ಹಣ ಕೊಡಲಿಲ್ಲ ಎಂದು ಗೆಳತಿಗೆ ಆ್ಯಸಿಡ್ ಎರಚಿ ದಾಳಿ ಮಾಡಿದ ಸ್ನೇಹಿತೆ
ಬೆಂಗಳೂರು, ಜನವರಿ 8: ಹಣ ಕೊಡಲಿಲ್ಲ ಎದು ಗೆಳತಿಗೆ ಆ್ಯಸಿಡ್ ಎರಚಿದ ಘಟನೆ ಬೆಂಗಳೂರಲ್ಲಿ ನಡೆದಿದೆ.
ಹನುಮಂತನಗರದ ಶ್ರೀನಿವಾಸ ನಗರ ಬಳಿ ಈ ಘಟನೆ ನಡೆದಿದ್ದು, ಆ್ಯಸಿಡ್ ದಾಳಿಗೊಳಗಾದ ಶುಭಾ ಗೌಡ ಅವರಿಗೆ ಗಂಭೀರ ಗಾಯಗಳಾಗಿವೆ, ಆ್ಯಸಿಡ್ ಎರೆಚಿದ ರೂಪಾಳನ್ನು ಪೊಲೀಸರು ಬಂಧಿಸಿದ್ದಾರೆ.
ವಿವಾಹಿತರಾದ ಶುಭಾ ಗೌಡ ಮೂಲತಃ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನವರು, ಕೌಟುಂಬಿಕ ಕಲಹದ ಹಿನ್ನೆಲೆ ಕೆಲ ವರ್ಷಗಳಿಂದ ಪತಿಯಿಂದ ದೂರವಾಗಿದ್ದಾರೆ. 3 ವರ್ಷಗಳ ಹಿಂದೆ ನಗರಕ್ಕೆ ಬಂದು ಶ್ರೀನಿವಾಸನಗರದ 11 ನೇ ಕ್ರಾಸ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದಳು.

ಶುಭಾ ಜೊತೆ ಸಲುಗೆಯಿಂದ ರೂಪಾ ಆಗಾಗ ಸ್ನೇಹಿತೆಯ ಮನೆಗೆ ಬಂದು ಹೋಗುತ್ತಿದ್ದಳು, ಇತ್ತೀಚೆಗೆ ರೂಪಾ ಹತ್ತು ಸಾವಿರ ರೂ ಸಾಲ ನೀಡುವಂತೆ ಶೋಭಾ ಬಳಿ ಕೇಳಿದ್ದಳು, ಹಣ ನೀಡಲು ಶುಭಾ ನಿರಾಕರಿಸಿದ್ದರು.
ಹಣಕಾಸಿನ ವಿಚಾರವಾಗಿ ಶುಭಾ ಮೇಲೆ ಕೋಪಗೊಂಡಿದ್ದ ಸ್ನೇಹಿತೆ ಮೇಲೆ ಆ್ಯಸಿಡ್ ಹಾಕಲು ನಿರ್ಧರಿಸಿದ್ದಳು. ಹಾಗೆಯೇ ಮಧ್ಯಾಹ್ನ ರ ಸುಮಾರಿಗೆ ರೂಪಾ ಸ್ನೇಹಿತೆ ಶುಭಾ ಮನೆಗೆ ಬಂದಿದ್ದಳು ಶುಭಾ ಮುಖದ ಮೇಲೆ ಏಕಾಏಕಿ ಆ್ಯಸಿಡ್ ಹಾಕಿದ್ದಳು.












Click it and Unblock the Notifications