'ಪಾಕಿಸ್ತಾನ್ ಜಿಂದಾಬಾದ್' ಎಂದ ಅಮೂಲ್ಯ ಲಿಯೋನ್ ಯಾರು?

ಬೆಂಗಳೂರು, ಫೆಬ್ರವರಿ 20: ಬೆಂಗಳೂರಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿರುವ ಎಡಪಂಥೀಯ ಚಿಂತನೆಯ ಯುವತಿ ಅಮೂಲ್ಯ ಲಿಯೋನಾಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಅಮೂಲ್ಯ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದಾಳೆ.

'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿರುವ ಈಗ ತಾನೇ ಕಾಲೇಜು ವಿದ್ಯಾರ್ಥಿ ಕಾಲೇಜು ವಿದ್ಯಾರ್ಥಿ ಜೀವನಕ್ಕೆ ಕಾಲಿಟ್ಟಿರುವ ಅಮೂಲ್ಯ ಲಿಯೋನಾ (20) ಯಾರು ಎಂಬ ಪ್ರಶ್ನೆ ಎದ್ದಿದೆ. ಎಡಪಂಥೀಯ ಪ್ರತಿಭಟನೆ ಸಮಾವೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಮೂಲ್ಯ ಲಿಯೋನಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶಿವಪುರ ಬಳಿಯ ವಾಜಿಯವಳು.

ಬೆಂಗಳೂರು ಜಯನಗರದ ಎನ್ಎಮ್‌ಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಷ್ ವಿಷಯದಲ್ಲಿ ಪದವಿ ಪಡೆಯುತ್ತಿರುವ ಅಮೂಲ್ಯ ಸದ್ಯ ಬೆಂಗಳೂರಿನಲ್ಲಿ ನೆಲಸಿದ್ದಾಳೆ. ಗೌರಿ ಲಂಕೇಶ್ ಹತ್ಯೆಯಾದಾಗ ಹಾಗೂ ಎಡಪಂಥೀಯ ಕಾರ್ಯಕ್ರಮಗಳಲ್ಲಿ, ಸಿಎಎ ವಿರೋಧಿ ಹೋರಾಟದಲ್ಲಿ ಸ್ವಯಂಪ್ರೇರಿತವಾಗಿ ಕಾಣಿಸಿಕೊಳ್ಳುತ್ತಿದ್ದಳು. ಕನ್ನಡದ ಜೊತೆ ಹಿಂದಿ ಇಂಗ್ಲೀಷ್‌ ಚೆನ್ನಾಗಿ ಮಾತನಾಡುತ್ತಾಳೆ.

ಭಾಷಾಂತರ ಕೆಲಸ ಬಿಟ್ಟಿದ್ದಳು

ಭಾಷಾಂತರ ಕೆಲಸ ಬಿಟ್ಟಿದ್ದಳು

ಭಾಷಾಂತರ ಕೆಲಸ ಮಾಡುವ ಅಮೂಲ್ಯ ಇತ್ತೀಚೆಗೆ ಸಿಎಎ ವಿರೋಧಿ ಹಾಗೂ ಕೇಂದ್ರ ಸರ್ಕಾರ, ಮೋದಿ ವಿರೋಧಿ ಪ್ರತಿಭಟನೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಯುವತಿಯ ದೇಶವಿರೋಧಿ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ. ಭಾಷಾಂತರ ಕೆಲಸ ಬಿಟ್ಟು ಇತ್ತೀಚೆಗೆ ಅಮೂಲ್ಯ ಸಂಪೂರ್ಣ ಎಡಪಂಥೀಯ ವಿಚಾರಧಾರೆಗಳಲ್ಲಿ ತೊಡಗಿಸಿಕೊಂಡಿದ್ದಳು.

ಬಲವಂತದಿಂದ ಮೈಕ್ ಕಸಿದುಕೊಳ್ಳಲಾಯಿತು

ಬಲವಂತದಿಂದ ಮೈಕ್ ಕಸಿದುಕೊಳ್ಳಲಾಯಿತು

ಬೆಂಗಳೂರಿನ ಪ್ರೀಡಂಪಾರ್ಕ್‌ನಲ್ಲಿ ಗುರುವಾರ ಸಂಜೆ ಮುಸ್ಲಿಂ ಸಂಘಟನೆಗಳು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡುತ್ತಿದ್ದ ಅಮೂಲ್ಯನನ್ನು ಬಲವಂತದಿಂದ ಮೈಕ್ ಕಸಿದುಕೊಳ್ಳಲಾಯಿತು. ಈ ವೇಳೆ ಸ್ಥಳದಲ್ಲಿ‌ ನುಕು ನುಗ್ಗಲು‌ ಅರಂಭವಾಯಿತು. ತದ ನಂತರ ಪೊಲೀಸರು ಮಧ್ಯಪ್ರವೇಶಿಸಿ ಉದ್ವಿಗ್ನ ವಾತಾವಾರಣಕೆಯನ್ನು ವಶಕ್ಕೆ ಪಡೆದುಕೊಂಡರು. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ವೇದಿಕೆಯಿಂದ ಕೆಳಗಿಳಿಸಿದರು

ವೇದಿಕೆಯಿಂದ ಕೆಳಗಿಳಿಸಿದರು

ಕಾರ್ಯಕ್ರಮದಲ್ಲಿ ಯುವತಿ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿಕೆ ನೀಡುತ್ತಿದ್ದಂತೆ ವೇದಿಕೆಯಲ್ಲಿದ್ದ ಇತರ ಮುಸ್ಲಿಂ ಮುಖಂಡರು ತೀವ್ರ ಕೆಂಡ ಕಾರಿದರು. ಯುವತಿಯನ್ನು ತರಾಟೆಗೆ ತೆಗೆದುಕೊಂಡು ವೇದಿಕೆಯಿಂದ ಕೆಳಗಿಳಿಸಿದರು. ನಾವು ಅಮೂಲ್ಯಳನ್ನು ವೇದಿಕೆಗೆ ಕರೆದಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ

ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ

ಇನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಮೂವರು ಯುವಕರು ಘೋಷಣೆ ಕೂಗಿದ್ದರು. ಕೆಎಲ್‌ಇ ಇಂಜನಿಯರಿಂಗ್ ಕಾಲೇಜಿನ ಮೂವರು ಮುಸ್ಲಿಂ ಯುವಕರು ಪಾಕ್ ಪರ ಘೋಷಣೆ ಕೂಗಿದ್ದರು. ಆ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+