ಯುವತಿ ಮೇಲೆ ಪತಿ ಅತ್ಯಾಚಾರ ಪತ್ನಿಯಿಂದ ವಿಡಿಯೋಗ್ರಫಿ!
ಬೆಂಗಳೂರು, ಆಗಸ್ಟ್22: ದೇವರನ್ನು ಪೂಜಿಸು ದೇವರನ್ನು ಪೂಜಿಸುವವರನ್ನಲ್ಲ. ದೇವರನ್ನು ಆರಾಧಿಸು ಪೂಜಾರಿಯನ್ನಲ್ಲ. ದೇವರ ಹೆಸರನ್ನು ಬಳಸಿಕೊಂಡು ಭಕ್ತಿಯನ್ನೇ ಬಂಡವಾಳ ಮಾಡಿ ಯುಕ್ತಿಯಿಂದ ಹಣವನ್ನ ಮಾತ್ರವಲ್ಲದೇ ಮಾನವನ್ನು ದೋಚುವ ಖದೀಮರಿದ್ದಾರೆ. ಸ್ವಾಮೀಜಿ ಎಂದು ಹೇಳಿ ದೋಷ ಪರಿಹಾರಕ್ಕೆ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ಕೆಆರ್‌ಪುರ ಪೊಲೀಸರಿಗೆ ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ.
ಯುವತಿಗಿದ್ದ ದೈವಭಕ್ತಿಯನ್ನೇ ದುರ್ಬಳಕೆ ಮಾಡಿಕೊಂಡು ದೋಷವಿರುವುದಾಗಿ ಸುಳ್ಳು ಹೇಳಿ ಪೂಜೆ ನೆಪದಲ್ಲಿ ತನ್ನ ಮನೆಗೆ ಕರೆಯಿಸಿ ಮತ್ತುಬರುವ ಔಷಧಿ ನೀಡಿ ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ಆತ್ಯಾಚಾರ ಎಸಗಿರುವ ಕಳವಳಕಾರಿ ಸಂಗತಿ ನಗರದಲ್ಲಿ ಬೆಳಕಿಗೆ ಬಂದಿದೆ. ವಿಚಿತ್ರವೆಂದರೆ ನಕಲಿ ಸ್ವಾಮೀಜಿಯ ಹೀನ ಕೃತ್ಯಕ್ಕೆ ಪತ್ನಿಯೇ ಸಾಥ್ ನೀಡಿರುವುದು ಗೊತ್ತಾಗಿದೆ.
ಮನನೊಂದಿದ್ದ ಯವತಿಗೆ ದೋಷ ಪರಿಹರಿಸುವ ನೆಪದಲ್ಲಿ ಮಾಡಿದ ಮಹಾ ಮೋಸಕ್ಕೆ ಸಂತ್ರಸ್ತೆ ಕುಟುಂಬಸ್ಥರು ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಆನಂದಮೂರ್ತಿ ಹಾಗೂ ಪತ್ನಿ ಲತಾ ವಿರುದ್ಧ ಅತ್ಯಾಚಾರ, ಜೀವಬೆದರಿಕೆ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಂಡು ಕೆಆರ್ ಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗಂಡಾಂತರವಿದೆ ಎಂದು ಪುಂಗಿ ಬಿಟ್ಟಿದ್ದ ಸ್ವಾಮೀಜಿ
ಐದಾರು ವರ್ಷಗಳ ಹಿಂದೆ ಸ್ನೇಹಿತೆಯ ಮನೆ ಕಾರ್ಯಕ್ರಮವೊಂದರಲ್ಲಿ ಸಂತ್ರಸ್ತೆಯನ್ನ ಆನಂದಮೂರ್ತಿ ಪರಿಚಯಿಸಿಕೊಂಡಿದ್ದ. ಯುವತಿಯನ್ನು ನೋಡಿ ನಿಮ್ಮ ಜೀವನದಲ್ಲಿ ಗಂಡಾಂತರವಿದೆ. ಇದರಿಂದ ನಿಮ್ಮ ಕುಟುಂಬದ ಸದಸ್ಯರಿಗೂ ತೊಂದರೆಯಾಗಲಿದೆ. ನಾನು ಕಾಳಿದೇವಿಯ ಆರಾಧಕನಾಗಿದ್ದು ನಿಮ್ಮಕಷ್ಟಗಳನ್ನು ನಿವಾರಿಸುವೆ ಎಂದು ಯುವತಿಗೆ ಬ್ರೈನ್ ವಾಶ್ ಮಾಡಿದ್ದ. ಇದನ್ನು ನಂಬಿದ್ದ ಮುಗ್ದ ಯುವತಿ ನಕಲಿ ಸ್ವಾಮೀಜಿ ಅಣತಿಯಂತೆ ಆತನ ಮನೆಗೆ ಹೋಗಿದ್ದಳು. ಪೂಜೆ ಮಾಡುವ ನೆಪದಲ್ಲಿ ಆಕೆಯನ್ನ ಕರೆಯಿಸಿಕೊಂಡು ಮತ್ತುಬರುವ ಪಾನೀಯ ನೀಡಿದ್ದಾನೆ. ಮತ್ತೆ ಪ್ರಜ್ಞೆ ಬಂದಾಗ ಮನೆಯ ರೂಮ್‌ವೊಂದರಲ್ಲಿ ವಿವಸ್ತ್ರಳಾಗಿ ಇರುವುದು ಗೊತ್ತಾಗಿದೆ.

ಆನಂದ ಮೂರ್ತಿ ಪತ್ನಿ ಲತಾ ವಿರುದ್ಧ ಆರೋಪ
"ಯುವತಿಯನ್ನು ಮನೆಗೆ ಕರೆಸಿಕೊಂಡು ಆನಂದಮೂರ್ತಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವಿದೆ. ಆನಂದ ಮೂರ್ತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಆತನ ಪತ್ನಿ ಲತಾ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಳಂತೆ. ಯಾರಿಗಾದರೂ ವಿಷಯ ತಿಳಿಸಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಧೈರ್ಯ ಕಳೆದುಕೊಂಡ ಸಂತ್ರಸ್ತೆ ಮನೆಯವರಗೂ ವಿಷಯ ತಿಳಿಸರಲಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡ ಆನಂದಮೂರ್ತಿ ಐದಾರು ವರ್ಷಗಳಿಂದ ಯುವತಿಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ನಾನೇ ಕೃಷ್ಣ, ಪತ್ನಿಯೇ ರಾಧೇ ನೀನೆ ರುಕ್ಮಿಣಿ. ನೀನು ನನ್ನ ಲಕ್ಕಿ ಚಾರ್ಮ್ ಎಂದೆಲ್ಲಾ ಪುಸಲಾಯಿಸಿ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ" ಎಂದು ಸಂತ್ರಸ್ತೆ ಪರ ವಕೀಲ ಜ್ಞಾನೇಶ್ ಆರೋಪಿಸಿದ್ದಾರೆ.

ಯುವತಿಯ ಖಾಸಗಿ ವಿಡಿಯೋ ತೋರಿಸಿದ್ದ ಸ್ವಾಮೀಜಿ
ಐದಾರು ವರ್ಷಗಳಿಂದ ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾದರೂ ಸುಮ್ಮನಾಗಿದ್ದ ಯುವತಿಯು ಇತ್ತೀಚೆಗೆ ಮನೆಯವರು ನಿಶ್ಚಿತಾರ್ಥಕ್ಕೆ ಸಿದ್ದತೆ ನಡೆಸಿಕೊಂಡಿದ್ದರು. ಕಳೆದ ಎರಡು ದಿನಗಳ ಹಿಂದೆ ಎಂಗ್ಮೇಜ್ ಮೆಂಜ್ ನಿಗದಿಯಾಗಿತ್ತು. ಇದನ್ನ ಅರಿತ ಕಪಾಟ ಸ್ವಾಮೀಜಿ ಮದುವೆಯಾಗುವ ಹುಡುಗನನ್ನ ಭೇಟಿ ಮಾಡಿ ಯುವತಿ ಖಾಸಗಿ ವಿಡಿಯೊ ಪೋಟೊಗಳನ್ನು ಕಳುಹಿಸಿ ನಿಶ್ಚಿತಾರ್ಥ ಕ್ಯಾನಲ್ ಆಗುವುದಕ್ಕೆ ಕಾರಣಕರ್ತನಾಗಿದ್ದ ಎಂಬ ಆರೋಪವಿದೆ.

ಹಲವು ಮಹಿಳೆಯರಿಗೆ ಇದೇ ವಂಚನೆ ಆರೋಪ
ಯುವತಿ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳನ್ನ ಯಾರಿಗಾದರೂ ಮದುವೆ ಮಾಡಿಸಿದರೆ ನಿಮ್ಮ ಕುಟುಂಬವನ್ನು ಸರ್ವನಾಶ ಮಾಡುವೆ. ಪೊಲೀಸರಿಗೆ ಈ ವಿಷಯ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಧಮಕಿ ಹಾಕಿದ್ದಾನೆ. ಮಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾನೆ. ಹಲವು ಮಹಿಳೆಯರಿಗೆ ಇದೇ ವಂಚನೆ ಎಸಗಿರುವುದಾಗಿ ಸಂತ್ರಸ್ತೆ ತಿಳಿಸಿದ್ದಾಳೆ. ಸದ್ಯ ಕೃತ್ಯ ನಡೆದ ಆಧಾರದ ಮೇರೆಗೆ ಆವಲಹಳ್ಳಿ ಪೊಲೀಸ್ ಠಾಣೆಗೆ ಕೆಆರ್ ಪುರ ಪೊಲೀಸರು ಪ್ರಕರಣ ವರ್ಗಾಯಿಸಿದ್ದಾರೆ.












Click it and Unblock the Notifications