಂಧದಿಂದ ಟ್ರಾಫಿಕ್ ನಿಯಂತ್ರಣಹೆಬ್ಬಾಳ ಫ್ಲೈಓವರ್‌ ಮೇಲೆ ಸರಕು ವಾಹನಗಳ ನಿರ್ಬಂಧದಿಂದ ಟ್ರಾಫಿಕ್ ನಿಯಂತ್ರಣ

ವಾಹನಗಳ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ಅಂದರೆ ಬೆಳಗ್ಗೆ 9 ರಿಂದ 11 ರವರೆಗೆ ಯೆಮಲೂರು ಜಂಕ್ಷನ್‌ನಿಂದ ಕುಂದಲಹಳ್ಳಿ ಅಂಡರ್‌ಪಾಸ್‌ವರೆಗಿನ 2 ಕಿಮೀ ದೂರವನ್ನು ದಾಟಲು ವಾಹನ ಸವಾರರು ಕನಿಷ್ಠ 30 ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ.

ಯೆಮಲೂರು ಜಂಕ್ಷನ್ ದಾಟಲು ಕನಿಷ್ಠ 10 ನಿಮಿಷ ಬೇಕು

ಯೆಮಲೂರು ಜಂಕ್ಷನ್ ದಾಟಲು ಕನಿಷ್ಠ 10 ನಿಮಿಷ ಬೇಕು

ಪೀಕ್ ಅವರ್‌ನಲ್ಲಿ ಮಾರತ್ತಹಳ್ಳಿ ಜಂಕ್ಷನ್‌ನಿಂದ ಔಟರ್ ರಿಂಗ್ ರೋಡ್ ಕಡೆಗೆ ಪೂರ್ವದಿಂದ ಆಗ್ನೇಯಕ್ಕೆ ಹೋಗುವ ಮಾರ್ಗದಲ್ಲಿ ಕನಿಷ್ಠ ಮೂರು ಚಾಕ್ ಪಾಯಿಂಟ್‌ಗಳಿವೆ. ಪೂರ್ವದಿಂದ ಆಗ್ನೇಯಕ್ಕೆ ಹೋಗುವ ಮಾರ್ಗದಲ್ಲಿ ಕನಿಷ್ಠ ಮೂರು ಚಾಕ್ ಪಾಯಿಂಟ್‌ಗಳಿವೆ. ಯೆಮಲೂರು ಜಂಕ್ಷನ್ ಅನ್ನು ಹಾದುಹೋಗುವ ವಾಹನ ಚಾಲಕರು ವಿಮಾನಪುರ ಅಂಚೆ ಕಚೇರಿ ಬಳಿ ಮೊದಲ ಚಾಕ್ ಪಾಯಿಂಟ್ ತಲುಪುತ್ತಾರೆ. ಇಲ್ಲಿ 2019 ರಿಂದ ಸಿಗ್ನಲ್ ಮುಕ್ತ ಕಾರಿಡಾರ್‌ನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಕಾಮಗಾರಿಯಿಂದಾಗಿ ಎರಡೂ ದಿಕ್ಕುಗಳಲ್ಲಿನ ರಸ್ತೆಯ ಅಗಲವು ತೀವ್ರ ಚಿಕ್ಕದಾಗಿದೆ. ಹೀಗಾಗಿ ಈ ಸ್ಥಳದಲ್ಲಿ ಸಿಗ್ನಲ್ ಅನ್ನು ದಾಟಲು ಕನಿಷ್ಠ 10 ನಿಮಿಷಗಳಾದರೂ ಬೇಕಾಗುತ್ತದೆ.

ಜಂಕ್ಷನ್ ಮತ್ತು ಯು-ಟರ್ನ್ ಸ್ಥಳದವನ್ನು ದಾಟಲು 15 ನಿಮಿಷ!

ಜಂಕ್ಷನ್ ಮತ್ತು ಯು-ಟರ್ನ್ ಸ್ಥಳದವನ್ನು ದಾಟಲು 15 ನಿಮಿಷ!

ಯೆಮಲೂರು ಜಂಕ್ಷನ್‌ನಲ್ಲಿ ಎರಡನೇ ಅಡಚಣೆ ಎಂದರೆ ಯು-ಟರ್ನ್ ತೆಗೆದುಕೊಳ್ಳುವ ವಾಹನಗಳು. ಇವು ಏಕಾಂಗಿಯಾಗಿ ಯು-ಟರ್ನ್ ತೆಗೆದುಕೊಳ್ಳಲು ಪ್ರಾರಂಭಿಸುತ್ತವೆ. ಹೀಗಾಗಿ ಟ್ರಾಫಿಕ್ ಹೆಚ್ಚಾಗುತ್ತದೆ. ಒಂದೇ ರಸ್ತೆಯಲ್ಲಿ ಹಲವಾರು ಬಸ್‌ಗಳು ಸಂಚರಿಸುವುದರಿಂದ, ಮಾರತ್ತಹಳ್ಳಿ ಮಾರುಕಟ್ಟೆ ಕಡೆಗೆ ಹೋಗಲು ವಾಹನಗಳು ಯು-ಟರ್ನ್ ಮಾಡಲು ಪ್ರಯತ್ನಿಸುವುದರಿಂದ ಬೇರೆ ವಾಹನಗಳಿಗೆ ಸಮಸ್ಯೆಯಾಗುತ್ತದೆ.

ಯೆಮಲೂರು ಜಂಕ್ಷನ್ ಮತ್ತು ಯು-ಟರ್ನ್ ನಡುವಿನ ಈ 600 ರಿಂದ 800 ಮೀಟರ್ ದೂರವನ್ನು ಕ್ರಮಿಸಲು ವಾಹನ ಸವಾರರಿಗೆ ಇನ್ನೂ 15 ನಿಮಿಷಗಳು ಬೇಕಾಗುತ್ತದೆ.

ಕಾಡುಬೀಸನಹಳ್ಳಿ ಕಡೆಗೆ ಹೋಗಲು ಫ್ಲೈಓವರ್‌ ಬಳಸಬಹುದು

ಕಾಡುಬೀಸನಹಳ್ಳಿ ಕಡೆಗೆ ಹೋಗಲು ಫ್ಲೈಓವರ್‌ ಬಳಸಬಹುದು

ಕಾಡುಬೀಸನಹಳ್ಳಿ ಅಥವಾ ಸರ್ಜಾಪುರ ಕಡೆಗೆ ಹೋಗಲು ಬಯಸುವವರು ಫ್ಲೈಓವರ್‌ ಮೇಲೆ ಹತ್ತಬಹುದು. ಇದರಿಂದ ಸುಮಾರು 1.5 ಕಿಮೀ ಮುಂದೆ ಇರುವ ಕುಂದಲಹಳ್ಳಿ ಅಂಡರ್‌ಪಾಸ್‌ನವರೆಗೆ ಪ್ರಯಾಣಿಸಬಹುದು. ಅಲ್ಲಿ ಯು-ಟರ್ನ್ ತೆಗೆದುಕೊಂಡು ಕೆಎಲ್‌ಎಂ ಫ್ಯಾಶನ್ಸ್‌ನ ಮೊದಲು ಎಡಕ್ಕೆ ತೆಗೆದುಕೊಳ್ಳಬಹುದು.

ಇನ್ನೊಂದು ಉಪಾಯವೆಂದರೆ ವಾಹನ ಸವಾರರು ಫ್ಲೈಓವರ್‌ನ ಪ್ರಾರಂಭದಿಂದ ಔಟರ್ ರಿಂಗ್ ರೋಡ್ ಕಡೆಗೆ ಎಡಕ್ಕೆ ತೆಗೆದುಕೊಳ್ಳಬಹುದು. ಬಳಿಕ ಮೆಟ್ರೋ ನಿರ್ಮಾಣದ ಸ್ಥಳವನ್ನು ಹಾದುಹೋದ ನಂತರ ಯು-ಟರ್ನ್ ತೆಗೆದುಕೊಂಡು ನೇರವಾಗಿ ಕಾಡುಬೀಸನಹಳ್ಳಿ ಕಡೆಗೆ ಪ್ರಯಾಣಿಸಬಹುದು.

1 ಕಿಮೀ ಫ್ಲೈಓವರ್ ದಾಟಲು 10 ರಿಂದ 20 ನಿಮಿಷ

1 ಕಿಮೀ ಫ್ಲೈಓವರ್ ದಾಟಲು 10 ರಿಂದ 20 ನಿಮಿಷ

ಹಲವಾರು ವಾಹನಗಳು ಬೆಳಗ್ಗೆ ಕಾಡುಬೀಸನಹಳ್ಳಿ ಅಥವಾ ಸರ್ಜಾಪುರ ಕಡೆಗೆ ಹೋಗುತ್ತವೆ. ಇದರಿಂದ ಫ್ಲೈಓವರ್‌ನ ಕೆಳಗೆ ಎಡಕ್ಕೆ ಹೋಗುವ ವಾಹನಗಳು ನೇವಾಗಿ ಹೋಗುವವರನ್ನು ಅಡ್ಡಗಟ್ಟುತ್ತವೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಅದೇ ರೀತಿ, ಕುಂದಲಹಳ್ಳಿಯಲ್ಲಿ ಯು-ಟರ್ನ್ ಮಾಡುವವರು ಇತರರಿಗೆ ಅಡ್ಡ ಬಂದು ಅಲ್ಲಿಯೂ ಕಾಯುವಂತೆ ಮಾಡುತ್ತಾರೆ.

ಆದ್ದರಿಂದ, ಪೀಕ್ ಸಮಯದಲ್ಲಿ 1 ಕಿಮೀ ಫ್ಲೈಓವರ್ ಅನ್ನು ದಾಟಲು 10 ರಿಂದ 20 ನಿಮಿಷಗಳವರೆಗೆ ತೆಗೆದುಕೊಳ್ಳಬಹುದು. ಫ್ಲೈಓವರ್‌ನ ತುದಿಯಿಂದ 500 ಮೀ ದೂರದಲ್ಲಿರುವ ಅಂಡರ್‌ಪಾಸ್‌ಗೆ ಹೋಗುವುದಕ್ಕೆ ಇನ್ನೂ 10 ನಿಮಿಷಗಳು ಬೇಕಾಗಬಹುದು.

(ಮಾಹಿತಿ ಕೃಪೆ: ಟೈಮ್ಸ್ ಆಫ್ ಇಂಡಿಯಾ)

English summary
marathahalli residential sees worst traffic jam in Marathahalli flyover. its a one of the main traffic junction of Bengaluru. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X