ಪತಿಯನ್ನು ಕೊಂದು ರಸ್ತೆ ಅಪಘಾತ ಎಂದು ನಾಟಕವಾಡಿದ್ದ ಪತ್ನಿ ಸಿಕ್ಕಿಬಿದ್ದಿದ್ಹೇಗೆ?
ಬೆಂಗಳೂರು, ಜೂನ್ 21: ಮಗನ ಎದುರೇ ಪ್ರಿಯಕನೊಟ್ಟಿಗೆ ಸೇರಿ ಪತಿಯನ್ನು ಕೊಲೆ ಮಾಡಿ ಕೊನೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸುಳ್ಳುಹೇಳಿದ್ದ ಪತ್ನಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ.
ಅಪಘಾತವೆಂದು ಕತೆ ಕಟ್ಟಿ ಎಲ್ಲರನ್ನು ನಂಬಿಸಿದ್ದಳು, ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬನ್ನೇರುಘಟ್ಟ ರಸ್ತೆ ಬಸವನಪುರ ನಿವಾಸಿ ಕೆ ಪ್ರಶಾಂತ್ ಕೊಲೆಯಾದವರು. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಅಪಘಾತವಲ್ಲ ಇದೊಂದು ಕೊಲೆ ಎನ್ನುವಂತೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ಮಾರಕಾಸ್ತ್ರಗಳನ್ನು ಬೀಸಿದ್ದ ಕಾರಣ ರಕ್ತ ಚಿಮ್ಮಿರುವಂತೆ ಬಿದ್ದಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಕೂಡ ಮೌಖಿಕವಾಗಿ ಇದು ಹಲ್ಲೆಯಿಂದ ನಡೆದಿರುವ ಸಾವು ಎಂದು ಹೇಳಿದ್ದರು.
ಅಲ್ಲೇ ಇರುವ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಓಟಿ ಹೋಗುತ್ತಿರುವುದು ಕಂಡು ಬಂದಿತ್ತು. ಬಳಿಕ ನಂದಿನಿ ಫೋನ್ ಕಾಲ್ ವಿವರಗಳನ್ನು ಪರಿಶೀಲಿಸಿದಾಗ ಅನಿಲ್ ನಂಬರ್ ಬಗ್ಗೆ ಅನುಮಾನ ಬಂದಿತ್ತು. ಹೀಗಾಗಿ ಮತ್ತೊಮ್ಮೆ ಆಕೆಯನ್ನು ಕರೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ.

ಕ್ಯಾಬ್ ಚಾಲಕನಾಗಿದ್ದ ಪ್ರಶಾಂತ್ ಕಾರಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಳ್ಳುತ್ತಿದ್ದ, ಫೋನ್ ಹೋಲ್ಡರ್ ತೆಗೆದುಕೊಳ್ಳುವಂತೆ ನಂದಿನಿ ಸಲಹೆ ನೀಡಿದ್ದಳು ಅದಕ್ಕೆ ಪ್ರಶಾಂತ್ ಒಪ್ಪಿದ್ದ ಜೂನ್ 4ರಂದು ಇಬ್ಬರು ಕಾರಿನಲ್ಲಿ ತೆರಳಿದ್ದರು.
ವಾಪಸ್ ಬರುವಾಗ ತಾವು ಇರುವ ಮಾಹಿತಿ ಎಲ್ಲವನ್ನೂ ಅನಿಲ್‌ಗೆ ಆಕೆ ನೀಡುತ್ತಿದ್ದಳು. ಅವರು ಬಂದ ಬಳಿಕ ಅನಿಲ್ ಸಹಚರರು ಪ್ರಶಾಂತ್ ಮೇಲೆ ಹಲ್ಲೆ ನಡೆಸಿ ಈತನ ಪತ್ನಿ ನಂದಿನಿ, ಪ್ರಿಯಕರ ಅನಿಲ್ ಮತ್ತು ಆತನ ಸಹಚರರು ಕೃತ್ಯ ಎಸಗಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications