ಫೇಸ್‌ಬುಕ್‌ನಿಂದ ಉಂಟಾದ ಕಲಹ ದಂಪತಿ ಆತ್ಮಹತ್ಯೆಯಲ್ಲಿ ಅಂತ್ಯ
ಬೆಂಗಳೂರು, ಜೂನ್ 12: ಫೇಸ್ ಬಳಕೆ ವಿಚಾರವಾಗಿ ಆರಂಭವಾದ ದಂಪತಿ ನಡುವಿನ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಬಾಗಲಗುಂಟೆಯಲ್ಲಿ ನಡೆದಿದೆ.
ಹಾವನೂರು ಲೇಔಟವವ ನಿವಾಸಿ ಅನೂಪ್(31) ಮತ್ತು ಸೌಮ್ಯ(28) ಮೃತ ದಂಪತಿ, ಸೋಮವಾರಪೇಟೆ ಮೂಲದವರಾದ ಸೌಮ್ಯ ಮತ್ತು ಹಾಸನದ ಅನೂಪ್ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದಾರೆ. ದಂಪತಿಗೆ 3 ವರ್ಷದ ಮಗನಿದ್ದಾನೆ. ಒಂದೂವರೆ ವರ್ಷದಿಂದ ಹಾವನೂರು ಲೇಔಟ್‌ನಲ್ಲಿರುವ ಮನೆಯೊಂದನ್ನು ದಂಪತಿ ಭೋಗ್ಯಕ್ಕೆ ಪಡೆದಿದ್ದರು.
ದಂಪತಿ ಅನ್ಯೂನ್ಯವಾಗಿಯೇ ಇದ್ದರು. ಆದರೆ, ಫೇಸ್‌ಬುಕ್‌ನಲ್ಲಿ ಸೌಮ್ಯ ಅಪ್‌ಲೋಡ್ ಮಾಡುತ್ತಿದ್ದ ಫೋಟೊ ಮತ್ತು ಸ್ಟೇಟಸ್ ಬಗ್ಗೆ ಅನೂಪ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ದಂಪತಿ ನಡುವೆ ಜಗಳ ಉಂಟಾಗುತ್ತಿತ್ತು.

ಭಾನುವಾರ ಸೌಮ್ಯಳ ಮೊಬೈಲ್ ಫೋನ್‌ನಲ್ಲಿ ಫೇಸ್‌ಬುಕ್ ತೆರೆದು ನೋಡಿದ ಅನೂಪ್ ಮತ್ತೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ದಂಪತಿ ನಡುವೆ ಜಗಳ ಉಂಟಾಗಿ ವಿಕೋಪಕ್ಕೆ ತಿರುಗಿದೆ. ಸೌಮ್ಯಳ ಸಹೋದರ ರವಿಗೆ ಕರೆ ಮಾಡಿದ ಅನೂಪ್ ನಿನ್ನ ಸಹೋದರಿ ಫೇಸ್‌ಬುಕ್‌ನಲ್ಲೇ ಕಾಲ ಕಳೆಯುತ್ತಾಳೆ ಕೇಳಿದರೆ ಜಗಳ ಮಾಡುತ್ತಾಳೆ ಎಂದು ದೂರಿದ್ದ.
ರವಿ ಇಬ್ಬರಿಗೂ ಬುದ್ಧಿಮಾತು ಹೇಳಿ ಸಮಾಧಾನಪಡಿಸಿದ್ದ, ಆದರೆ ಅದಾದ ನಂತರ ಏನಾಗಿದೆಯೋ ಗೊತ್ತಿಲ್ಲ, ಕೊಠಡಿಯೊಳಗೆ ಸೇರಿದ್ದ ಅನೂಪ್ ಬಾಗಲು ತೆರೆದಿರಲಿಲ್ಲ. ಇದನ್ನು ಸೌಮ್ಯ ಕರೆ ಮಾಡಿ ರವಿಗೆ ತಿಳಿಸಿದ್ದಳು. ನಂತರ ಅನೂಪ್‌ಗೆ ಕರೆ ಮಾಡಿದರೆ ತೆಗೆಯಲಿಲ್ಲ.
ನಂತರ ತಕ್ಷಣ ಬೆಂಗಳೂರಿಗೆ ಹೊರಟುಬಂದಿದ್ದಾರೆ. ಬಂದು ಮನೆಯ ಬಾಗಿಲು ಬಡಿದಾಗ ತೆಗೆದಿಲ್ಲ, ಹೀಗಾಗಿ ಮನೆ ಮಾಲೀಕ ಮರಿಯಪ್ಪರನ್ನು ಕರೆದಿದ್ದಾರೆ. ಆಗ ಅವರು ಮನೆಯ ಹಿಂಭಾಗದ ಕಿಟಕಿಯಿಂದ ನೋಡಿದಾಗ ಪ್ರತ್ಯೇಕ ಕೊಠಡಿಗಳಲ್ಲಿ ಸಂಪತಿ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.












Click it and Unblock the Notifications