ಪೋಲಿ ಚಿತ್ರದ ನಟಿಯಂತೆ ನಟಿಸಲು ಒಪ್ಪದಿದ್ದಕ್ಕೆ ಪತಿಯಿಂದ ಥಳಿತ: ದೂರು

ನೆಲಮಂಗಲ, ಫೆಬ್ರವರಿ 10: ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಅಶ್ಲೀಲ ಚಿತ್ರದಲ್ಲಿನ ನಟಿಯ ರೀತಿಯಲ್ಲೇ ಅಭಿನಯಿಸುವಂತೆ ಒತ್ತಾಯಿಸಿದ್ದಾರೆ ಎಂದು ದೂರು ದಾಖಲಾಗಿದೆ. ಶಿಕ್ಷಕರ ಪತ್ನಿ ಈ ಬಗ್ಗೆ ದೂರು ನೀಡಿದ್ದಾರೆ.

ಅಶ್ಲೀಲ ಚಿತ್ರದಲ್ಲಿನ ನಟಿಯ ಥರ ಅಭಿನಯಿಸಲು ನಾನು ಒಪ್ಪಲಿಲ್ಲ ಎಂಬ ಕಾರಣಕ್ಕೆ ನನ್ನ ಬಟ್ಟೆ ಹರಿದರು. ಭುಜಕ್ಕೆ ಕಚ್ಚಿದರು. ಆ ನಂತರ ದೊಣ್ಣೆಯಿಂದ ಹೊಡೆದರು ಎಂದು ಮಹಿಳೆ ಆರೋಪ ಮಾಡಿದ್ದಾರೆ. ‌ಮನೆಗೆ ಬಂದ ಮಹಿಳೆಯ ತಾಯಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಮ್ಮಿಬ್ಬರದು ಪ್ರೇಮ ವಿವಾಹ. ಹದಿನೈದು ವರ್ಷಗಳ ಹಿಂದೆ ಮದುವೆ ಆಗಿದ್ದೇವೆ. ಅವರಿಗೆ ಮೊಬೈಲ್ ಫೋನ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುವ ಚಟ ಇದೆ. ಬಹಳ ಕಾಲ ಅದನ್ನು ನಿರ್ಲಕ್ಷ್ಯ ಮಾಡಿದ್ದೆ. ಆದರೆ ನಾನು ಸ್ನಾನ ಮಾಡುವ ವಿಡಿಯೋ ಕೂಡ ಚಿತ್ರೀಕರಿಸಲು ಆರಂಭಿಸಿದಾಗ ಆತಂಕವಾಯಿತು. ಆಗಾಗ ಅಶ್ಲೀಲ ಚಿತ್ರ ನೋಡುವಂತೆ ಒತ್ತಾಯಿಸುತ್ತಾರೆ. ನೋಡಲ್ಲ ಅಂದರೆ ಹೊಡೆಯುತ್ತಾರೆ ಎಂದು ಮಹಿಳೆ ಹೇಳಿದ್ದಾರೆ.

Woman accuses husband of forcing her to imitate obscene scene

ಈ ದಂಪತಿಗೆ ಹನ್ನೊಂದು ಹಾಗೂ ಹದಿಮೂರು ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನೆಲಮಂಗಲ ನಗರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅವರ ಪ್ರಕಾರ ಈ ಮಹಿಳೆ ಸುಳ್ಳು ದೂರು ನೀಡಿದ್ದಾರೆ. ವಕೀಲರ ಮೂಲಕ ಆ ಹೆಣ್ಣುಮಕ್ಕಳ ಜತೆ ಮಾತನಾಡಿದ್ದೇವೆ. ತಮ್ಮ ತಾಯಿಯ ಆರೋಪವನ್ನು ಅವರು ನಿರಾಕರಿಸಿದ್ದಾರೆ ಎಂದಿದ್ದಾರೆ.

ಇದೇ ವೇಳೆ ಮಹಿಳೆಯ ಸಂಬಂಧಿಕರು ಮತ್ತಿತರರ ಹೇಳಿಕೆ ಕೂಡ ಪೊಲೀಸರು ಪಡೆದಿದ್ದಾರೆ. ವೈದ್ಯಕೀಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+