Bengaluru Traffic: ಬೆಂಗಳೂರಿನ ಈ ರಸ್ತೆ 60 ದಿನ ಬಂದ್, ಪರ್ಯಾಯ ಮಾರ್ಗಗಳು

ಬೆಂಗಳೂರು, ನವೆಂಬರ್ 05: ಉದ್ಯಾನ ನಗರಿ ಬೆಂಗಳೂರಿನ ರಸ್ತೆಗಳಲ್ಲಿ ಆಗಾಗ ಸಂಚಾರ ಮಾರ್ಗ ಬದಲಾವಣೆ ಮಾಡಲಾಗುತ್ತದೆ. ಇದು ಕೆಲವು ತಾಸು ಅಥವ ದಿನಗಳಿಗೆ ಮಾತ್ರ ಸೀಮಿತವಾಗುತ್ತದೆ. ಆಗ ಪರ್ಯಾಯ ಮಾರ್ಗಗಳನ್ನು ಬಳಕೆ ಮಾಡಲು ವಾಹನ ಸವಾರರಿಗೆ ಸೂಚನೆ ನೀಡಲಾಗುತ್ತದೆ. ಈಗ ನಗರದ ಸಂಚಾರಿ ಪೊಲೀಸರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ರಸ್ತೆಯೊಂದನ್ನು 60 ದಿನಗಳ ಕಾಲ ಬಂದ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಕುಲದೀಪ್ ಕುಮಾರ್ ಆರ್. ಜೈನ್, ಉಪ ಪೊಲೀಸ್‌ ಆಯುಕ್ತರು, ಸಂಚಾರ ಪೂರ್ವ ವಿಭಾಗ ಬೆಂಗಳೂರು ನಗರ ಮಾಹಿತಿ ನೀಡಿದ್ದಾರೆ. ರಸ್ತೆ ಬಂದ್ ಆಗುವ ಹಿನ್ನಲೆಯಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗ ಬಳಕೆ ಮಾಡಬೇಕು ಎಂದು ಸೂಚಿಸಿದ್ದಾರೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದ್ದಾರೆ.

White Topping Work Bengaluru Traffic Police Issues Order On Traffic Diversion

ಯಾವ ರಸ್ತೆ ಬಂದ್ ಆಗಲಿದೆ?: ಹೆಚ್ಎಎಲ್ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಬೀಸನಹಳ್ಳಿ ಸಕ್ರಾ ಆಸ್ಪತ್ರೆ ಮುಖ್ಯರಸ್ತೆ (ಮಿಂತ್ರಾ ಅಪಾರ್ಟ್‌ಮೆಂಟ್ ಮುಂಭಾಗದ ರಸ್ತೆಯಿಂದ ಬೆಳ್ಳಂದೂರು ಕೋಡಿವರೆಗೆ) ಬಿಬಿಎಂಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಆದ್ದರಿಂದ ನವೆಂಬರ್ 5 ರಿಂದ 60 ದಿನಗಳ ಕಾಲ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿರುತ್ತದೆ ಎಂದು ಹೇಳಿದ್ದಾರೆ. ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆಗಳು, ಪರ್ಯಾಯ ರಸ್ತೆಗಳ ವಿವರಗಳನ್ನು ನೀಡಲಾಗಿದೆ.

ವಾಹನ ಸಂಚಾರವನ್ನು ದೇವರಬೀಸನಹಳ್ಳಿ ಸಕಾ ಆಸ್ಪತ್ರೆ ಮುಖ್ಯರಸ್ತೆ (ಮಿಂತ್ರಾ ಅಪಾರ್ಟ್‌ಮೆಂಟ್ ಮುಂಭಾಗದ ರಸ್ತೆಯಿಂದ ಬೆಳಂದೂರು ಕೋಡಿವರೆಗೆ) ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಸಂಚಾರಕ್ಕೆ ಪರ್ಯಾಯ ಮಾರ್ಗ

* ಯಮಲೂರು ಕಡೆಯಿಂದ ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಗೆ ಸಂಚರಿಸುವವರು ಹಳೆ ವಿಮಾನ ನಿಲ್ದಾಣ ರಸ್ತೆ-ಯಮಲೂರು ಜಂಕ್ಷನ್-ಮಾರತ್ತಹಳ್ಳಿ ಬ್ರಿಡ್ಜ್-ಕಾಡುಬೀಸನಹಳ್ಳಿ ಬ್ರಿಡ್ಜ್- ಹೊರವರ್ತುಲ ರಸ್ತೆ ಮಾರ್ಗವಾಗಿ ದೇವರಬೀಸನಹಳ್ಳಿ ಮತ್ತು ಮತ್ತು ಬೆಳ್ಳಂದೂರು ಕಡೆಗೆ
ಸಂಚರಿಸಬಹುದಾಗಿರುತ್ತದೆ.

* ಯಮಲೂರು ಕಡೆಯಿಂದ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸುವವರು ಹಳೆ ವಿಮಾನ ನಿಲ್ದಾಣ ರಸ್ತೆ ಮಾರ್ಗವಾಗಿ ಯಮಲೂರು ಜಂಕ್ಷನ್‌-ಯಮಲೂರು ವಿಲೇಜ್ ಮಾರ್ಗವಾಗಿ ಯಮಲೂರು ಕೋಡಿಯಲ್ಲಿ ಎಡ ತಿರುವು ಪಡೆದು ಕರಿಯಮ್ಮನ ಅಗ್ರಹಾರ ಮೂಲಕ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸಬಹುದಾಗಿರುತ್ತದೆ.

* ಯಮಲೂರು ಕಡೆಯಿಂದ ಹೊರವರ್ತುಲ ರಸ್ತೆ ಕಡೆಗೆ ಸಂಚರಿಸುವವರು ಹಳೆ ವಿಮಾನ ನಿಲ್ದಾಣ ರಸ್ತೆ- ಯಮಲೂರು ಜಂಕ್ಷನ್ - ಯಮಲೂರು ವಿಲೇಜ್ ಮೂಲಕ ಯಮಲೂರು ಕೋಡಿ ಬೆಳ್ಳಂದೂರು ಕೋಡಿ ಬಲ ತಿರುವು ಪಡೆದು ಬೆಳ್ಳಂದೂರು ವಿಲೇಜ್ ಮಾರ್ಗವಾಗಿ ಹೊರವರ್ತುಲ ರಸ್ತೆ ಕಡೆಗೆ ಸಂಚರಿಸಬಹುದಾಗಿರುತ್ತದೆ.

* ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಯಿಂದ ನಗರದ ಕಡೆಗೆ ಸಂಚರಿಸುವವರು ಹೊರವರ್ತುಲ ರಸ್ತೆ ಕಾಡುಬೀಸನಹಳ್ಳಿ ಬ್ರಿಡ್ಜ್ ಮಾರತ್ತಹಳ್ಳಿ ಬ್ರಿಡ್ಜ್ ಮೇಲೆ ಎಡ ತಿರುವು ಪಡೆದು ಯಮಲೂರು ಜಂಕ್ಷನ್- ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ನಗರದ ಕಡೆಗೆ ಸಂಚರಿಸಬಹುದಾಗಿರುತ್ತದೆ.

* ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಯಿಂದ ನಗರದ ಕಡೆಗೆ ಸಂಚರಿಸುವವರು ಕರಿಯಮ್ಮನ ಅಗ್ರಹಾರ - ಯಮಲೂರು ಕೋಡಿಯಲ್ಲಿ ಬಲ ತಿರುವು ಪಡೆದು ಯಮಲೂರು ವಿಲೇಜ್ ಮಾರ್ಗವಾಗಿ ಯಮಲೂರು ಜಂಕ್ಷನ್ - ಹಳೆ ವಿಮಾನ ನಿಲ್ದಾಣ ರಸ್ತೆ ಮಾರ್ಗವಾಗಿ ನಗರದ ಕಡೆಗೆ
ಸಂಚರಿಸಬಹುದಾಗಿರುತ್ತದೆ.

* ಹೊರವರ್ತುಲ ರಸ್ತೆ ಕಡೆಯಿಂದ ನಗರದ ಕಡೆಗೆ ಸಂಚರಿಸುವವರು ಬೆಳ್ಳಂದೂರು ವಿಲೇಜ್- ಬೆಳ್ಳಂದೂರು ಕೋಡಿ ಎಡ ತಿರುವು ಪಡೆದು ಯಮಲೂರು ಕೋಡಿ - ಯಮಲೂರು ವಿಲೇಜ್ ಮೂಲಕ ಯಮಲೂರು ಜಂಕ್ಷನ್ ಬಳಿ ಎಡ ತಿರುವು ಪಡೆದು ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ನಗರದ ಕಡೆಗೆ ಸಂಚರಿಸಬಹುದಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+