ಮಹಿಳಾ ದಿನಾಚರಣೆ ಅಂಗವಾಗಿ 'ವೀಣಾ ವಿಸ್ಮಯ'

ಬೆಂಗಳೂರು, ಮಾ.5: ಮಹಿಳಾ ದಿನಾಚರಣೆಯನ್ನು ವೀಣಾಧಾರಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಅಂಡ್ ಫೈನ್ ಆರ್ಟ್ಸ್ ಸಂಸ್ಥೆ ವಿಶಿಷ್ಟವಾಗಿ ಆಚರಿಸುತ್ತಿದೆ. 25 ಮಹಿಳಾ ವೀಣಾ ವಾದಕರು 'ಸಂಗೀತ ಧಾರೆ' ಹರಿಸುವ ಮೂಲಕ ಮಹಿಳಾ ದಿನಾಚರಣೆ ಮಾಡಲು ಮುಂದಾಗಿದ್ದಾರೆ.

ಕುಬೇರನ್ ಸಿಲ್ಕ್ಸ್ ಸಹಯೋಗದೊಂದಿಗೆ ವೀಣಾಧಾರಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಹಾಗೂ ಫೈನ್ ಆರ್ಟ್ಸ್ ಸಂಸ್ಥೆ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ನಾದಜ್ಯೋತಿ ಕಲಾಪ್ರವೀಣಾ ವೀಣಾ ವಿದುಷಿ ಶ್ರೀಮತಿ ಅನುರಾಧಾ ಮದುಸೂಧನ್ ಅವರು ಒನ್ ಇಂಡಿಯಾ ಸಂಸ್ಥೆಗೆ ತಿಳಿಸಿದ್ದಾರೆ.

ಮಹಿಳಾ ದಿನಾಚರಣೆ ಜತೆಗೆ ವೀಣಾಧಾರಿ ಸಂಸ್ಥೆಯ ರಜತ ಮಹೋತ್ಸವ ಸಮಾರಂಭವನ್ನು ಆಚರಿಸಲಾಗುತ್ತಿದೆ. ವೀಣಾ ವಿದುಷಿ ಅನುರಾಧಾ ಮದುಸೂಧನ್ ಅವರಿಂದ ಸ್ಥಾಪಿಸಲಾದ ಈ ಸಂಸ್ಥೆ ಹಲವಾರು ವೈಣಿಕರನ್ನು ನಾಡಿಗೆ ಪರಿಚಯಿಸಿ, ಸಂಗೀತ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಒಮಾಶ್ರಮ ವೃದ್ಧಾಶ್ರಮದ [ಯಾರಿಗೂ ಬೇಡವಾದವರ ಕಥೆ-ವ್ಯಥೆ] ಸಹಾಯಾರ್ಥ ನಡೆಯುವ ಈ ವೀಣಾ ವಿಸ್ಮಯ ಸಂಗೀತ ಕಾರ್ಯಕ್ರಮದ ವಿವರ ಮುಂದಿದೆ:

Women’s day Celebration 2014 in Bangalore

ಸ್ಥಳ : ಎನ್ ಎಂಕೆಆರ್ ವಿ ಕಾಲೇಜಿನ ಮಂಗಳ ಮಂಟಪ ಆಡಿಟೋರಿಯಂ, ಜಯನಗರ 3ನೇ ಬ್ಲಾಕ್, ಬೆಂಗಳೂರು
ದಿನಾಂಕ: ಮಾರ್ಚ್ 8, 2014
ಸಮಯ : 5.30 ನಂತರ

ಆಯೋಜಕರು : bookurevent.com
ಸಂಪರ್ಕಿಸಿ : 99166 88 166
ಕಾರ್ಯಕ್ರಮಕ್ಕೆ ಸಹಯೋಗ: ರೇಡಿಯೋ ಮಿರ್ಚಿ 98.3 ಎಫ್ ಎಂ ವಾಹಿನಿ, ಒನ್ ಇಂಡಿಯಾ.ಇನ್ ಸಂಸ್ಥೆ, ಕುಬೇರನ್ ಸಿಲ್ಕ್ಸ್

ವಿದುಷಿ ಅನುರಾಧಾ ಮದುಸೂಧನ್ ಅವರ ವೀಣಾವಾದನದ ಝಲಕ್ ನೋಡಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+