• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೆಂಟ್ರಲ್ ಜೈಲಿನಲ್ಲಿ ಮಹಿಳಾ ಕೈದಿಗಳಿಗೆ ಲೈಂಗಿಕ ಕಿರುಕುಳ

By Mahesh
|

ಬೆಂಗಳೂರು, ನ.14: ಕರ್ನಾಟಕದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬ ಕೂಗಿದೆ ಪೂರಕವಾಗಿ ಪರಪ್ಪನ ಅಗ್ರಹಾರ ಜೈಲಿನ ಕಾಮ ಪ್ರಪಂಚವನ್ನು ಅಲ್ಲಿನ ಮಹಿಳಾ ಕೈದಿಗಳು ಪತ್ರ ಮೂಲಕ ಬಹಿರಂಗಪಡಿಸಿದ್ದಾರೆ. ಮಹಿಳಾ ಕೈದಿಗಳ ಮೇಲೆ ನಡೆದಿರುವ ನಿರಂತರ ಲೈಂಗಿಕ ಕಿರುಕುಳ, ಬಲವಂತದ ಸೆಕ್ಸ್, ವಾರ್ಡನ್ ಗಳ ಕಿರುಕುಳದ ಬಗ್ಗೆ ಇರುವ ದೂರಿನ ಪತ್ರ ಈಗ ಹೈಕೋರ್ಟ್ ತಲುಪಿದೆ.

ಅದರೆ, ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಸೆಂಟ್ರಲ್ ಜೈಲಿನ ಹೆಚ್ಚುವರಿ ಮಹಾನಿರೀಕ್ಷಕ ವಿ.ಎಸ್ ರಾಜ್, ನಮ್ಮ ಬಳಿ ಯಾವ ಮಹಿಳಾ ಕೈದಿಯೂ ದೂರು ನೀಡಿಲ್ಲ, ಇಂಥ ಕೃತ್ಯದಲ್ಲಿ ಯಾರಾದರೂ ಪಾಲ್ಗೊಂಡಿದ್ದರೆ ಅಂಥವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ವಾರ್ಡನ್ ಗಳೇ ಪಿಂಪ್ ಗಳು: ಪುರುಷ ಕೈದಿಗಳೊಂದಿಗೆ ಬಲವಂತವಾಗಿ ಸೆಕ್ಸ್ ಮಾಡುವಂತೆ ಜೈಲಿನ ವಾರ್ಡನ್ ಗಳೆ ಒತ್ತಾಯಿಸುತ್ತಾರೆ. ಪುರುಷ ಕೈದಿಗಳಿಗೆ ಮಹಿಳಾ ಕೈದಿಗಳನ್ನು ಒದಗಿಸುವುದರಿಂದ 300 ರಿಂದ 500 ರು ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ರೀತಿಯ ಎರಡು ನೋವಿನ ಪತ್ರಗಳು ದೂರು ಪೆಟ್ಟಿಗೆಯಲ್ಲಿ ಭದ್ರವಾಗಿತ್ತು. ಇದನ್ನು ಪಡೆದುಕೊಂಡ ಜಡ್ಜ್ ಆದನ್ನು ಹೈಕೋರ್ಟಿಗೆ ತಲುಪಿಸಿದ್ದಾರೆ. ಎಲ್ಲಾ ಪತ್ರಗಳು ಮುಖ್ಯ ನ್ಯಾಯಮೂರ್ತಿ ವಿಳಾಸಕ್ಕೆ ಬರೆಯಲಾಗಿದ್ದು, ಪತ್ರದಲ್ಲಿ ವಾರ್ಡನ್ ಹೆಸರು ಹಾಗೂ ಕಿರುಕುಳ ನೀಡುತ್ತಿರುವ ಅಧಿಕಾರಿಗಳ ಹೆಸರುಗಳಿವೆ.ಸೆಕ್ಸ್ ಮಾಡುವಂತೆ ಒತ್ತಾಯಿಸಿ, ಲಂಚ ಪಡೆದುಕೊಳ್ಳುವ 6 ವಾರ್ಡನ್ ಮತ್ತು ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ.

ದುಡ್ಡೇ ದೊಡ್ಡಪ್ಪ: ಜೈಲಿನಲ್ಲಿ ದುಡ್ಡು ಇದ್ದರೆ ರಾಜ ಮರ್ಯಾದೆ, ಇಲ್ಲದಿದ್ದರೆ ನಮ್ಮನ್ನು ನಾಯಿಗಿಂತ ಕಡೆ ನೋಡ್ತಾರೆ, ನಮ್ಮನ್ನು ಕಾಣಲು ಬರುವ ಸಂದರ್ಶಕರೊಂದಿಗೆ ಮಾತನಾಡಲು ಕೂಡಾ ಬಿಡುವುದಿಲ್ಲ,ಮನೆಯಿಂದ ಬರುವ ಊಟದಲ್ಲಿ ಅರ್ಧ ವಾರ್ಡನ್ ಹೊಟ್ಟೆ ಸೇರುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ. [ಕೈದಿಗಳಿಗೆ ರಾಜ್ಯೋತ್ಸವ ಕೊಡುಗೆ, ಊಟದ ಮೆನು ಬದಲಾವಣೆ]

ಜೈಲಿನಲ್ಲಿ ನಡೆಯುತ್ತಿರುವ ಈ ಅವ್ಯವಹಾರಗಳ ಬಗ್ಗೆ ಎಲ್ಲಿಯಾದರೂ ಹಿರಿಯ ಅಧಿಕಾರಿಗಳಿಗೆ ತಿಳಿಸಿದರೆ, ನಿಮ್ಮ ಪರೋಲ್ ಅವಕಾಶವನ್ನೂ ಇಲ್ಲದಂತೆ ಮಾಡಲಾಗುತ್ತದೆ ಎಂಬ ಬೆದರಿಕೆಯನ್ನೂ ನೀಡಲಾಗಿದೆ. ಮಹಿಳಾ ಅಧಿಕಾರಿಗಳು ಕೂಡಾ ತಮ್ಮ ನೋವಿಗೆ ಸ್ಪಂದಿಸುತ್ತಿಲ್ಲ ಹೀಗಾಗಿ ನಮಗೆ ಬೇರೆ ದಿಕ್ಕು ತೋಚದೆ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದೇವೆ ಎಂದು ಮಹಿಳಾ ಕೈದಿಗಳು ಹೇಳಿಕೊಂಡಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ಒಟ್ಟು 15 ಜನ ಮಹಿಳಾ ಕೈದಿಗಳು ಕಠಿಣ ಶಿಕ್ಷೆ ಅನುಭವಿಸುತ್ತಿದ್ದರೆ ಮೂವರು ಸಾದಾ ಶಿಕ್ಷೆಗೊಳಗಾಗಿದ್ದಾರೆ. 89 ವಿಚಾರಣಾಧೀನ ಕೈದಿಗಳಿದ್ದಾರೆ, 19 ರಿಂದ 23 ವರ್ಷ ವಯಸ್ಸಿನ ನಾಲ್ವರು ಕೈದಿಗಳಿದ್ದಾರೆ, 8 ಜನ ಮಾದಕ ದ್ರವ್ಯ ಕೇಸ್ ನಲ್ಲಿ ಅಪರಾಧಿಗಳಾಗಿದ್ದಾರೆ ಇವರೆಲ್ಲರ ಜೊತೆಗೆ 12 ಮಂದಿ ವಿದೇಶಿ ಕೈದಿಗಳೂ ಹೊಸರೋಡಿನ ಬಳಿ ಇರುವ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Some wardens force women convicts to have sex with male convicts, according to a letter written from inside the Bangalore Central Prison. Signed by a group of women inmates, the letter alleges the wardens charge the men between Rs 300 and Rs 500 for the ‘service’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more